ಡಾ.ಗೋವಿಂದರಾಜನ್ ಪದ್ಮನಾಭನ್, ಪ್ರಶಾಂತ್ ಪ್ರಕಾಶ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ.

ಮೈಸೂರು,ಸೆಪ್ಟಂಬರ್,7,2021(www.justkannada.in):  ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವದಲ್ಲಿ ಜೀವರಾಸಾಯನಶಾಸಜ್ಞ, ಬೆಂಗಳೂರಿನ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ ನಿವೃತ್ತ ಪ್ರಾಧ್ಯಾಪಕರಾದ ಡಾ.ಗೋವಿಂದರಾಜನ್ ಪದ್ಮನಾಭನ್ ಹಾಗೂ ವಿಷನ್ ಗ್ರೂಪ್ ಆನ್ ಸ್ಟಾರ್ಟ್ ಅಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್‌ ಗೆ ಮಂಗಳವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ನೀಡಿ ಅಭಿನಂದಿಸಿದರು.

ಕ್ರಾಫರ್ಡ್ ಹಾಲ್ ಸಭಾಂಗಣದಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವದಲ್ಲಿ ಇವರಿಬ್ಬರಿಗೂ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಡಾ.ಗೋವಿಂದರಾಜನ್ ಪದ್ಮನಾಭನ್ ಅವರು ತಮಿಳುನಾಡು ಮೂಲದರಾದರೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅಕ್ಸೆಲ್ ಪಾರ್ಟನರ್‌ನ ಸಂಸ್ಥಾಪಕರಾದ  ಪ್ರಶಾಂತ್ ಪ್ರಕಾಶ್ ಅವರು ಸಾಕಷ್ಟು ಸಾಮಾಜಿಕ ಕೆಲಸದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದು, ಕೋವಿಡ್ ಸಮಯದಲ್ಲಿ ಹಾಡಿಗಳ ನಿವಾಸಿಗಳಿಗೂ ಉಚಿತ ಲಸಿಕೆ ಹಾಕಿಸಲು ಶ್ರಮಿಸಿದ್ದರು.

ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ್, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ‌ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ, ಕುಲಸಚಿವ (ಪರೀಕ್ಷಾಂಗ) ಪ್ರೊ.ಎ.ಪಿ.ಜ್ಞಾನಪ್ರಕಾಶ್ ಇದ್ದರು.

ENGLISH SUMMARY…

Dr. Govindarajan Padmanabhan and Prashanth Prakash accorded Doctorates by UoM
Mysuru, September 7, 2021 (www.justkannada.in): Dr. Govidnarajan Padmanabhan, Professor (Retd.), Indian Institute of Science, Bengaluru, and Prashanth Prakash, Chairman, Vision Group On startup were accorded doctorates at the University of Mysore’s 101st Convocation held at the Crawford Hallin Mysuru today. Hon’ble Governor of Karnataka Thawar Chand Gehlot accorded the doctorates to them.
Dr. Govindarajan Padmanabhan, who hails from Tamil Nadu, has served at the Indian Institute of Science, Bengaluru, as a Director. Axel Partners Founder Prashanth Prakash has identified himself in a lot of social works. He had strived to provide free COVID vaccination to the tribals in remote hamlets during the pandemic period.
Higher Education Minister Dr. C.N. Aswhathanarayan, Prof. G. Hemanth Kumar, Vice-Chancellor, University of Mysore, Prof. R. Shivappa, Registrar (Exams), Prof. A.P. Jnanaprkash, and others were present.
Keywords: University of Mysore/ 101st Convocation/ Doctorates

Key words: mysore –university-101st  convocation- Dr. Govindarajan Padmanabhan – Prashanth Prakash-honorary -doctorates.