ಮೈಸೂರು, ಜೂ.19, 2022 : (www.justkannada.in news) : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಕೆಲ ಅಧ್ಯಾಪಕರು ಸಂಶೋಧನೆ ನಡೆಸದೆ ಕೇವಲ ಮಾಧ್ಯಮಗಳಲ್ಲಿ ಪ್ರಚಾರಪಡೆಯಲು ಹಾತೊರೆಯುತ್ತಿದ್ದಾರೆ. ಇದರಿಂದ ಮೈಸೂರು ವಿವಿಗೆ ಶೈಕ್ಷಣಿಕ ವಲಯದಲ್ಲಿ ಕಪ್ಪುಚುಕ್ಕೆ ಇಟ್ಟಂತಾಗಿದೆ. ಆದ್ದರಿಂದ ಈ ಕೂಡಲೇ ಅಧ್ಯಾಪಕರ ಇಂಥ ವರ್ತನೆಗೆ ಕಡಿವಾಣ ಹಾಕಿ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸಲಹೆ ಮಾಡಿದ್ದಾರೆ.
ಈ ಸಂಬಂಧ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರಿಗೆ ಎರಡು ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. ಇದೇ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಅದರ ಸಂಪೂರ್ಣ ವಿವರ ಹೀಗಿದೆ..
ಇತ್ತಿಚಿನ ದಿನಗಳಲ್ಲಿ ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಘಟನೆಗಳನ್ನು ನೋಡುತಿದ್ದರೇ ದಿಗಿಲು ಮೂಡುವ ವಾತಾವರಣ ಸೃಷ್ಟಿ ಆಗುತ್ತಿದೆ. ಮೈಸೂರು ವಿಶ್ವವಿದ್ಯಾನಿಲಯ ಕೆಲವು ಅಧ್ಯಾಪಕರುಗಳು ವೈಜ್ಞಾನಿಕ ಸಂಶೋಧನೆಯಲ್ಲಿ ಇರುವೆ ಅಷ್ಟೂ ಕೆಲಸ ಮಾಡಿ ಆನೆ ಅಷ್ಟೂ ಮಾಡಿರುವೆ ಎಂದು ಕಪೋಲಕಲ್ಪಿತ ಪತ್ರಿಕಾ ಪ್ರಕಟನೆಗಳನ್ನು ನೀಡುತ್ತಿರುವುದನ್ನು ಗಮಸಿದ್ಧೆನೆ. ಸಂಶೋಧನೆಯಲ್ಲಿ, ಪ್ರತಿಯೊಬ್ಬ ವಿಜ್ಞಾನಿಯೂ ತನ್ನ ಸಂಶೋಧನಾ ಕಾರ್ಯವನ್ನು ವೈಜ್ಞಾನಿಕ ನಿಯತಕಾಲಿಕಗಳಲ್ಲಿ ಪ್ರಕಟಿಸುತ್ತಾನೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರತಿಯೊಬ್ಬ ವಿಜ್ಞಾನಿಯೂ ಸರಾಸರಿ ಐವತ್ತು ಸಂಶೋಧನಾ ಪ್ರಕಟಣೆಗಳನ್ನು ಪ್ರಕಟಿಸಿದ್ದಾರೆ. ನಾನು ಸಹ 560 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಜರ್ನಲ್‌ಗಳಲ್ಲಿ ಪ್ರಕಟಿಸಿದ್ದೇನೆ. 560ಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿದ್ದರೂ, ವೈಜ್ಞಾನಿಕ ಸಾಧನೆ ಗಮನಾರ್ಹವಾದಾಗ ಕೇವಲ 4 ರಿಂದ 5 ಬಾರಿ ಮಾಧ್ಯಮಗಳ ಮುಂದೆ ಹೋಗಿದ್ದೇನೆ. ಈ ದಿನಗಳಲ್ಲಿ, ಮೈಸೂರು ವಿಶ್ವವಿದ್ಯಾನಿಲಯದ ಕೆಲವು ಅಧ್ಯಾಪಕರು ಸಣ್ಣ ಸಣ್ಣ ವೈಜ್ಞಾನಿಕ ವರದಿಗಳನ್ನು ಪ್ರಕಟಿಸಿ, ದೊಡ್ಡ ಸಾಧನೆ ಮಾಡಿದ್ದೇನೆ ಎಂದು ಅತಿರೇಕದ ಕೀಳುಮಟ್ಟದ ಜನಪ್ರಿಯತೆ ಹುಚ್ಚಿನಿಂದ ಮುದ್ರಣ ಮಾಧ್ಯಮದ ಮುಂದೆ ಹೋಗುತ್ತಿದ್ದಾರೆ. ಈ ರೀತಿಯ ವರದಿಗಳು ಪ್ರಕಟಿಸುವ ಮೊದಲು ಮಾಧ್ಯಮ ಮಿತ್ರರು ಪತ್ರಿಕಾ ಟಿಪ್ಪಣಿಯ ಸತ್ಯಾಸತ್ಯತೆಯನ್ನು ತಿಳಿಯಬೇಕು ಎಂದು ಕಿವಿ ಮಾತು ಹೇಳಿದ್ದಾರೆ.
ಕೆಲವು ಅಧ್ಯಾಪಕರು ಕಳೆದ ಹಲವು ವಾರಗಳಿಂದ ಕ್ಯಾನ್ಸರ್ ಔಷಧಿ ಆವಿಷ್ಕಾರಕ್ಕೆ ಸಂಬಂಧಿಸಿದಂತೆ ಹದಿನೈದು ದಿನಕ್ಕೊಮ್ಮೆ ಪತ್ರಿಕಾ ಪ್ರಕಟಣೆ ನೀಡುತ್ತಿದ್ದಾರೆ. ಎಲ್ಲಾ ಅಧ್ಯಾಪಕರು ತಮ್ಮ ಆವಿಷ್ಕಾರಗಳ ಬಗ್ಗೆ ಮುದ್ರಣ ಮಾಧ್ಯಮದ ಮುಂದೆ ಬರಲು ಪ್ರಾರಂಭಿಸಿದರೆ, ಬಹುತೇಕ ಪ್ರತಿದಿನ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಬಹುದು, ಅಷ್ಟು ಸಂಶೋಧನಾ ಚಟುವಟಿಕೆಗಳು ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿವೆ. ಇಲ್ಲಿ ಸಾಮಾನ್ಯ ಸಂಶೋಧನಾ ಚಟುವಟಿಕೆಯನ್ನು ಅಸಾಮಾನ್ಯ ಎಂದು ಬಿಂಬಿಸಲು ಕೆಲವು ಅಧ್ಯಾಪಕರು ಪ್ರಯತ್ನಿಸುತ್ತಿದ್ದಾರೆ. ಇದು ಸಾಮಾನ್ಯ ಜನರ ಕಣ್ಣಿಗೆ ಮಣ್ಣು ಎರಚುವ ಪ್ರಯತ್ನವಷ್ಟೇ.
ಅಂತಹ ಒಂದು ಉದಾಹರಣೆಯೆಂದರೆ, Impact factor ಎಂಬ ಮಾನದಂಡ ಆಧರಿಸಿ ವೈಜ್ಞಾನಿಕ ನಿಯತಕಾಲಿಕಗಳನ್ನು ಶ್ರೇಣೀಕರಿಸಲಾಗಿದೆ. ನೇಚರ್ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಹೆಸರುವಾಸಿಯಾದ ಜರ್ನಲ್ ಆಗಿದೆ ಮತ್ತು ಅದರ impact factor 49.9 ಆಗಿರುತದೆ. ಇತೀಚಿಗೆ ಮೈಸೂರು ವಿಶ್ವವಿದ್ಯಾನಿಲಯದ ಅಧ್ಯಾಪಕರೊಬ್ಬರು, ಕಂಮ್ಯುನಿಕೇಷನ್ಸ್ ಮೆಡಿಸಿನ್ ಎಂಬ ಸಾಮಾನ್ಯದಲ್ಲಿ ಸಾಮಾನ್ಯ ಜರ್ನಲ್ ಅಲ್ಲಿ ತಮ್ಮ ಸಂಶೋಧನೆಯನ್ನು ಪ್ರಕಟಿಸಿ, ನೇಚರ್ ಜರ್ನಲ್ ಅಲ್ಲಿ ತಮ್ಮ ಲೇಕನ ಪ್ರಕಟವಾಗಿದೆ ಎಂದು ಎಲ್ಲರ ಹಾದಿ ತಪ್ಪಿಸುವ ತಿಳಿಗೇಡಿತನ ಮೆರೆದಿದ್ದಾರೆ. ಕಂಮ್ಯುನಿಕೇಷನ್ಸ್ ಮೆಡಿಸಿನ್ ಎಂಬ ಜರ್ನಲ್ impact factor 0.0 (ಸೊನ್ನೆ) ಆಗಿರುತದೆ. ನೇಚರ್ ಜರ್ನಲ್, 250 ಕ್ಕಿಂತ ಹೆಚ್ಚು ಸಣ್ಣ ಪತ್ರಿಕೆಗಳನ್ನು ಸಲಹುತ್ತಿದೆ ಹಾಗು ಆ ಸಣ್ಣ ಪತ್ರಿಕೆ ಗಳಲ್ಲಿ ಕಂಮ್ಯುನಿಕೇಷನ್ಸ್ ಮೆಡಿಸಿನ್ ಸಹ ಒಂದು. ಇಂತಹ ಬಾಲಿಶ ಪತ್ರಿಕಾ ಪ್ರಕಟಣೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಪ್ರಕಟಿಸಬೇಕೆಂದು ನಾನು ಪ್ರತ್ರಿಕ ಮಿತ್ರರಲ್ಲಿ ಕೇಳಿಕೊಳ್ಳುತೇನೆ.
ಈ ವಿಚಾರವಾಗಿ ಕುಲಪತಿಗಳು, ಕುಲಸಚಿವರು, ಸಿಂಡಿಕೇಟ್ ಸದಸ್ಯರು, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ಮತ್ತು ವಿಶ್ವವಿದ್ಯಾನಿಲಯದ ಆಡಳಿತ ವರ್ಗ, ಇಂಥಹ ಅಧ್ಯಾಪಕರು ಪತ್ರಿಕಾ ಪಾಕಟಣೆ ಗೆ ಹೋಗುವ ಮುನ್ನ, ವಿಶ್ವವಿದ್ಯಾನಿಲಯದ ಅನುಮತಿ ಪಡೆಯಬೇಕೆಂದು ಸಂಬಂಧಪಟ್ಟ ಅಧ್ಯಾಪಕರಿಗೆ ಫಾರ್ಮನು ಹೊರಡಿಸ ಬೇಕೆಂದು ಈ ಮೂಲಕ ಆಗ್ರಹಿಸುತ್ತೆನೆ. ಇಲ್ಲದಿದ್ದ ಪಕ್ಷದಲ್ಲಿ ಇಂಥಹ ಅಧ್ಯಾಪಕರುಗಳು ಅಜ್ಞಾನಿಗಳಂತೆ ನಡೆದುಕೊಂಡು ರಾಷ್ಟ್ರೀಯ ಮಟ್ಟದಲ್ಲಿ ವಿಶ್ವವಿದ್ಯಾನಿಲಯದ ಘನತೆಯನ್ನು ಕಳೆಯುತಾರೆ. ಇತ್ತೀಚಿಗೆ ನಡೆದ ಸಂಶೋಧನಾ ಒಡಂಬಡಿಕೆಗೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಆಗಮಿಸಿದ್ದ ರಾಷ್ಟ್ರೀಯ ಮಟ್ಟದ ವಿಜ್ಞಾನ ಸಂಸ್ಥೆಗಳ ನಿರ್ದೇಶಕರುಗಳು, ಈ ರೀತಿಯ ಆದರ ರಹಿತ ಪ್ರಚಾರದ ಬಗ್ಗೆ ಕೇವಲವಾಗಿ ತರ್ಕಿಸಿದರು ಮತ್ತು ಅದೇ ಅಭಿಪ್ರಾಯವನ್ನು ನನ್ನೊಂದಿಗೆ ಹಲವಾರು ಪ್ರಸಿದ್ಧ ಶಿಕ್ಷಣ ತಜ್ಞರು ವ್ಯಕ್ತಪಡಿಸಿದ್ದಾರೆ. ನೀವು ಈ ಸಮಸ್ಯೆಗಳನ್ನು ಪರಿಹರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ.
key words : mysore-university-letter-take-action-against-fake-research-work-vc