ಮೈಸೂರು,ನವೆಂಬರ್,22,2021(www.justkannada.in): ಸಂತರೆಂದರೆ ಈ ಬದುಕಿಗೆ ಅಂಟಿಯೂ ಅಂಟದಂತೆ ಬಾಳಿ, ಲೋಕಕ್ಕೆ ಆಧ್ಯಾತ್ಮಿಕತೆಯ ಪರಿಮಳವನ್ನ ಬೀರಿ ದೈವತ್ವವನ್ನು ಪಡೆದವರು. ಇಂತಹ ಅಪರೂಪ ಚೇತನರ ಸಾಲಿನಲ್ಲಿ ನಿಲ್ಲುವ ಕನಕದಾಸರ ತತ್ವ, ಆದರ್ಶ, ಅವರು ಬೀರಿದ ಬೆಳಕು ನಮ್ಮನ್ನು ಸದಾ ಮುನ್ನಡೆಸುತ್ತಿರಲಿ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ನುಡಿದರು.
ಮೈಸೂರು ವಿವಿಯಲ್ಲಿ ಆಯೋಜಿಸಿದ್ಧ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಮಾತನಾಡಿದರು.
ಕನಕದಾಸರು “ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇದಾರೂ ಬಲ್ಲಿರಾ?” ಎಂದು ಕೇಳಿದ ಪ್ರಶ್ನೆ ಶತಮಾನಗಳನ್ನು ದಾಟಿ ಇಂದೂ ಸಹ ನಮ್ಮ ಕಿವಿದೆರೆಯ ಮೇಲೆ ಬೀಳುತ್ತಿದೆ. ಆ ಪ್ರಶ್ನೆ ಮತ್ತು ಅವರು ಸಾರಿದ ಸಂದೇಶದ ಕುರುಹಾಗಿ ಕನಕದಾಸರ 15 ಅಡಿಗಳ ಒಂದು ಪುತ್ತಳಿಯನ್ನು ನಿರ್ಮಿಸಲಾಗಿದೆ. ಕನಕದಾಸರು ಶಂಖವನ್ನು ಮೊಳಗಿಸುತ್ತಿರುವಂಥ ಪ್ರತಿಮೆ ಅತ್ಯಂತ ಸಾಂಕೇತಿಕವಾದದ್ದು. ಹಾಗೆಯೇ ಬಂಕಾಪುರ ಕ್ರಾಸ್ ನಲ್ಲಿ ಕನಕದಾಸರು ತಂಬೂರಿ ಮೀಟಿ ಹಾಡುತ್ತಿರುವ ಒಂದು ಪ್ರತಿಮೆ ಇದೆ. ಇದೂ ಸಹ ಭಕ್ತಸಮೂಹದಲ್ಲಿ ಬೆರಗುಂಟು ಮಾಡುತ್ತದೆ. ತಿ೦ಗಳಿನಲ್ಲಿ, ಒಂದು ಅಂದಾಜಿನ ಪ್ರಕಾರ ವಿದೇಶಿ ಪ್ರವಾಸಿಗರೂ ಸೇರಿ ಸುಮಾರು ಆರು ಸಾವಿರ ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡುವರೆಂದು ತಿಳಿದು ಬರುತ್ತದೆ ಎಂದರು.
“ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ- ಸಂತ ಕನಕದಾಸರನ್ನು ಕುರಿತು ಹಲವಾರು ಕೃತಿಗಳನ್ನು C.D.ಗಳನ್ನು ಹೊರತಂದಿದೆ. ಇಂಗ್ಲಿಷ್, ಮರಾಠ, ತೆಲುಗು ಹಾಗೂ ಹಿಂದಿ ಭಾಷೆಗೆ ಅನುವಾದವಾಗಿರುವ ಕನಕದಾಸರನ್ನು ಕುರಿತ ಪುಸ್ತಕಗಳೂ ಇವೆ.
ಕರ್ನಾಟಕ ಸಂತ ಶ್ರೇಷ್ಠರಾದ ಕನಕದಾಸರ ಚಿಂತನೆಗಳು ನಮ್ಮ ನಾಡಿನ ಗಡಿಗಳನ್ನು ದಾಟಿ ಅನ್ಯಭಾಷಿಕರಿಗೆ ತಲುಪುವುದು ಇದರಿಂದ ಸಾಧ್ಯವಾಗುತ್ತದೆ. ಬಸವೇಶ್ವರರ ತತ್ವ, ಮತ್ತು ಬಹುಭಾಷೆಗಳ ಅನುವಾದದ ಮೂಲಕ `ಹೊರನಾಡಿನವರಿಗೆ ತಲುಪುತ್ತಿರುವುದೂ ಸಂತೋಷದ ವಿಚಾರ. ಈ ಮೂಲಕ ನಮ್ಮ ಸಂತರು, ಶರಣರು ಹೀಗೆ ಕರ್ನಾಟಕದ ಕೀರ್ತಿ ಸುತ್ತಲೂ ಹಬ್ಬಲು ಕಾರಣಕರ್ತರಾಗಿದ್ದಾರೆ ಎಂದು ಪ್ರೊ. ಜಿ.ಹೇಮಂತ್ ಕುಮಾರ್ ತಿಳಿಸಿದರು.
Key words: mysore university- kanaka jayanthi-VC-Prof.G.Hemanth kumar
ENGLISH SUMMARY…
Let the ideals and principles of Kanakadasa keep leading us: UoM VC
Mysuru, November 22, 2021 (www.justkannada.in): “Saints are those who propagate the essence and perfume of spirituality to the world and attain divinity. Kanakadasa is one such rare character. I wish his tenets and ideals keep leading us always,” opined Prof. G. Hemanth Kumar, Vice-Chancellor, University of Mysore.
He inaugurated a program organized at the University of Mysore, on the occasion of Kankadasa Jayanthi today. Reciting one of Kanakadasa’s poems, “Kula, Kula, Kulavendru Hodedaadiri, Nimma Kulada Neleyanenadaroo Ballira?”, which translates into, “Do not struggle,do not fight over clan, descent, ancestry, are you aware of, the base of your clan?”, he said, it is so relevant even today. A 15 ft tall statue has been built in his memory. It is a wonderful statute,” he added.
Keywords: University of Mysore/ Prof. G. Hemanth Kumar/ Kanakadasa Jayanthi/ program