ಮೈಸೂರು ವಿವಿ: ಪರೀಕ್ಷಾಂಗ ಕುಲಸಚಿವ ಡಾ.ಬಸಪ್ಪ ನೇಮಕ ರದ್ದು

ಬೆಂಗಳೂರು,ಜುಲೈ,4,2024 (www.justkannada.in): ಮೈಸೂರು ವಿಶ್ವ ವಿದ್ಯಾನಿಲಯದ ರಿಜಿಸ್ಟ್ರಾರ್(ಮೌಲ್ಯಮಾಪನ) ಆಗಿ ಡಾ.ಬಸಪ್ಪ ನೇಮಕವನ್ನ ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

ಆರ್ಗಾನಿಕ್ ಕೆಮಿಸ್ಟ್ರಿ ಅಧ್ಯಯನ ವಿಭಾಗದ ಅಧ್ಯಕ್ಷ ಬಸಪ್ಪ ಅವರನ್ನ ತಾವು ನೇಮಕಗೊಂಡಿದ್ದ ರಿಜಿಸ್ಟ್ರಾರ್ (ಮೌಲ್ಯಮಾಪನ) ಹುದ್ದೆಗೆ ಮಾರ್ಚ್ 15 2024 ರಂದು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಡಾ.ಕೆ.ಎಂ.ಮಹದೇವನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿಎಂ ಶ್ಯಾಮ್ ಪ್ರಸಾದ್ ವಿಚಾರಣೆ ನಡೆಸಿದರು.  ಮಾರ್ಚ್ 28, 2023 ರಂದು  ಮೈಸೂರು ವಿವಿ ರಿಜಿಸ್ಟ್ರಾರ್ (ಮೌಲ್ಯಮಾಪನ) ಆಗಿ ವೈ ಕೆ.ಎಂ.ಮಹದೇವನ್ ಅವರು ನೇಮಕಗೊಂಡಿದ್ದರು.

ವೈ ಕೆ.ಎಂ.ಮಹದೇವನ್ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ  ಬಿಎಂ ಶ್ಯಾಮ್ ಪ್ರಸಾದ್ ಅವರು ರಿಜಿಸ್ಟ್ರಾರ್ ಆಗಿ ಡಾ.ಬಸಪ್ಪ ನೇಮಕವನ್ನ ರದ್ದುಗೊಳಿಸಿ ಆದೇಶ ಹೊರಡಿಸಿದ್ದು, ತಮ್ಮ ಆದೇಶದಲ್ಲಿ, ರಾಜ್ಯ ಸರ್ಕಾರವು ಈ ಹುದ್ದೆಗೆ ಬಸಪ್ಪ ಅವರ ಅರ್ಹತೆಯನ್ನು ಸಂಪೂರ್ಣವಾಗಿ ಪರಿಗಣಿಸಿಲ್ಲ , ಜೊತೆಗೆ UoM ಉಪಕುಲಪತಿ (VC) ಅವರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ತಿಳಿಸಿದೆ.

ಲೋಕಸಭೆ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಆದೇಶದ ಮೇರೆಗೆ ರಿಜಿಸ್ಟ್ರಾರ್ (ಮೌಲ್ಯಮಾಪನ) ಹುದ್ದೆಯಿಂದ ತನ್ನನ್ನ  ತೆಗೆದು ಬಸಪ್ಪ ಅವರನ್ನ ನೇಮಿಸಲಾಗಿದೆ. ಬಸಪ್ಪ ಅವರು ರಿಜಿಸ್ಟ್ರಾರ್ (ಮೌಲ್ಯಮಾಪನ) ಹುದ್ದೆಗೆ ಅರ್ಹರಲ್ಲ ಎಂದು ಅರ್ಜಿದಾರ ಮಹಾದೇವನ್ ಪರ ವಕೀಲ ವೈಶಾಲಿ ಹೆಗಡೆ ವಾದಿಸಿದರು.

Key words: Mysore University, Appointment, Dr. Basappa, Registrar (Evaluation), cancelled