ಮೈಸೂರು ವಿವಿ ಇಲ್ಲದಿದ್ದರೆ ನಾರಾಯಣ ಮೂರ್ತಿ ಇನ್ಫೋಸಿಸ್ ಕಟ್ಟುತ್ತಿರಲಿಲ್ಲ : ಸುಧಾಮೂರ್ತಿ.

 

ಮೈಸೂರು, ಜು.27, 2021 : (www.justkannada.in news ) ಮೈಸೂರು ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆ. 105 ವರ್ಷ ಪೂರೈಸಿದ ಮೈಸೂರು ವಿಶ್ವವಿದ್ಯಾನಿಲಯ. ವಿವಿಯ ಸಂಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ. ಕುಲಪತಿ ಹೇಮಂತ್ ಕುಮಾರ್ ರಿಂದ ಪುಷ್ಪಾರ್ಚನೆ.

ವರ್ಚುವಲ್ ಲೈವ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದ ಇನ್ಫೋಸಿಸ್‌ನ ಸುಧಾಮೂರ್ತಿ. ಮೈಸೂರು ವಿವಿಯ ಬಗ್ಗೆ ಇನ್ಫೋಸಿಸ್‌ನ ಸುಧಾಮೂರ್ತಿ ಮಾತು. ಆನ್ಲೈನ್ ಮೂಲಕ ನಾಲ್ವಡಿಯವರ ಗುಣಗಾನ ಮಾಡಿದ ಸುಧಾಮೂರ್ತಿ.

ಮೈಸೂರು ವಿವಿಯ ಕಾರ್ಯವೈಖರಿಗೆ ಸುಧಾಮೂರ್ತಿ ಮೆಚ್ಚುಗೆ. ಕನ್ನಡದ ಉಳಿವಿಗೆ ಶ್ರಮಿಸಿದವರು ಮೈಸೂರು ಮಹಾರಾಜರು. ಅದರಂತೆಯೇ ವಿವಿ ಸ್ಥಾಪಿಸಿ ಅದನ್ನ ಬೆಳೆಸಿ, ನಮಗೆಲ್ಲಾ ದಾರಿ ದೀಪವಾದವರು ಮಹಾರಾಜರು. ನಮಗೂ ಮೈಸೂರು ವಿವಿ ಡಾಕ್ಟರೇಟ್ ನೀಡಿ ಗೌರವಿಸಿದೆ. ನಮ್ಮ ಮೈಸೂರು ವಿವಿ ಬಹಳಷ್ಟು ಜನರಿಗೆ ದಾರಿ ದೀಪವಾಗಿದೆ.

ಮೈಸೂರು ವಿವಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ಆತ್ಮವಿಶ್ವಾಸ ತುಂಬುವ ಕೇಂದ್ರವಾಗಿದೆ. ಉತ್ತಮವಾದ ವ್ಯಕ್ತಿತ್ವ ರೂಪಿಸುವ ಕೆಲಸವನ್ನ ಮೈಸೂರು ವಿವಿ ಮಾಡುತ್ತಿದೆ. ಮೈಸೂರು ವಿವಿ ಇಲ್ಲದಿದ್ದರೆ ನಾರಾಯಣ ಮೂರ್ತಿಯವರು ಇನ್ಫೋಸಿಸ್ ಕಟ್ಟುತ್ತಿರಲಿಲ್ಲ. ಮೈಸೂರು ವಿವಿ ನಮಗೆ ಧೈರ್ಯ ಕೊಟ್ಟಿತು. ನಾನು ಒಂದು ಸಣ್ಣ ಗ್ರಾಮದಿಂದ ಬಂದವಳು.

ನಾನು ಉತ್ತರ ಕರ್ನಾಟಕದವಳು, ನಮ್ಮಂತವರಿಗೆಲ್ಲಾ ಜ್ಞಾನ ತುಂಬುವ ಕೇಂದ್ರಗಳೇ ವಿವಿಗಳು. ನಾನು ಉತ್ತರ ಕರ್ನಾಟಕದಲ್ಲೇ ವ್ಯಾಸಂಗ ಮಾಡಿರಬಹುದು. ಆದರೆ ಮೈಸೂರು ವಿವಿಯ ಸಂಪನ್ಮೂಲ ವ್ಯಕ್ತಿಗಳನ್ನ ಅನುಸರಿಸುವ ಪ್ರಯತ್ನ ಮಾಡಿದ್ದು ಬಹಳಷ್ಟಿದೆ. ಇದೆಲ್ಲವೂ ನಮ್ಮ ಸಾಧನೆಗೆ ಸಹಕಾರವಾಗುತ್ತದೆ. ಆನ್ಲೈನ್ ಮೂಲಕ ಸುಧಾಮೂರ್ತಿ ಹೇಳಿಕೆ. ವಿವಿಯ ಕ್ರಾಫರ್ಡ್ ಭವನದಲ್ಲಿ ನಡೆಯುತ್ತಿರುವ ಕಾರ್ಯಕ್ರಮ.

ಸಂಸ್ಥಾಪನಾ ದಿನಾಚರಣೆಯಲ್ಲಿ ಕುಲಸಚಿವ ಶಿವಪ್ಪ, ಕೇಂದ್ರೀಯ ಕೃಷಿ ವಿವಿಯ ಅಧ್ಯಕ್ಷ ಅಯ್ಯಪ್ಪನ್ ಸೇರಿದಂತೆ ಇನ್ನಿತರರು ಭಾಗಿ.

ENGLISH SUMMARY…

“Narayana Murthy wouldn’t have built Infosys in the absence of University of Mysore”: Sudhamurthy
Mysuru, July 27, 2021 (www.justkannada.in): “The Maharaja of Mysore strived for the protection and development of Kannada. The Wodeyar kings are the reason for the establishment of the University of Mysore. The University has honoured me with a doctorate. The University of Mysore has become a ray of hope and guide for lakhs of students,” opined Sudhamurthy.
She participated in the virtual program organized by the University of Mysore on the occasion of the ‘Foundation Day’ held on completion of 105 years of its existence. “If the University of Mysore wasn’t there Narayana Murthy wouldn’t have established Infosys. It is the University that gave us strength and courage. I hail from a small village in North Karnataka. It is such universities that provide us knowledge. Though I studied in North Karnataka, I have followed and learned several resource persons from the University of Mysore. It has helped us a lot in our achievement,” she said.
Shivappa, Registrar, University of Mysore, Ayyappan, President, Central Agricultural University, and others took part in the virtual program.
Keywords: University of Mysore/ Foundation Day/ virtual program/ online/ Sudhamurthy/ Infosys

key words : mysore-uiniversity-foundation-day-infosys-sudha.murthy-vc-hemanth.kumar