ಮೈಸೂರು,ಡಿಸೆಂಬರ್,7,2020(www.justkannada.in): ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ದೃಷ್ಠಿದೋಷವುಳ್ಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ದೃಷ್ಠಿ ವಿಶ್ವಾಸಿಗರ ಸಮನ್ವಯ ಸಬಲೀಕರಣ ಕೇಂದ್ರ ಸ್ಥಾಪನೆ ಮಾಡಲು ಶಿಕ್ಷಣ ಮಂಡಳಿಯ ಎರಡನೇ ಸಾಮಾನ್ಯ ಸಭೆಯಲ್ಲಿ ಸಹಮತ ನೀಡಲಾಯಿತು.
ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ನೇತೃತ್ವದಲ್ಲಿ ವಿಜ್ಞಾನ ಭವನದಲ್ಲಿ ಮೈಸೂರು ವಿವಿ ಶಿಕ್ಷಣ ಮಂಡಳಿಯ ಎರಡನೇ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು ವಿವಿಯ ಕುರಿತಾದ ಹಲವು ವಿಷಯಗಳನ್ನ ಮಂಡನೆ ಮಾಡಿದರು.
ವಿವಿಯಲ್ಲಿ ದೃಷ್ಠಿದೋಷವುಳ್ಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ದೃಷ್ಠಿ ವಿಶ್ವಾಸಿಗರ ಸಮನ್ವಯ ಸಬಲೀಕರಣ ಕೇಂದ್ರ ಸ್ಥಾಪನೆ, ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ ಕುರಿತು ಚರ್ಚಿಸಲಾಯಿತು. ಇನ್ನು ಅಧ್ಯಾಪಕೇತರ ವೃಂದ ಮತ್ತು ನೇಮಕಾತಿ ನಿಯಮಗಳ ಅಧಿನಿಯಮವನ್ನು ಪರಿಷ್ಕರಿಸುವ ಕುರಿತು ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಉನ್ನತ ಭಾರತ ಯೋಜನೆ ಮತ್ತು ಸ್ಮಾರ್ಟ್ ವಿಲೇಜ್ ಯೋಜನೆಯಲ್ಲಿ ದತ್ತು ಪಡೆದ ಗ್ರಾಮಗಳ ವ್ಯಾಪ್ತಿಯ ಇಬ್ಬರು ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ಕೋರಿಕೆಗೆ ಒಪ್ಪಿಗೆ ನೀಡಲಾಯಿತು. ಸಭೆಯಲ್ಲಿ ಮಂಡನೆಯಾದ ಬಹುತೇಕ ವಿಷಯಗಳಿಗೆ ಸದಸ್ಯರು ಸಹಮತ ವ್ಯಕ್ತಪಡಿಸಿದರು. ಸಭೆಯಲ್ಲಿ ಕುಲಸಚಿವ ಪ್ರೊ. ಶಿವಪ್ಪ, ರಿಜಿಸ್ಟ್ರಾರ್ ಮಹದೇವ್ ಸೇರಿದಂತೆ ಶಿಕ್ಷಣ ಮಂಡಳಿ ಸದಸ್ಯರು ಭಾಗಿಯಾಗಿದ್ದರು.
Key words: mysore university-Consent – Visionary Confidence Empowerment Center – Second General Meeting -Board of Education