ಮೈಸೂರು,ನವೆಂಬರ್,2,2021(www.justkannada.in) ಮೈಸೂರು ವಿಶ್ವವಿದ್ಯಾನಿಲಯದ ಕೆ-ಸೆಟ್ ಪರೀಕ್ಷೆ 2021ರ ಫಲಿತಾಂಶ ಪ್ರಕಟವಾಗಿದ್ದು, ಪುರುಷ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ,ಹೇಮಂತ್ ಕುಮಾರ್ ತಿಳಿಸಿದರು.
ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್, ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಈ ಬಾರಿ ಆನ್ ಲೈನ್ ಮೂಲಕ ಅರ್ಜಿ ಸ್ವೀಕಾರ ಮಾಡಲಾಗಿತ್ತು. 83,907 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 69857 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 69,857 ಅಭ್ಯರ್ಥಿಗಳ ಪೈಕಿ 4779 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ತಿಳಿಸಿದರು.
ಈ ಪರೀಕ್ಷೆಯಲ್ಲಿ 2470 ಪುರುಷ ಅಭ್ಯರ್ಥಿಗಳು ಅರ್ಹತೆ ಪಡೆದರೇ 2309 ಮಹಿಳಾ ಅಭ್ಯರ್ಥಿಗಳು ಅಯ್ಕೆ ಆಗಿದ್ದಾರೆ. ಯಶಸ್ವಿಯಾಗಿ ಈ ಬಾರಿ ಪರೀಕ್ಷೆ ನಡೆಸಲಾಗಿದೆ ಎಂದು ಕುಲಪತಿ ಪ್ರೋ ಹೇಮಂತ್ ಕುಮಾರ್ ಹೇಳಿದರು.
ಕೆ-ಸೆಟ್ ಪರೀಕ್ಷೆಯನ್ನು ಜುಲೈ 25 ರಂದು 41 ವಿಷಯಗಳಲ್ಲಿ ಹಾಗೂ ಕರ್ನಾಟಕದ 11 ನೋಡಲ್ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಪತ್ರಿಕೆ-1 ಮತ್ತು ಪತ್ರಿಕೆ -2ರಲ್ಲೂ ಹಾಜರಾಗಿ, ಸಾಮಾನ್ಯ ವರ್ಗದ ಅಭ್ಯರ್ಥಿಗಳು ಎರಡೂ ಪತ್ರಿಕೆಯಲ್ಲಿ ಒಟ್ಟು ಶೇ.40 ಅಂಕಗಳು ಮತ್ತು ಮೀಸಲಾತಿ ವ್ಯಾಪ್ತಿಗೆ ಬರುವ ಪ.ಜಾ/ ಪ.ಪಂ, ಇತರೆ ಹಿಂದುಳಿದ ವರ್ಗ ಮತ್ತು ವಿಕಲಚೇತನ ಅಭ್ಯರ್ಥಿಗಳು ಎರಡೂ ಪತ್ರಿಕೆಯಲ್ಲಿ ಒಟ್ಟು ಶೇ.35 ಅಂಕಗಳನ್ನು ಗಳಿಸಬೇಕಾಗಿತ್ತು.
ವಿಷಯಾವಾರು ತೇರ್ಗಡೆಯಾದ ಅಭ್ಯರ್ಥಿಗಳ ಸಂಖ್ಯೆ ಹೀಗಿದೆ.
ಕನ್ನಡ 397, ಅರ್ಥಶಾಸ್ತ್ರ 308, ಇಂಗ್ಲಿಷ್ 306, ವಾಣಿಜ್ಯ-888, ಇತಿಹಾಸ 325, ಸಮಾಜಶಾಸ್ತ್ರ 139, ಪೊಲಿಟಿಕಲ್ ಸೈನ್ಸ್ 378, ಭೂಗೋಳ ಶಾಸ್ತ್ರ 25, ಹಿಂದಿ 23, ಮ್ಯಾನೇಜ್ ಮೆಂಟ್ 191, ಪ್ರವಾಸೋದ್ಯಮ ಆಡಳಿತ 5, ಶಿಕ್ಷಣ 88, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ 56, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ 20, ಮನಃಶಾಸ್ತ್ರ 19, ಸೋಷಿಯಲ್ ವರ್ಕ್ 82, ಅಪರಾಧ ಶಾಸ್ತ್ರ 3, ಕಾನೂನು 27, ಸಂಸ್ಕೃತ 10, ದೈಹಿಕ ಶಿಕ್ಷಣ 98, ಜಾನಪದ ಸಾಹಿತ್ಯ 6, ಪುರಾತತ್ವ ಶಾಸ್ತ್ರ 2, ಮಾನವ ಶಾಸ್ತ್ರ 2, ಮರಾಠಿ 1, ತತ್ವಶಾಸ್ತ್ರ 3, ವುಮೆನ್ಸ್ ಸ್ಟಡೀಸ್ 10, ಭಾಷಾ ಶಾಸ್ತ್ರ 2, ಪ್ರದರ್ಶನ ಕಲೆ 3, ಸಂಗೀತ 2 ಹಾಗೂ ದೃಶ್ಯ ಕಲೆಯಲ್ಲಿ 9 ಮಂದಿ, ಉರ್ದು 14, ಸಾರ್ವಜನಿಕ ಆಡಳಿತ 7, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಅಪ್ಲಿಕೇಶನ್ 151, ದೈಹಿಕ ವಿಜ್ಞಾನ 105, ಗಣಿತ ವಿಜ್ಞಾನ 106, ರಸಾಯನ ವಿಜ್ಞಾನ 312, ಜೀವನ ವಿಜ್ಞಾನ 584, ಪರಿಸರ ವಿಜ್ಞಾನ 17, ಗೃಹ ವಿಜ್ಞಾನ 19, ವಿದ್ಯುನ್ಮಾನ ವಿಜ್ಞಾನ 24, ಭೂ ವಿಜ್ಞಾನ 12 ಮಂದಿ ಕೆ-ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಪ್ರಾಧ್ಯಾಪಕರಾಗಲು ಅರ್ಹತೆ ಪಡೆದುಕೊಂಡಿದ್ದಾರೆ.
ಕೆಟಗರಿ ವಿಭಾಗದಲ್ಲಿ ತೇರ್ಗಡೆಯಾದವರ ವಿವರ ನೋಡುವುದಾದರೆ ಜನರಲ್ ಕೆಟಗರಿಯಲ್ಲಿ 2,351, ಪ.ಜಾತಿ 739, ಪ.ಪಂಗಡ 144, ಕೆಟಗರಿ-1 ರಲ್ಲಿ 191, ಕೆಟಗರಿ 2A ನಲ್ಲಿ 700, ಕೆಟಗರಿ 2B ಯಲ್ಲಿ 194, ಕೆಟಗರಿ 3Aನಲ್ಲಿ 206, ಕೆಟಗರಿ 3B ಯಲ್ಲಿ 254 ಮಂದಿ ಅರ್ಹತೆ ಪಡೆದಿದ್ದಾರೆ.
ENGLISH SUMMARY…
Male candidates leading in Mysuru University K-SET exams: VC Prof. G. Hemanth Kumar
Mysuru, November 2, 2021 (www.justkannada.in): The Mysuru University’s K-SET result for the year 2021 has been announced. Male candidates have gained an upper hand in the exams.
Addressing a press meet in Mysuru today, Prof. G. Hemanth Kumar, Vice-Chancellor, University of Mysore, informed that applications for the eligibility test for the post of Assistant Professors were invited online for which 83907 candidates had submitted applications. Out of this 69,857 candidates appeared for the exams, and 4,779 of them have passed, he informed.
While 2,470 male candidates have gained eligibility, the number of female candidates who have become eligible is 2309.
Keywords: Mysore University/ K-SET exams/ results announced/ men gain upper hand
Key words: Mysore university- K-set –exam-VC- Prof. G. Hemanth Kumar- Information.