ಮೈಸೂರು,ಜುಲೈ,2,2024 (www.justkannada.in): ಮೈಸೂರು ಜಿಲ್ಲೆಯ ವರಕೋಡು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿನ ಮೂಡಲ ಹುಂಡಿಯ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಹುಲಿಯ ಪತ್ತೆಗಾಗಿ ಅರಣ್ಯ ಸಿಬ್ಬಂದಿಗಳ ಕಾರ್ಯಾಚರಣೆ ಮುಂದುವರೆದಿದೆ.
ಹುಲಿ ಪತ್ತೆಗಾಗಿ ಕಳೆದ ಮೂರು ದಿನಗಳಿಂದಲೂ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದು ಆದರೆ ಹುಲಿಯ ಸುಳಿವು ಸಿಕ್ಕಿಲ್ಲ. ಕ್ಯಾಮರಾ ಟ್ರ್ಯಾಪ್, ಡ್ರೋಣ್ ಕ್ಯಾಮರಾಗಳಿಗೂ ಹುಲಿಯ ಸುಳಿವು ಸೆರೆ ಸಿಕ್ಕಿಲ್ಲ. ಹೀಗಾಗಿ ಇಂದೂ ಸಹ ಹುಲಿ ಪತ್ತೆಗೆ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ಮುಂದುವರಿದಿದೆ.
ಚಿರತೆ ಕಾರ್ಯಾಚರಣೆ ಪಡೆ ಮತ್ತು ಮೈಸೂರು ವಲಯ ಸಿಬ್ಬಂದಿಗಳು ಶೋಧಕಾರ್ಯ ನಡೆಸುತ್ತಿದ್ದು ಹುಲಿ ಸೆರೆ ಕಾರ್ಯಾಚರಣೆ ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಮುರಾರ್ಜಿ ವಸತಿ ಶಾಲೆ ಹಿಂಭಾಗ ಸುಮಾರು 8 ಸ್ಥಳಗಳಲ್ಲಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು ಹೇಗಾದರೂ ಮಾಡಿ ಹುಲಿ ಸೆರೆ ಹಿಡಿಯಲೇ ಬೇಕು ಎಂದು ಅರಣ್ಯ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
Key words: mysore, tiger, Operation, forest, department