ಮೈಸೂರು,ನವೆಂಬರ್,8,2022(www.justkannada.in): ಮೈಸೂರು ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರು ಬಿಡದಿಯ ನ್ಯಾನೋ ರಿಸರ್ಚ್ ಫಾರ್ ಅಡ್ವಾನ್ಸ್ಡ್ ಮೆಟೀರಿಯಲ್ಸ್ ಟೆಕ್ನಾಲಜೀಸ್ ಕಂಪನಿ ನಡುವೆ ಮಂಗಳವಾರ ಒಪ್ಪಂದ ಏರ್ಪಟ್ಟಿತು.
ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್. ಶಿವಪ್ಪ, ನ್ಯಾನೋ ರಾಮ್ ಟೆಕ್ನಾಲಜೀಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಪಣಿರತ್ನ ಮತ್ತು ಸೆರಿಕಲ್ಚರ್ ವಿಜ್ಞಾನ ಅಧ್ಯಯನ ವಿಭಾಗದ ಪ್ರೊ.ಎಚ್.ಬಿ. ಮಂಜುನಾಥ ಸೇರಿದಂತೆ ಇತರರು ಭಾಗವಹಿಸಿದ್ದರು.
ಬಯೋಮೆಡಿಕಲ್ ಅಪ್ಲಿಕೇಶನ್ ಗಳಿಗಾಗಿ ನ್ಯಾನೊತಂತ್ರಜ್ಞಾನ ಆಧಾರಿತ ವಸ್ತುಗಳ ಕುರಿತು ಸಂಶೋಧನೆ ನಡೆಸಲು ಈ ಒಪ್ಪಂದ ಏರ್ಪಟ್ಟಿದೆ. ಇದಲ್ಲದೆ, ಇದು ವಿದ್ಯಾರ್ಥಿಗಳಿಗೆ ತರಬೇತಿ, ಸಂಶೋಧನೆ ಮತ್ತು ಇಂಟರ್‌ಶಿಪ್, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಅನುದಾನಿತ ಸಂಶೋಧನಾ ಯೋಜನೆಗಳಲ್ಲಿ ಭಾಗವಹಿಸುವಿಕೆ ಮತ್ತು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಅಡಿಯಲ್ಲಿ ಕೈಗಾರಿಕೆಗಳೊಂದಿಗೆ ಕೆಲಸ ಮಾಡಲು ಈ ಒಪ್ಪಂದ ಸಹಕಾರಿಯಾಗಿದೆ ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಇದರಿಂದ ಬಯೋಟೆಕ್ ಲೈ ಸೈನ್ಸಸ್ ಮತ್ತು ಬಯೋಮೆಡಿಕಲ್ ವಲಯಗಳಿಗೆ ಅಗತ್ಯವಿರುವ ನ್ಯಾನೊಸೈನ್ಸ್ ಆಧಾರಿತ ತಂತ್ರಜ್ಞಾನಗಳು ಮತ್ತು ಮೂಲಮಾದರಿಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.
ಸಂಶೋಧನಾ ನ್ಯಾನೊ ಸಾಮಗ್ರಿಗಳನ್ನು ಕೈಗೊಳ್ಳಲು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸಂಭಾವ್ಯ ಕೈಗಾರಿಕಾ ಪಾಲುದಾರರನ್ನು ಒಳಗೊಂಡ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಅನುದಾನವನ್ನು ಪಡೆಯಬಹುದು. ನ್ಯಾನೊತಂತ್ರಜ್ಞಾನವನ್ನು ಬಳಸಿಕೊಂಡು ಕೈಗಾರಿಕಾ ಸಭೆಯನ್ನು ಸಹ ನಡೆಸಬಹುದು ಎಂದು ಪ್ರೊ.ಎಚ್.ಬಿ.ಮಂಜುನಾಥ ಅವರು ತಿಳಿಸಿದರು. ಈ ವೇಳೆ ಪಿಎಂಇಬಿ ನಿರ್ದೇಶಕ ಪ್ರೊ.ಲೋಕನಾಥ್ ಹಾಜರಿದ್ದರು.
Key words: mysore university –between- Nano Research- Technologies-