ಮೈಸೂರು,ಜನವರಿ,9,2025 (www.justkannada.in): ಸಾವಯವ ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಹೊಸ ಆವಿಷ್ಕಾರಗಳನ್ನು ಮಾಡುವಲ್ಲಿ ಸಹಕಾರಿ ಎಂದು ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಪ್ರೊ.ಎನ್. ಕೆ. ಲೋಕನಾಥ್ ಹೇಳಿದರು.
ರಾಷ್ಟ್ರೀಯ ಉಚ್ಚತರ್ ಶಿಕ್ಷಾ ಅಭಿಯಾನದಿಂದ ಅನುದಾನಿತ ಮಾಳವೀಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಸಾವಯವ ರಸಾಯನಶಾಸ್ತ್ರದಲ್ಲಿನ ಇತ್ತೀಚಿನ ಪ್ರಗತಿಗಳು ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಮೈಸೂರು ವಿವಿ ಕುಲಪತಿ ಪ್ರೊ.ಎನ್. ಕೆ. ಲೋಕನಾಥ್ ನೆರವೇರಿಸಿದರು. ಸಾವಯವ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಸಪ್ಪ ಅಧ್ಯಕ್ಷತೆ ವಹಿಸಿದ್ದರು.
ನಂತರ ಮೈಸೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಕೆ. ಎಸ್. ರಂಗಪ್ಪ ಮಾತನಾಡಿ, ಕ್ಯಾನ್ಸರ್ ವಿರುದ್ಧದ ಔಷಧ ಅಭಿವೃದ್ಧಿಯಲ್ಲಿ ನಡೆಯುತ್ತಿರುವ ಮುಂದುವರಿದ ಸಂಶೋಧನೆಗಳ ಒಳನೋಟವನ್ನು ನೀಡಿದರು.
ಜೆಎಸ್‌ಎಸ್ ವಿಶ್ವವಿದ್ಯಾಲಯದ ಪ್ರೊ.ವಿ.ಎಂ. ಸುಬ್ಬರಾವ್ ಅವರು ಕ್ಯಾನ್ಸರ್ ಕೋಶಗಳನ್ನು ಪ್ರಯೋಗಶಾಲೆಯಲ್ಲಿ ಬೆಳವಣಿಗೆ ಮತ್ತು ಔಷಧ ಅಭಿವೃದ್ಧಿ ಕುರಿತು ಮಾತನಾಡಿದರು.
ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಜರ್ನಲ್ ಸಂಪಾದಕ ಮತ್ತು ಹೈದ್ರಾಬಾದ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಪ್ರೊ. ಅಖಿಲಾ ಕುಮಾರ್‌ಸಾಹೂ ಅವರು ರಸಾಯನಶಾಸ್ತ್ರ ಜಗತ್ತಿಗೆ ಹೊಸ ರಿವರ್ಸ್ ಉಂಪೊಲುಂಗ್ ರಸಾಯನಶಾಸ್ತ್ರದ ಬಗ್ಗೆ ಮಾತನಾಡಿದರು.
ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ. ಗಂಗಾ ಪೆರಿಯಸಾಮಿ ಅವರು ಕಂಪ್ಯೂಟರ್ ಆಧಾರಿತ ರಸಾಯನ ವಿಜ್ಞಾನ ಮತ್ತುಕರೋನಾ ವಿರೋಧಿ ಔಷಧ ಅಭಿವೃದ್ಧಿ ಕುರಿತು ಉಪನ್ಯಾಸ ನೀಡಿದರು. ಉಪನ್ಯಾಸಗಳ ಸರಣಿಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಡಾ. ಆರ್. ಶೋಬಿತ್ ಸಮ್ಮೇಳನದ 50 ಶಿಬಿರಾರ್ಥಿಗಳಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ವಿತರಿಸಿದರು. 100 ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
Key words: mysore university, organic chemistry – N. K. Loknath, Pro.KS Rangappa