ಮೈಸೂರು,ಆ,13,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು ನಿನ್ನೆ ಮೈಸೂರಿನಲ್ಲಿ 544 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮಧ್ಯೆ ಸೋಂಕಿತರಿಗೆ ಚಿಕಿತ್ಸೆ ನೀಡುವ ಉದ್ಧೇಶದಿಂದ ಮೈಸೂರು ಟ್ರಾಮಾ ಕೇರ್ ಸೆಂಟರ್ ಅನ್ನ ಇದೀಗ ಸಂಪೂರ್ಣ ಕೋವಿಡ್ 19 ಆಸ್ಪತ್ರೆಯಾಗಿ ಪರಿವರ್ತನೆ ಮಾಡಲಾಗುತ್ತಿದೆ.
ಕೆ. ಆರ್. ಆಸ್ಪತ್ರೆಯನ್ನು ಕೊರೊನಾ ಮುಕ್ತ ಆಸ್ಪತ್ರೆಯನ್ನಾಗಿ ಮಾಡುವ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಕೋವಿಡ್ 19 ಆಸ್ಪತ್ರೆ ನಿರ್ಮಾಣ ಮಾಡಬೇಕಾಗಿದ್ದು ಹೀಗಾಗಿ ಕೆಆರ್ ಎಸ್ ರಸ್ತೆಯಲ್ಲಿರುವ ಟ್ರಾಮಾ ಕೇರ್ ಸೆಂಟರ್ ಅನ್ನ ಕೋವಿಡ್ 19 ಆಸ್ಪತ್ರೆಯಾಗಿ ಪರಿವರ್ತನೆ ಮಾಡಲಾಗುತ್ತಿದೆ.
ಟ್ರಾಮ್ ಕೇರ್ ಸೆಂಟರ್ ಕಟ್ಟಡ250 ಹಾಸಿಗೆ ಸಾಮರ್ಥ್ಯ ಹೊಂದಿದ್ದು ಕೆಲವೇ ದಿನಗಳಲ್ಲಿ ಕೊರೊನಾ ಸೋಂಕೀತರ ಸೇವೆಗೆ ಕಟ್ಟಡ ಲಭ್ಯವಾಗಲಿದೆ. ಕೋವಿಡ್ ಆಸ್ಪತ್ರೆಯನ್ನಾಗಿಸುವ ಕೆಲಸ ಅಂತಿಮ ಹಂತದ ಸಿದ್ಧತೆ ಭರದಿಂದ ಸಾಗುತ್ತಿದೆ.
Key words: Mysore -Trauma Care Center- transformed – complete- covid-19 hospital.