ಪ್ರಥಮ ವರ್ಷ ಪ್ರವೇಶಾತಿಗೆ ದಿನಾಂಕ ಪ್ರಕಟಿಸಿದ ಮೈಸೂರು ವಿವಿ.

ಮೈಸೂರು,ಜನವರಿ,7,2022(www.justkannada.in):  2021- 22ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿ ಪಡೆದುಕೊಳ್ಳಲು ಮೈಸೂರು ವಿಶ್ವವಿದ್ಯಾನಿಲಯ ದಿನಾಂಕವನ್ನು ಪ್ರಕಟಿಸಿದೆ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿನ ವಿವಿಧ ಅಧ್ಯಯನ ವಿಭಾಗಗಳು, ಮಾನಸಗಂಗೋತ್ರಿ ಮೈಸೂರು, ಸರ್.ಎಂ.ವಿಶ್ವೇಶ್ವರಯ್ಯ ಸ್ವಾತಕೋತ್ತರ ಕೇಂದ್ರ, ತೂಬಿನಕೆರೆ, ಮಂಡ್ಯ. ಸ್ನಾತಕೋತ್ತರ ಕೇಂದ್ರ, ಹೇಮಗಂಗೋತ್ರಿ ಹಾಸನ ಮತ್ತು ಡಾ.ಬಿ.ಆರ್. ಅಂಬೇಡ್ಕರ್, ಸ್ನಾಕೋತ್ತರ ಕೇಂದ್ರ ಚಾಮರಾಜನಗರ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ನೇರ ಆಡಳಿತಕ್ಕೊಳಪಡುವ ಮತ್ತು ಮಾನ್ಯತೆ ಪಡೆದಿರುವ ಸರಕಾರಿ, ಖಾಸಗಿ ಮತ್ತು ಸ್ವಾಯತ್ತ ಕಾಲೇಜುಗಳಲ್ಲಿ ವಿಶ್ವವಿದ್ಯಾಲಯ ನಡೆಸಿರುವ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದಿರುವಂತಹ ವಿದ್ಯಾರ್ಥಿಗಳು ಈ ಕೆಳಕಂಡ ದಿನಾಂಕದಂದು ಪ್ರವೇಶಾತಿ ಪಡೆದುಕೊಳ್ಳಬಹುದು ಎಂದು ಕುಲಸಚಿವರು ತಿಳಿಸಿದ್ದಾರೆ.

ಕ್ರೂಢೀಕರಿಸಿದ ಪಟ್ಟಿ (ಕನ್ಸೋಲಿಡೇಟೆಡ್ ಲೀಸ್ಟ್) ಯನ್ನು ಜ.10ರಂದು ಮಧ್ಯಾಹ್ನ 3 ಗಂಟೆ ಒಳಗೆ ಪ್ರಕಟಿಸಲಾಗುತ್ತದೆ. ತಿದ್ದುಪಡಿ ಪಟ್ಟಿ ಜ.11ರಂದು ಮಧ್ಯಾಹ್ನ 12 ಗಂಟೆ ಒಳಗೆ ಪ್ರಕಟವಾಗಲಿದೆ. ಆಯ್ಕೆಯಾದ ಪಟ್ಟಿ ಜ.12ರಂದು ಸಂಜೆ 5 ಗಂಟೆ ಒಳಗೆ ಪ್ರಕಟವಾಗಲಿದೆ.

ಮೊದಲ ರೌಂಡ್‌ ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಜ.13, 14ರಂದು ಪ್ರವೇಶಾತಿ ಪಡೆದುಕೊಳ್ಳಬಹುದು. ಸೆಕೆಂಡ್ ರೌಂಡ್ ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ ಜ.17ರಂದು ಪ್ರಕಟವಾಗಲಿದೆ. ಇಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಜ.17ರಿಂದ 20ರೊಳಗೆ ಪ್ರವೇಶಾತಿ ಪಡೆದುಕೊಳ್ಳಬೇಕು. ವಿಶೇಷ ಪ್ರಾತಿನಿಧ್ಯ ಇರುವ ವಿದ್ಯಾರ್ಥಿಗಳು (ಎನ್‌ಸಿಸಿ, ಎನ್‌ಎಸ್‌ಎಸ್, ಕ್ರೀಡೆ, ಕಲ್ಚರಲ್ ಇತ್ಯಾದಿ) ಜ.19ರಂದು ಪ್ರವೇಶ ಪಡೆಯಬೇಕು. ಮೂರನೇ ಹಂತದ ಸೀಟು ಹಂಚಿಕೆ ಜ.21ರಂದು ಪ್ರಕಟವಾಗಲಿದೆ. ಈ ಮಕ್ಕಳು ಜ.21ರಿಂದ 25ರೊಳಗೆ ಪ್ರವೇಶಾತಿ ಪಡೆದುಕೊಳ್ಳಬೇಕು ಎಂದು ಅಧಿಸೂಚನೆಯಲ್ಲಿ ಕುಲಸಚಿವರು ತಿಳಿಸಿದ್ದಾರೆ.

Key words: Mysore university- announces- first year- admission date.