ಮೈಸೂರು, ಜುಲೈ 19, 2020 (www.justkannada.in):
ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿ ಹಾಗೂ ಪರೀಕ್ಷೆ ಪುನರಾರಂಭ ಹಿನ್ನೆಲೆಯಲ್ಲಿ ಮೈಸೂರು ವಿವಿ ವಿದ್ಯಾರ್ಥಿಗಳಿಂದ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ಉನ್ನತ ಶಿಕ್ಷಣ ಸಚಿವರಿಗೆ ಹಾಗೂ ವಿವಿ ಉಪಕುಲಪತಿಗೆ ಪತ್ರ ಬರೆಯಲಾಗಿದೆ.
ಆಗಸ್ಟ್ ಹಾಗೂ ಸೆಪ್ಟೆಂಬರ್ ನಲ್ಲಿ ತರಗತಿ ಹಾಗೂ ಪರೀಕ್ಷೆ ನಡೆಸಲು ನಿರ್ಧರಿಸಿರುವ ಸರ್ಕಾರ ಹಾಗೂ ವಿವಿ ಸರ್ಕಾರ ಹಾಗೂ ವಿವಿ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ವಿದ್ಯಾರ್ಥಿಗಳ ಮನವಿ ಮಾಡಲಾಗಿದೆ.
ತರಗತಿ ಪುನರಾರಂಭ ಕುರಿತು ಉಪಕುಲಪತಿಗಳ ಜೊತೆ ನೆನ್ನೆ ನಡೆದ ಆನ್ಲೈನ್ ಚರ್ಚೆಯು ವಿದ್ಯಾರ್ಥಿ ಸಮುದಾಯಕ್ಕೆ ತೃಪ್ತಿ ತಂದಿಲ್ಲ. ಆಗಸ್ಟ್ 12 ರವರೆಗೆ ಅಂತರಾಜ್ಯ ಹಾಗೂ ಸ್ಥಳೀಯ ರೈಲ್ವೆ ಸಂಚಾರ ಸ್ಥಗಿತವಾಗಿರುವ ಹಿನ್ನೆಲೆ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಗೆ ಬರಲು ತೊಂದರೆಯಾಗುತ್ತದೆ.
ಚರ್ಚೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆ ಕುರಿತು ಯಾವುದೇ ಚರ್ಚೆಯಾಗಿಲ್ಲ. ವಿದ್ಯಾರ್ಥಿ ನಿಲಯದಲ್ಲಿ ಶೊಚಾಲಯಗಳ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳಿಗೆ ಆರೋಗ್ಯಕರ ಮತ್ತು ಶುಚಿಯಾದ ಆಹಾರ ಪೂರೈಕೆ ಬಹುದೊಡ್ಡ ಸವಾಲಾಗಿದೆ. ಕೋವಿಡ್ 19 ಪರೀಕ್ಷಾ ವಿಧಾನವು ಸಂಪೂರ್ಣವಾಗಿ ಖಾತರಿಯಾಗಿಲ್ಲ ಮತ್ತು ಹೆಚ್ಚಿನ ಪ್ರಕರಣಗಳು ಲಕ್ಷಣರಹಿತವಾಗಿವೆ. ಮೊದಲಿಗೆ ನಕಾರಾತ್ಮಕ ವರದಿ ಬಂದು ನಂತರ ಸೋಂಕು ಕಂಡು ಬಂದರೆ ಅದು ಹರಡುವ ಸಾದ್ಯತೆಯಿರುತ್ತದೆ. ಆದ್ದರಿಂದ ಸರ್ಕಾರ ಹಾಗೂ ವಿವಿ ತೆಗೆದುಕೊಂಡಿರುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.