ಮೈಸೂರು,ಫೆಬ್ರವರಿ,17,2022(www.justkannada.in): ಕ್ರೀಡೆಯು ಪ್ರತಿಯೊಬ್ಬ ಮಕ್ಕಳಿಗೂ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಮಗ್ರವಾಗಿ ಬದಲಾಗಿಸಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ತಿಳಿಸಿದರು.
ಮೈಸೂರು ವಿವಿಯ ವಿಲೇಜ್ ಹಾಸ್ಟೆಲ್ ಮೈದಾನದಲ್ಲಿ ಪ್ರಪ್ರಥಮವಾಗಿ ನಡೆದ ರಾಷ್ಟ್ರ ಮಟ್ಟದ ಸೈಕಲ್ ಪೋಲೋ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಹೇಳಿದಿಷ್ಟು…
ಹಿಂದೆ ರಾಜಮಹಾರಾಜರು ಪೋಲೋ ಕ್ರೀಡೆಯನ್ನು ಆನೆಗಳ ಮೇಲೆ ಕುಳಿತು ಆಡುತ್ತಿದ್ದರು. ನಂತರ ಕುದುರೆಗಳ ಮೇಲೆ ಕುಳಿತು ಆಟವಾಡಲು ಪ್ರಾರಂಭಿಸಿದರು. ಇಂದು ಪೋಲೋ ಕ್ರೀಡೆಯನ್ನು ಸೈಕಲ್ ನಲ್ಲಿ ಕುಳಿತು ಆಡುತ್ತಿರುವುದರಿಂದ ಸೈಕಲ್ ಪೋಲೋ ಆಗಿ ಹೆಸರುವಾಸಿಯಾಗಿದೆ. ಕರ್ನಾಟಕದಲ್ಲಿ ಅದರಲ್ಲಿಯೂ ಮೈಸೂರಿನಲ್ಲಿ ಮೊದಲ ಬಾರಿಗೆ ರಾಷ್ಟ್ರ ಮಟ್ಟದ ಸೈಕಲ್ ಪೋಲೋ ಸ್ಪರ್ಧೆ ನಡೆಯುತ್ತಿರುವುದು ಐತಿಹಾಸಿಕ ದಿನವಾಗಿದೆ. ಸೈಕಲ್ ಪೋಲೋ ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪ್ರಿಯತೆ ಪಡೆಯುವುದರ ಜೊತೆಗೆ ಮುಂದಿನ ದಿನಗಳಲ್ಲಿ ಮೈಸೂರು ವಿವಿ ಕ್ರೀಡಾಕೂಟದಲ್ಲಿ ಸೈಕಲ್ ಸ್ಪರ್ಧೆಯನ್ನು ಅಳವಡಿಸಿಕೊಳ್ಳುವುದಾಗಿ ತಿಳಿಸಿದರು.
ಮೈಸೂರು ಮುಕ್ತ ವಿವಿ ಕುಲಪತಿ ಡಾ. ವಿದ್ಯಾಶಂಕರ್ ಮಾತನಾಡಿ, ಗ್ರಾಮೀಣ ಭಾಗದ ಕ್ರೀಡೆಗಳಾದ ಕೊಕೊ ಮತ್ತು ಕಬಡ್ಡಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರೋತ್ಸಾಹಿಸಲಾಗುತ್ತಿದೆ. ಕಬಡ್ಡಿ ಒಲಿಂಪಿಕ್ ಕ್ರೀಡೆಯಾಗಿ ಜನಪ್ರಿಯತೆ ಪಡೆದಿದೆ ಹಾಗೆಯೇ ಸೈಕಲ್ ಪೋಲೋ ಕ್ರೀಡೆಯೂ ಒಲಿಂಪಿಕ್ ಕ್ರೀಡೆಯಾಗಲಿ ಎಂದು ಆಶಿಸಿದರು. ಸ್ಪರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯ, ಎರಡನ್ನೂ ಸ್ವೀಕರಿಸಿ ಕ್ರೀಡಾಸ್ಪೂರ್ತಿಯೊಂದಿಗೆ ಆಟವಾಡಿ ಎಂದು ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿದರು.
20 ಕ್ಕೂ ಹೆಚ್ಚಿನ ತಂಡಗಳು ಭಾಗಿ …
ಸ್ಪರ್ಧೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಧ್ಯಪ್ರದೇಶ, ಛತ್ತೀಸ್ ಗಢ, ಇಂಡಿಯನ್ ಆರ್ಮಿ ಇಂಡಿಯನ್ ಏರ್ ಫೋರ್ಸ್, ಜಮ್ಮು ಕಾಶ್ಮೀರ ಸೇರಿದಂತೆ 20ಕ್ಕೂ ಹೆಚ್ಚು ತಂಡಗಳು ಭಾಗಿಯಾಗಿದ್ದವು. ಉದ್ಘಾಟನೆ ಬಳಿಕ ಕರ್ನಾಟಕ ಮತ್ತು ಪುದುಚೇರಿ ತಂಡಗಳು ಸೆಣಸಿದವು.
ಸೈಕಲ್ ಪೋಲೋ ರಾಷ್ಟ್ರ ಪದಕ ವಿಜೇತೆ ವೈಷ್ಣವಿ ಆರ್. ಎಸ್, ಸೈಕಲ್ ಪೋಲೋ ಫೆಡರೇಶನ್ ಆಫ್ ಇಂಡಿಯಾ ಅಜೀವ ಸದಸ್ಯ ರಾಘವೇಂದ್ರ ಸಿಂಗ್ ದುಂಡ್ಲೋಡ್, ಸೈಕಲ್ ಪೋಲೋ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಪ್ರದೀಪ್ ಪಿ. ಬಾಪಟ್, ಕಾರ್ಯದರ್ಶಿ ದಿನೇಶ್ ಸರ್ವೇ, ಖಜಾಂಚಿ ಪಿ. ಎಂ. ಅಬೂಬಕರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಜಾನನ್ ಬುರಡೆ, ಸಹ ಕಾರ್ಯದರ್ಶಿ ಸುನಾಯನ ಮಿಶ್ರಾ, ಮೈಸೂರು ವಿವಿ ಕುಲಸಚಿವ ಪಿ. ರಾಜಣ್ಣ, ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್, ಕರ್ನಾಟಕ ಸೈಕಲ್ ಪೋಲೋ ಅಸೋಸಿಯೇಷನ್ ಅಧ್ಯಕ್ಷ ಎನ್. ಆರ್. ಮಂಜುನಾಥ್, ಕಾರ್ಯದರ್ಶಿ ಡಾ. ವಿಜಯಲಕ್ಷ್ಮೀ ಎ. ಪಾಟೀಲ್, ಅರುಣ್ ಕುಮಾರ್ ಹೆಚ್. ಪಾಟೀಲ್ ಇತರರು ಇದ್ದರು.
Key words: Mysore university-G. Hemanth Kumar- Cycle Polo
ENGLISH SUMMARY…
UoM VC flags off National-level Bicycle Polo Competition
Mysuru, February 17, 2022 (www.justkannada.in): “Every child requires certain sports activities that play a vital role in improving the personality of children,” opined Prof. G. Hemanth Kumar, Vice-Chancellor, University of Mysore.
He flagged off the first-ever National-level Bicycle Polo Competition, held at the Village Hostel grounds, in the University of Mysore campus today. “During earlier times, kings used to play polo by sitting on elephants. Later horses were used to play it. Today it has come to bicycles. The first-ever national-level bicycle polo in the State is being organized in Mysuru. Hence, it is a historic day for us. I wish this sport becomes more popular in the coming days. We will include the bicycle polo sports in the UoM sports events,” he added.
More than 20 teams, including from various states like Andhra Pradesh, Telangana, Tamil Nadu, Madhya Pradesh, Chattisgarh, Indian Army, Indian Air Force, Jammu, and Kashmir are taking part in the competition.
Bicycle polo national champion Vaishnavi R.S., Bicycle Polo Federation of India lifetime member Raghavendra Singh Dhundlod, Bicycle Polo Federation of India President Pradeep P Bapat, Secretary Dinesh Survey, Treasurer P.M. Aboobkar, Chief Executive Officer Gajanan Burade, Joint Secretary Sunayana Mishra, University of Mysore Registrar P. Rajanna, MLC Go. Madhusdan, Karnataka Bicycle Polo Association Chairman N.R. Manjunath, Secretary Dr. Vijayalakshmi A. Patil, Arun Kumar H. Patil and others were present.
Keywords: Bicycle Polo competition/ University of Mysore/ first time in Karnataka