ಮೈಸೂರು ವಿವಿ: ಜುಲೈ 15ರಂದು ಸೂಕ್ಷ್ಮದರ್ಶಕಗಳ ವಿತರಣಾ ಕಾರ್ಯಕ್ರಮ.

ಮೈಸೂರು,ಜುಲೈ,11,2022(www.justkannada.in): ಮಾನಸ ಗಂಗೋತ್ರಿಯ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ವಿಭಾಗ ಅಂತರಾಷ್ಟ್ರೀಯ ಯುವ ಕೌಶಲ್ಯ ಅಭಿವೃದ್ಧಿ ದಿನದ ಅಂಗವಾಗಿ ಎಜಿ & ಪಿ ಕಂಪನಿ ವತಿಯಿಂದ ಸೂಕ್ಷ್ಮದರ್ಶಕಗಳ ವಿತರಣಾ ಕಾರ್ಯಕ್ರಮವನ್ನು ಜು.15ರಂದು ವಿಜ್ಞಾನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಂಸದ ಪ್ರತಾಪಸಿಂಹ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ. ಹೇಮಂತ್‌ ಕುಮಾರ್, ಎಜೆ & ಪಿ ಕಂಪನಿ ಮುಖ್ಯ ಆಪರೇಟಿಂಗ್ ಆಫೀಸರ್ ಚಿರಾದೀಪ್ ದತ್ತ,‌ ಸಿಂಡಿಕೇಟ್‌ ಸದಸ್ಯೆ ಡಾ. ಚೈತ್ರಾ ನಾರಾಯಣ್‌ ಅವರು ಭಾಗವಹಿಸಲಿದ್ದಾರೆ.

ರವಿ ಟಿ.ಎಸ್ (ಕ್ರೀಡೆ), ಡಾ. ರತ್ನಮ್ಮ (ಸೋಲಿಗ ಸಮುದಾಯ ಅಭಿವೃದ್ಧಿ) ಉರ್ಜಾ ಎಂ.ಪಿ (ಡಿಜಿಟಲ್ ಮಾರ್ಕೆಟಿಂಗ್), ವೆಂಕಟೇಶ್ ಎಸ್.ಐ (ಸಂವಹನ ತರಬೇತಿ) ಡಾ. ನಿಂಗರಾಜು (ಜಾನಪದ ಕಲೆ) ಅವರನ್ನು ಸನ್ಮಾನ ಮಾಡಲಾಗುವುದು ಎಂದು ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್‌ ವಿಭಾಗದ ಅಧ್ಯಕ್ಷೆ ಪ್ರೊ.ಸುತ್ತೂರು ಮಾಲಿನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Mysore University- Microscope-distribution-program – July 15.

ENGLISH SUMMARY…

University of Mysore: Microscope distribution program on July 15
Mysuru, July 11, 2022 (www.justkannada.in): The Genetics and Genomics Department of the University of Mysore has organized a program on July 15 to distribute microscopes sponsored by the AJ&P Company, on the occasion of the International Youth Skill Development Day.
MP Pratap Simha, Prof. G. Hemanth Kumar, Vice-Chancellor, University of Mysore, AJ&P Company Chief Operating Officer Chiradeep Dutta and Syndicate member Dr. Chaitra Narayan will participate.
Achievers of various fields, including Ravi T.S. (Sports), Dr. Ratnamma (Development of Soliga Community), Urja M.P. (Digital Marketing), Venkatesh S.I. (Communication Trainer), Dr. Ningaraju (Folk art) will be felicitated on the occasion, according to a press statement released by Prof. Suttur Malini, Chairperson, Genetics and Genomics Department.
Keywords: University of Mysore/ Genetics and Genomics Dept./ Microscope