ಮೈಸೂರು,ಸೆಪ್ಟಂಬರ್,23,2020(www.justkannada.in): ಮೈಸೂರು ವಿಶ್ವ ವಿದ್ಯಾನಿಲಯ ಸೆಪ್ಟಂಬರ್ 27(ಭಾನುವಾರ) ರಂದು ನಡೆಸಲಿರುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಪ್ರವೇಶ ಪತ್ರ ಪಡೆಯಲು ಅಭ್ಯರ್ಥಿಗಳಿಗೆ ಇಂದು ಮಧ್ಯ ರಾತ್ರಿ 12 ಗಂಟೆವರೆಗೆ ಅವಕಾಶ ಕಲ್ಪಿಸಿದೆ.
ಪರೀಕ್ಷೆಗೆ ನಾಲ್ಕು ದಿನ ಬಾಕಿ ಇದ್ದು ಈ ನಡುವೆ ವೆಬ್ ಸೈಟ್ ನಲ್ಲಿ ಪ್ರವೇಶ ಪತ್ರಗಳನ್ನ ಡೌನ್ ಲೋಡ್ ಮಾಡಿಕೊಳ್ಳಲು ಮೈಸೂರು ವಿವಿ ಬಂದ್ ಮಾಡಿತ್ತು. ಇದರಿಂದಾಗಿ ಹಲವು ಅಭ್ಯರ್ಥಿಗಳು ಪ್ರವೇಶ ಪತ್ರ ಪಡೆದಿರಲಿಲ್ಲ. ಅದ್ದರಿಂದ ಪ್ರವೇಶ ಪತ್ರ ಪಡೆಯಲು ಅವಕಾಶ ಕಲ್ಪಿಸಿಕೊಡುವಂತೆ ಅಭ್ಯರ್ಥಿಗಳು ಮನವಿ ಸಲ್ಲಿಸಿದ್ದರು. ಇದೀಗ ಅಭ್ಯರ್ಥಿಗಳ ಮನವಿಗೆ ಮೈಸೂರು ವಿವಿ ಸ್ಪಂದಿಸಿದೆ.
ಅಭ್ಯರ್ಥಿಗಳ ಅನುಕೂಲಕ್ಕಾಗಿ ವೆಬ್ ಸೈಟ್ ನಲ್ಲಿ (http://kset.uni-mysore.ac.in/) ದಿನಾಂಕ 23 -9-2020 ರಂದು ಮಧ್ಯರಾತ್ರಿ 12 ಗಂಟೆವರೆಗೆ ಪ್ರವೇಶ ಪತ್ರಗಳನ್ನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಪ್ರವೇಶ ಪತ್ರಗಳನ್ನು ಪಡೆದಿರುವ ಅಭ್ಯರ್ಥಿಗಳು ಮತ್ತೆ ಪ್ರವೇಶ ಪತ್ರಗಳನ್ನು ಪಡೆಯುವ ಅವಶ್ಯಕತೆ ಇಲ್ಲ ಎಂದು ಸಂಯೋಜನಾಧಿಕಾರಿ ಪ್ರೊ. ಹೆಚ್. ರಾಜಶೇಖರ್ ತಿಳಿಸಿದ್ದಾರೆ.
Key words: mysore –university-K-Set- Examination- Extension – admission card.