ಮೈಸೂರು,ಏಪ್ರಿಲ್,17,2025 (www.justkannada.in): ಮೈಸೂರು ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆ ಪ್ರಾಚ್ಯವಿದ್ಯಾ ಸಂಶೋಧನಾಲಯವು ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶಾರದಾ ಪೀಠ ಶೃಂಗೇರಿ ಸಂಸ್ಥೆಯೊಂದಿಗೆ ಅಪ್ರಕಟಿತ ಹಸ್ತಪ್ರತಿಗಳಲ್ಲಿರುವ ಕೃತಿಗಳ ಕುರಿತಾದ ಒಂದು ಒಡಂಬಡಿಕೆ ಸಹಿ ಮಾಡಿತು.
ಇದರ ಅಡಿಯಲ್ಲಿ ವಿದ್ವಾಂಸರ ಮೂಲಕ ಅಪ್ರಕಟಿತದವಾದ ಅಂದಾಜು 13000 ಹಸ್ತಪ್ರತಿಗಳಲ್ಲಿರುವ ಕೃತಿಗಳ ವರ್ಣನಾತ್ಮಕ ಸೂಚಿಯನ್ನು (Manuscripts Descriptive Catalogue) ಮಾಡಲು, ಆಯ್ದ ಕೃತಿಗಳನ್ನು ಪುಸ್ತಕರೂಪದಲ್ಲಿ ಮುದ್ರಿಸಲು ಮತ್ತು Digitization of catalogues in the form of searchable database ಮಾಡಲು ನಿಶ್ಚಯಮಾಡಲಾಗಿದೆ.
ಈ ಒಡಂಬಡಿಕೆಯ ರೂ.92,40,000/- ಗಳ ಈ ಯೋಜನೆಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವೆ ಎಂ.ಕೆ.ಸವಿತಾ ಅವರು ಹಾಗೂ ಶ್ರೀ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಪಿ.ಎ.ಮುರಳಿ ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು, ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ. ಡಿ.ಪಿ. ಮಧುಸೂಧನಾಚಾರ್ಯ, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ( ಮೌಲ್ಯಮಾಪನ) ಪ್ರೊ ನಾಗರಾಜ್ ಅವರು ಹಾಗೂ ಉಭಯ ಸಂಸ್ಥೆಗಳ ವಿದ್ವಾಂಸರು ಉಪಸ್ಥಿತರಿದ್ದರು.
Key words: University of Mysore, Agreement, signed, unpublished, manuscripts