ಮೈಸೂರು, ಜು.06, 2020 : (www.justkannada.in news) : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಸೌಧ ಕ್ರಾಫರ್ಡ್ ಹಾಲ್ ಇಂದಿನಿಂದ ಹತ್ತು ದಿನಗಳ ಕಾಲ ಬಂದ್.
ಕ್ರಾಫರ್ಡ್ ಹಾಲ್ ಆವರಣದ ಪರೀಕ್ಷಾಂಗ ವಿಭಾಗದಲ್ಲಿ ಸಿಬ್ಬಂದಿಗೆ ಶನಿವಾರ ಕರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ವಿವಿ ಕುಲಪತಿ ಪ್ರೊ.ಜೆ.ಹೇಮಂತ್ ಕುಮಾರ್ ಅವರಿಂದ ಈ ಕ್ರಮ.
ಈ ಬಗ್ಗೆ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಕುಲಪತಿ ಪ್ರೊ.ಜೆ.ಹೇಮಂತ್ ಕುಮಾರ್ ಹೇಳಿದ್ದಿಷ್ಟು…
ಕಳೆದ ಶನಿವಾರ ಸಿಬ್ಬಂದಿಗೆ ಕರೋನಾ ಸೋಂಕು ದೃಢಪಟ್ಟಿತು. ಜತೆಗೆ ಮೈಸೂರಿನಲ್ಲಿ ಸೋಂಕಿನ ಪ್ರಮಾಣ ವ್ಯಾಪಕವಾಗಿ ಹರಡುತ್ತಿದೆ. ಆದ್ದರಿಂದ ಕ್ರಾಫರ್ಡ್ ಭವನದಲ್ಲಿ 10 ದಿನಗಳ ಕಾಲ ಮುಚ್ಚಲು ತೀರ್ಮಾನಿಸಲಾಯಿತು. ಆದರೆ, ಇದೇ ವೇಳೆ ವಿವಿಯ ಕಾರ್ಯ ಕಲಾಪಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಇತರೆ ಆಯಾ ವಿಭಾಗಗಳಲ್ಲೇ ಕೆಲಸ ನಿರ್ವಹಿಸಲು ಸೂಚಿಸುವ ಮೂಲಕ ವಿಕೇಂದ್ರೀಕರಣ ಮಾಡಲಾಗಿದೆ.
ಜತೆಗೆ ಅಲ್ಲೂ ಸಹ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಹಾಜರಾಗುವ ಅವಶ್ಯಕತೆ ಇಲ್ಲ. ಶೇ.50 ರಷ್ಟು ಸಿಬ್ಬಂದಿಗಳ ಸಹಕಾರದಲ್ಲಿ ತುರ್ತು ಅಗತ್ಯ ಕೆಲಸ ಕಾರ್ಯ ನಿರ್ವಹಿಸಲಾಗುತ್ತದೆ. ನಾನು ವಿಜ್ಞಾನ ಭವನದಲ್ಲಿ ಹಾಗೂ ವಿಸಿ ಕ್ವಾಟ್ರಸ್ ನಿಂದಲೇ ಕೆಲಸ ಮಾಡುವೆ ಎಂದು ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದರು.
key words : mysore-university-Crawford-hall-closed-for-10-days-due-to-corona-positive-found-VC-prof.hemanth.kumar