ಶಿಷ್ಯವೇತನ ಹೆಚ್ಚಳ ಮತ್ತು ಹೊಸದಾಗಿ ಅರ್ಜಿ ಆಹ್ವಾನಕ್ಕೆ ಮೈಸೂರು ವಿವಿಯ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳ ವೇದಿಕೆ ಮನವಿ.

ಮೈಸೂರು,ಅಕ್ಟೋಬರ್,31,2022(www.justkannada.in): ಸಂಶೋಧನಾ ವಿದ್ಯಾರ್ಥಿಗಳ ಶಿಷ್ಯವೇತನವನ್ನು ಹೆಚ್ಚಿಸುವಂತೆ ಹಾಗೂ ಹೊಸದಾಗಿ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನಿಸುವಂತೆ  ಮೈಸೂರು ವಿಶ್ವ ವಿದ್ಯಾನಿಲಯಕ್ಕೆ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳ ವೇದಿಕೆ ಆಗ್ರಹಿಸಿದೆ.

ಮೈಸೂರು ವಿಶ್ವವಿದ್ಯಾನಿಲಯವು ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶಿಷ್ಯವೇತನವು ಪ್ರತಿ ತಿಂಗಳಿಗೆ 12,000 ರೂ. ಇದೆ. ಆದರೇ, ಈ ಶಿಷ್ಯವೇತನವನ್ನು 3 ವರ್ಷಗಳಿಗೆ ಮಾತ್ರ ನೀಡಲಾಗುತ್ತಿದ್ದು, ಅದನ್ನು 5 ವರ್ಷಗಳ ವರೆಗೆ ವಿಸ್ತರಿಸುವುದು ಮತ್ತು ಪ್ರತಿ ತಿಂಗಳು ನೀಡುವು ಶಿಷ್ಯವೇತನದ ಮೊತ್ತವನ್ನು 12 ಸಾವಿರದಿಂದ 30 ಸಾವಿರದವರೆಗೆ ಹೆಚ್ಚಿಸಬೇಕು. ನಮ್ಮ ಈ ಮನವಿಗೆ ಮಾನ್ಯ ಕುಲಪತಿಗಳು ದಿನಾಂಕ 31.10.22 ರಂದು ಹೆಚ್ಚಿಸುತ್ತೇನೆಂದು ಸಮ್ಮತಿ ನೀಡಿದ್ದಾರೆ.

ಆದ್ದರಿಂದ ದಯಮಾಡಿ ವಿಶ್ವವಿದ್ಯಾನಿಲಯವು ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ವರ್ಗದ ಸಂಶೋಧನಾ ವಿದ್ಯಾರ್ಥಿಗಳಿಗೆ ಸಮಾನ ಶಿಷ್ಯವೇತನವನ್ನು ನೀಡಬೇಕು ಎಂದು ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳ ವೇದಿಕೆ ಸದಸ್ಯರು ಮನವಿ ಮಾಡಿದ್ದಾರೆ.

ವರ್ಷ ವರ್ಷ ಸಂಶೋಧನೆ ಮಾಡುತ್ತಿರುವವರ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚುತ್ತಿರುವುದರಿಂದ, ಇದು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಗೌರವವನ್ನು ಮತ್ತು ಶೈಕ್ಷಣಿಕ ಪ್ರಗತಿಯನ್ನು ಸೂಚಿಸುತ್ತದೆ. ಆದ್ದರಿಂದ ಮೈಸೂರು ವಿಶ್ವವಿದ್ಯಾನಿಲಯವು ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ವಿವಿಯೂ ಸಂಶೋಧನಾ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ನೀಡಿ ಪ್ರೋತ್ಸಾಹಿಸುವ ಜೊತೆಗೆ, ಕಾಲ ಕಾಲಕ್ಕೆ ಸರಿಯಾಗಿ ಶಿಷ್ಯವೇತನವನ್ನು ನೀಡಬೇಕು.

ಹಾಗೆಯೇ ದಿನಾಂಕ 5/11/2022 ರಂದು ನಡೆಯುವ ಸಿಂಡಿಕೇಟ್ ಸಭೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಸಮಾನ ಶಿಷ್ಯವೇತನ ನೀಡದಿದ್ದರೆ ನಮ್ಮ ಬೇಡಿಕೆಯನ್ನು ಮೈಸೂರು ವಿಶ್ವವಿದ್ಯಾನಿಲಯವು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ತಿಳಿಸಬಯಸುತ್ತೇವೆ. ಹೊಸದಾಗಿ ಈ ಕೂಡಲೇ ಶಿಷ್ಯವೇತನಕ್ಕೆ ಅರ್ಜಿಯನ್ನು ಆಹ್ವಾನಿಸಬೇಕು ಮತ್ತು ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸುವ ಎಲ್ಲಾ ಹಿಂದುಳಿದ ವರ್ಗಗಳ ಸಂಶೋಧನ ವಿದ್ಯಾರ್ಥಿಗಳಿಗೂ ಶಿಷ್ಯವೇತನವನ್ನು ನೀಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಆಸರೆಯಾಗಬೇಕು ಎಂದು ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳ ವೇದಿಕೆ ಹೇಳಿದೆ.

Key words: Mysore University-Backward- Classes- Research –Students-Forum-application invitation