ಮೈಸೂರು ವಿವಿ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ.

ಮೈಸೂರು, ಆಗಸ್ಟ್, 26,2022(www.justkannada.in): ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಅಧ್ಯಯನ ವಿಭಾಗ, ಕೇಂದ್ರ, ಘಟಕ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸಂಭಾವನೆಯನ್ನು ಪರಿಷ್ಕರಿಸಲು ಮೈಸೂರು ವಿವಿ ಸಿಂಡಿಕೇಟ್ ಸಭೆ ಅನುಮೋದನೆ ನೀಡಿದ್ದು, ಅಕ್ಟೋಬರ್‌ನಿಂದಲೇ ಈ ಪರಿಷ್ಕೃತ ವೇತನ ದೊರೆಯಲಿದೆ.

ಮೈಸೂರು ವಿವಿ ಕಾಫರ್ಡ್ ಭವನದಲ್ಲಿ ಆಗಸ್ಟ್ 22ರಂದು ಕುಲಪತಿ ಪ್ರೊ. ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಗಿದೆ.

ಯುಜಿಸಿ ನಿಯಮದ ಪ್ರಕಾರ ಅತಿಥಿ ಉಪನ್ಯಾಸಕರುಗಳಿಗೆ ಒಂದು ಗಂಟೆಗೆ 1500, ತಿಂಗಳಿಗೆ ಗರಿಷ್ಠ 50,000 ರೂ. ವೇತನ ನಿಗದಿಪಡಿಸಿರುತ್ತದೆ. ಈ ನಿಯಮದನ್ವಯ ವೇತನ ನೀಡುವಂತೆ ಮೈಸೂರು ವಿವಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ 861 ಅತಿಥಿ ಉಪನ್ಯಾಸಕರು ಮನವಿ ಮಾಡಿದ್ದರು. ಏ. 20ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಕುಲಪತಿಗಳ ಅಧ್ಯಕ್ಷತೆಯಲ್ಲಿ ಪರಿಷ್ಕೃತ ವೇತನ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಯಿತು. ರಚನೆಯಾದ ಸಮಿತಿಯು ಆಗಸ್ಟ್ 16ರಂದು ಸಭೆ ನಡೆಸಿ ಅಕ್ಟೋಬರ್‌ ನಿಂದಲೇ ಪರಿಷ್ಕೃತ ವೇತನ ಜಾರಿಗೊಳಿಸುವಂತೆ ಶಿಫಾರಸ್ಸು ಮಾಡಿತ್ತು. ಆಗಸ್ಟ್. 22ರಂದು ಕುಲಪತಿಗಳ ಸಮ್ಮುಖದಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಶಿಫಾರಸ್ಸಿಗೆ ಅನುಮೋದನೆ ಪಡೆಯಲಾಯಿತು.

ಅಂತೆಯೆ 861 ಅತಿಥಿ ಉಪನ್ಯಾಸಕರಲ್ಲಿ 773 ಉಪನ್ಯಾಸಕರಿಗೆ ಅಕ್ಟೋಬರ್‌ ನಿಂದಲೇ ಪರಿಷ್ಕೃತ ವೇತನ ದೊರೆಯುತ್ತಿದೆ. ಇನ್ನುಳಿದ 88 ಅತಿಥಿ ಉಪನ್ಯಾಸಕರು ಸೇವೆ ಕಾಯಂಗೊಳಿಸುವಂತೆ ನ್ಯಾಯಾಲಯದ ಮೆಟ್ಟಿಲು ಏರಿರುವುದರಿಂದ ಸರಕಾರದ ಅನುಮತಿ ಪಡೆದು ಅವರಿಗೂ ಇದೇ ನಿಯಮಾನುಸಾರ ಪರಿಷ್ಕೃತ ವೇತನ ನೀಡಲಾಗುತ್ತದೆ.

Key words: Mysore University -Guest Lecturer- Salary -Hike

ENGLISH SUMMARY…

UoM guest lecturers remuneration hiked
Mysuru, August 26, 2022 (www.justkannada.in): The University of Mysore syndicate meeting gave its nod to increase the remuneration of the guest lecturers who are serving in the research wing, central and affiliated colleges which come under the University of Mysore. The revised remuneration will be applicable from the month of October itself.
A decision in this regard was taken in the syndicate meeting held on August 22, in the leadership of Prof. Hemanth Kumar, Vice-Chancellor, University of Mysore.
The remuneration of guest lecturers have been fixed at the rate of Rs. 1,500 per hour, upto a maximum of Rs.50,000 per month as per the UGC norms. About 861 guest lecturers who are working under the University of Mysore had appealed to provide the remuneration as per UGC norms. In the meeting held on April 20 it was decided to form a committee to look at his matter. The committee conducted a meeting on August 16 and recommended to implement the revised remuneration from October. This recommendation was approved in the meeting held under the leadership of the Vice-Chancellor, on August 22.
Accordingly, 773 guest lecturers out of the total 861 will be receiving the revised remuneration from October . The remaining 88 guest lecturers have appealed in Hon’ble court demanding regularisation of their jobs. They will also be provided the revised remuneration after obtaining permission from the government.
Keywords: University of Mysore/ guest lecturers/ revised remuneration/ syndicate meeting