ಎಲ್ಲರೂ ಬದುಕಿನುದ್ದಕ್ಕೂ ಕನ್ನಡವನ್ನು ಪ್ರೀತಿಸುತ್ತಾ ಕನ್ನಡಾಂಬೆಯ ಸೇವೆ ಮಾಡುವಂತಾಗಬೇಕು- ಪ್ರೊ. ಜಿ.ಹೇಮಂತ್ ಕುಮಾರ್.

ಮೈಸೂರು,ಡಿಸೆಂಬರ್,1,2021(www.justkannada.in):  ಕನ್ನಡ ರಾಜ್ಯೋತ್ಸವ ಒಂದು ದಿನದ ಉತ್ಸವವಲ್ಲ, ಬದುಕಿನುದ್ದಕ್ಕೂ ಕನ್ನಡವನ್ನು ಪ್ರೀತಿಸುತ್ತಾ ಕನ್ನಡಾಂಬೆಯ ಸೇವೆಯನ್ನು ನಾವುಗಳೆಲ್ಲರೂ ಮಾಡುವಂತಾಗಬೇಕು ಎಂದು ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ನುಡಿದರು.

ಮಾನಸಗಂಗೋತ್ರಿಯ  ಕುವೆಂಪು ಅಧ್ಯಯನ ಸಂಸ್ಥೆ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್, ಕನ್ನಡ ಭಾಷೆಯು ಮನೆಯೊಳಗೆ ಸೀಮಿತವಾಗಿರದೆ ರಾಷ್ಟ್ರೀಯ ಮಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಬೆಳಗುವಂತೆ ನಮ್ಮ ಮಕ್ಕಳನ್ನು ಕನ್ನಡದಲ್ಲಿಯೇ ಅಭ್ಯಸಿಸುವಂತೆ ಪ್ರೇರೇಪಿಸಿ ಕನ್ನಡವನ್ನು ಇನ್ನೂ ಶಿಖರದೆತ್ತರಕ್ಕೆ ಏರಿಸಬೇಕು. ಬೇರೆ ಭಾಷೆಯ ಬಗ್ಗೆ ಅರಿವಿರಬೇಕು. ಆದರೆ ಕನ್ನಡ ಭಾಷೆಯೇ, ನಮ್ಮ ಮೊದಲ ಭಾಷೆಯಾಗಿರಬೇಕು. ಅದರಲ್ಲೇ ವ್ಯವಹರಿಸಿದಾಗ ಮಾತ್ರ ನಮ್ಮ ಭಾಷೆಯು ರಾಜ್ಯಗಳಲ್ಲಿ ಮತ್ತು ದೇಶದಲ್ಲಿ ಬಳಕೆಗೆ ಮತ್ತು ಬೆಳಕಿಗೆ ಬರಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಕನ್ನಡದ ಇತಿಹಾಸ, ಮಹತ್ವ, ಹೋರಾಟಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿ೦ದ ಹಾಗೂ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ  ಉದ್ದೇಶದಿ೦ದ ಕನ್ನಡ ರಾಜ್ಯೋತ್ಸವ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಕರ್ನಾಟಕ ನಾಡು ಏಕೀಕರಣವಾಗಲು ನಾಡಿನ ಹಲವು ಕವಿಗಳು. ಸಾಹಿತಿಗಳು, ವಿಚಾರವಂತರು ಸೇರಿದಂತೆ ಹಲವು ಮಹನೀಯರ ಕೊಡುಗೆ ಅಪಾರ, ಈ ಸಾಧಕರು ಸಾರಿದಂತಹ ಸಾಧನೆಯನ್ನು ನಾವುಗಳು ಮನಗಂಡು ಕನ್ನಡವನ್ನು ಕಲಿಯಬೇಕು. ನಮ್ಮ ಮಕ್ಕಳಿಗೂ ಮುಂದಿನ ಪೀಳಿಗೆಗೂ ಇದರ ಮಹತ್ವವನ್ನು ಸಾರುವಂತಹ ಕೈಂಕರ್ಯವನ್ನು ಕೈಗೊಂಡಾಗ ಮಾತ್ರ ಕನ್ನಡವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದು ಪ್ರೊ.ಜಿ,ಹೇಮಂತ್ ಕುಮಾರ್ ನುಡಿದರು.

ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾವ್, ಅನಕೃ, ಕೆ.ಶಿವರಾಮ ಕಾರಂತ, ಕುವೆ೦ಪು, ಮಾಸ್ತಿ ವೆಂಕಟೇಶ  ಅಯ್ಯಂಗರ್, ಎ.ಎನ್.ಕೃಷ್ಣರಾವ್, ಬಿ.ಎಂ ಶ್ರೀಕಂಠಯ್ಯ, ನಾಡಿಗೇರ್, ಹುಯಿಲಗೋಳ ನಾರಾಯಣರಾವ್, ಗೋರೂರು  ರಾಮಸ್ವಾಮಿ ಅಯ್ಯಂಗಾರ್, ಪಾಟೀಲ್ ಪುಟ್ಟಪ್ಪ ಸೇರಿದಂತೆ ನೂರಾರು ಮಹನೀಯರು, ಲಕ್ಷಾಂತರ ಹೋರಾಟದ ಫಲವಾಗಿ ಏಕೀಕೃತ ನಾಡನ್ನು ಕಟ್ಟಿಕೊಂಡಿದ್ದೇವೆ ಎಂದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಇನ್ನು ಮುಂದೆ ಪ್ರತಿ ವರ್ಷವು ಕನ್ನಡ ರಾಜ್ಯೋತ್ಸವದ ದಿನದಂದೇ ಕನ್ನಡ ರಾಜ್ಯೋತ್ಸವವನ್ನು ಹಮ್ಮಿಕೊಂಡು ಆ ದಿನ ಒಂದು ಕೃತಿಗಳ ಬಿಡುಗಡೆ ಅಥವಾ ಗ್ರಂಥಗಳ ಬಿಡುಗಡೆ ಕಾರ್ಯಕ್ರಮವನ್ನು, ಹಾಗೂ ಕನ್ನಡದಲ್ಲಿ ಸಾಧನೆಗೈದಿರುವ ಸಾಹಿತಿಗಳಿಗೆ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿ ಎಂದು ಪ್ರೊ. ಜಿ.ಹೇಮಂತ್ ಕುಮಾರ್ ತಿಳಿಸಿದರು.

Key words: mysore- university-kannada rajyotsava- prof-G.Hemanth kumar

ENGLISH SUMMARY…

“Everyone should love Kannada till the end of their lives and serve it- Prof. G. Hemanth Kumar
Mysuru, December 1, 2021 (www.justkannada.in): “Kannada Rajyotsava is not just a day’s celebration. Every one of us should love Kannada throughout our lives and serve it,” opined Prof. G. Hemanth Kumar, Vice-Chancellor, University of Mysore.
He was speaking after inaugurating the Kannada Rajyotsava program organized by the Kuvempu Adyayana Samsthe, held at the BMShri Auditorium, Manasagangotri today. “Kannada language shouldn’t be limited only within the four walls of a house, encourage your children to practice speaking in Kannada so that it will grow at the national level and make efforts for its development. We should know other languages. But Kannada should be our first preference. It will come into use in the State and across the nation only when we practice to communicate in our language more,” he said.
He wished the Kuvempu Kannada Adhyayana Samsthe organises the Kannada Rajyotsava program on November 1 every year in the future and make efforts to release at least one book on the occasion. I wish programs will also be held to felicitate students who have made commendable achievements in the field of literature, he added.
Keywords: Prof. G. Hemanth Kumar/ Kannada Rajyotsava program/ University of Mysore