ಮೈಸೂರು, ಜು.31, 2021 : (www.justkannada.in news ) ಇವತ್ತಿನ ಸಂದಿಗ್ಧ ಕಾಲಘಟ್ಟದಲ್ಲಿ ಸುಸ್ಥಿರ ಅಭಿವೃದ್ಧಿ ಹಾಗೂ ಜೈವಿಕ ಆವಿಷ್ಕಾರದ ಬಗ್ಗೆ ಹೆಚ್ಚು ಹೆಚ್ಚು ಚರ್ಚೆ ಆಗಬೇಕಿದೆ ಎಂದು ಪದ್ಮಭೂಷಣ ಪ್ರೊ.ಜಿ.ಪದ್ಮನಾಭನ್ ತಿಳಿಸಿದರು.
ಮೈಸೂರು ವಿವಿ ವತಿಯಿಂದ ಮಾನಸ ಗಂಗೋತ್ರಿಯ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ‘ಜೈವಿಕ ತಂತ್ರಜ್ಞಾನದ ಇತ್ತೀಚಿನ ಬೆಳವಣಿಗೆ’ ಎಂಬ ವಿಷಯ ಬಗ್ಗೆ ಶನಿವಾರ ನಡೆದ ಒಂದು ದಿನ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವರ್ಜುವಲ್ ಲೈವ್ ಮೂಲಕ ಅವರು ಹೇಳಿದಿಷ್ಟು:
ವಿಜ್ಞಾನದ ಅವಶ್ಯಕತೆ ಮೊದಲಿನಿಂದಲೂ ಇದೀಗ ಹೆಚ್ಚಾಗಿದೆ. ಜಾಗತಿಕ ತಾಪಮಾನ ಇಡೀ ವಿಶ್ವವನ್ನೇ ಕಾಡುತ್ತಿದೆ. ದೇಶದ ರಾಜಾಧಾನಿ ದೆಹಲಿ ಗರಿಷ್ಠ ವಾಯುಮಾಲಿನ್ಯ ಇರುವ ನಗರವಾಗಿ ಮಾರ್ಪಟ್ಟಿದೆ. ಈ ನಿಟ್ಟಿನಲ್ಲಿ ಇಂದು ಜೈವಿಕ ತಂತ್ರಜ್ಞಾನ ಬಗ್ಗೆ ಆಯೋಜಿಸಿರುವ ರಾಷ್ಟ್ರೀಯ ವಿಚಾರ ಸಂಕಿರಣ ಬಹಳ ಅರ್ಥಪೂರ್ಣವಾಗಿದೆ. ಒಳ್ಳೆಯ ವಿಜ್ಞಾನಿ, ಸಂಪನ್ಮೂಲ ವ್ಯಕ್ತಿ , ವಿಶ್ರಾಂತ ಕುಲಪತಿಯೂ ಆಗಿರುವ ಪ್ರೊ.ಎಸ್.ಆರ್.ನಿರಂಜನ ಅವರು ಈ ಕಾರ್ಯಕ್ರಮದ ಉಸ್ತುವಾರಿ ಹೊತ್ತಿರುವುದಕ್ಕೆ ಖುಷಿ ಆಗುತ್ತಿದೆ,’’ ಎಂದು ಹೇಳಿದರು.
ನಂತರ ಹೈದರಾಬಾದ್‌ನ ಸಿಎಸ್‌ಐಆರ್-ಐಐಸಿಟಿ ನಿರ್ದೇಶಕರಾದ ಡಾ.ಎಸ್.ಚಂದ್ರಶೇಖರ್ ಅವರು ‘ವಿಜ್ಞಾನ ಕಥೆ’ ಎಂಬ ವಿಷಯದ ಕುರಿತು ಮಾತನಾಡಿ, ಆಧುನಿಕ ಜೀವನದಿಂದ ಉಂಟಾಗಿರುವ ನಾನಾ ಸಮಸ್ಯೆಗಳಿಗೆ ಜೈವಿಕ ತಂತ್ರಜ್ಞಾನ ಪರಿಹಾರ ಒದಗಿಸಲಿದೆ. ಉತ್ತಮ ಆಹಾರ ಒದಗಿಸುವಲ್ಲಿ ಮತ್ತು ನೀರಿನ ಸಂರಕ್ಷಣೆ ಮಾಡುವಲ್ಲಿ ಜೈವಿಕ ತಂತ್ರಜ್ಞಾನವು ಅತಿ ಹೆಚ್ಚು ಕೊಡುಗೆ ನೀಡಲಿದೆ ಎಂದರು.
ಇಂದು ನಾವು ಹಲವು ಬ್ಯಾಕ್ಟೀರಿಯಾ, ವೈರಸ್‌ಗಳಿಂದ ತೊಂದರೆ ಅನುಭವಿಸುವಂತಾಗಿದೆ. ಬದಲಾದ ಜೀವನ ಶೈಲಿ, ಒತ್ತಡದ ಬದುಕು, ಕಲಬೆರಕೆ ಆಹಾರ, ಕಲುಷಿತ ವಾತಾವರಣದಿಂದ ಮಧುಮೇಹ, ಕ್ಯಾನ್ಸರ್, ಕಾರ್ಡಿಯೋ, ಮಲೇರಿಯಾ ಸೇರಿದಂತೆ ನಾನಾ ಕಾಯಿಲೆಗಳು ನಮ್ಮನ್ನು ಕಾಡುತ್ತಿವೆ. ಇತ್ತೀಚಿಗೆ ಕೊರೊನಾ ಹೊಸ ಮಾದರಿ ವೈರಸ್ ಅದಕ್ಕೊಂದು ಹೊಸ ಉದಾಹರಣೆ. ಜೊತೆಗೆ ಕೋವಿಡ್ ಲಸಿಕೆ ಉತ್ಪಾದನೆಯಲ್ಲೂ ಜೈವಿಕ ತಂತ್ರಜ್ಞಾನ ಮಹತ್ತರ ಪಾತ್ರ ವಹಿಸಿದೆ ಎಂದು ಹೇಳಿದರು.
ನಾವು ಸೇವಿಸುವ ಆಹಾರಕ್ಕೆ ಹೆಚ್ಚು ಸುರಕ್ಷಿತ ಎಂಬ ಭಾವನೆ ಎಲ್ಲರಿಗೂ ಬರಬೇಕಿದೆ. ಅಲ್ಲದೆ, ಭವಿಷ್ಯದಲ್ಲಿ ಸೋಲಾರ್ ಶಕ್ತಿ ಹೆಚ್ಚು ಬಳಕೆ ಆಗಬೇಕು. ಪೆಟ್ರೋಲ್, ಡೀಸೆಲ್ ಇಂಧನಕ್ಕೆ ಪರ್ಯಾಯ ಆಲೋಚಿಸಬೇಕಿದೆ. ಈ ನಿಟ್ಟಿನಲ್ಲಿ ಹೊಸಹೊಸ ಆವಿಷ್ಕಾರಗಳು ಆಗಬೇಕು. ನವೀಕರಿಸಬಹುದಾದ ಇಂಧನ ಮೂಲಗಳು ಹೆಚ್ಚಾಗಬೇಕಿದೆ. ಭೂತಾನ್ ದೇಶ ಆ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಡುತ್ತಿದೆ. ಕಾರ್ಬನ್ ನೆಗೆಟಿವ್ ಆಗಿರುವ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.
‘ಕೊರೊನಾ ವೈರಸ್ ಯುಗದಲ್ಲಿ ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ ’ ಎಂಬ ವಿಷಯದ ಬಗ್ಗೆ ಪದ್ಮಭೂಷಣ ಪ್ರೊ.ಪಿ.ಬಲರಾಮ್ ಮಾತನಾಡಿದರು.
ಇದಕ್ಕೂ ಮುನ್ನ ವಿಚಾರ ಸಂಕಿರಣವನ್ನು ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹಾಗೂ ವಿಶ್ರಾಂತ ಕುಲಪತಿ ಮತ್ತು ಪ್ರಾಧ್ಯಾಪಕರಾದ ಪ್ರೊ.ಎಸ್.ಆರ್.ನಿರಂಜನ ಉದ್ಘಾಟಿಸಿದರು. ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ.ಎಚ್.ಎನ್. ಅಪರ್ಣಾ, ಪ್ರೊ.ಉಮೇಶ್, ನಿವೃತ್ತ ಪ್ರಾಧ್ಯಾಪಕಿ ಭಾರತಿ ಸಾಲೀಮಠ್, ಡಾ.ಗೀತಾ ಸೇರಿದಂತೆ ಇತರರು ಹಾಜರಿದ್ದರು.
ENGLISH SUMMARY….
Global warming causing concern for the globe: Padmabhushan Prof. G. Padmanabhan
Mysuru, July 31, 2021 (www.justkannada.in): Padmabhushan award winner Prof. G. Padmanabhan expressed his view that sustainable development and bio discoveries are the need of the hour in the present world.
He participated in the one-day national virtual seminar on the topic ‘Recent developments in Bio-technology,” organized by the Department of Bio-technology, University of Mysore.
In his address he said, “The need of science is required more today than ever before. Global warming is an issue of serious concern across the globe. New Delhi has turned to be the works pollution hit city in the country. In this context such seminars add lot of value and is most required,” he said.
Dr. S. Chandrashekar, Director, CSIR-IICT, Hyderabad spoke about ‘Science Story’. He observed that bio-technology is providing solutions to several problems that are evolved due to the modern living style. Bio-technology sector plays a vital role in providing safe food and conservation of water, he said.
On the occasion he also observed that the contribution of bio-technology is significant in invention of vaccine to the COVID-19 pandemic.
Prof. G. Hemanth Kumar, Vice-Chancellor, University of Mysore, former VC and Prof. S.R. Niranjan inaugurated the program. Prof. H.N. Aparna, Head, Department of Bio-technology, Prof. Umesh, Retd. Prof. Bharathi Salimath, Dr. Geetha and others participated.
Keywords: University of Mysore/ Bio-technology/ national seminar/ virtual/ global warming/ concern
key words : mysore-university-bio.technology-natioal-seminor-trends-mysore-vc