ಮೈಸೂರು, ಜ.12, 2021 : (www.justkannada.in news ) ತೆಲಂಗಾಣದ ಹೈದರಾಬಾದ್ ಮೂಲದ ಸಿಎಸಐಆರ್‌ನ ಘಟಕ ಪ್ರಯೋಗಾಲಯವಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯೊಂದಿಗೆ ರಾಸಾಯನಿಕ ಜೀವಶಾಸ್ತ ವಿಷಯಕ್ಕೆ ಸಂಬಂಧಪಟ್ಟ ಒಪ್ಪಂದಕ್ಕೆ ಮೈಸೂರು ವಿಶ್ವವಿದ್ಯಾಲಯ ಸಹಿ ಹಾಕಿದೆ.
ಹೈದರಬಾದ್ ನಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಅವರು ವಿಶ್ವವಿದ್ಯಾಲಯದ ಪರವಾಗಿ ಹಾಗೂ ಐಐಸಿಟಿ, ಹೈದರಾಬಾದ್ ಪರವಾಗಿ ಎಸ್.ಚಂದ್ರಶೇಖರ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು.
ಸಿಎಸ್‌ಐಆರ್-ಐಐಸಿಟಿ, ಆಹಾರ, ಆರೋಗ್ಯ, ವಿದ್ಯುತ್ ಹಾಗೂ ಪರಿಸರಗಳಂತಹ ಮಾನವ ಕಲ್ಯಾಣಕ್ಕಾಗಿ ಅಗತ್ಯವಿರುವಂತಹ ವಿವಿಧ ಉತ್ಪನ್ನಗಳಿಗಾಗಿ ನವೀನ ಪ್ರಕ್ರಿಯೆಗಳನ್ನು ಕೈಗೊಳ್ಳುವ ರಾಸಾಯನಿಕ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವ ಒಂದು ಪ್ರತಿಷ್ಠಿತ ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರವಾಗಿದೆ. ಈ ಕೇಂದ್ರದಲ್ಲಿ ನೆಡಯುವ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕೆಲಸಗಳು ತಂತ್ರಜ್ಞಾನ ಅಭಿವೃದ್ಧಿ, ವರ್ಗಾವಣೆ ಹಾಗೂ ವಾಣಿಜ್ಯೀಕರಣದ ಅಗತ್ಯಗಳನ್ನು ಪೂರೈಸಲು ಸುಸಜ್ಜಿತ ವ್ಯವಸ್ಥೆಗಳನ್ನು ಒಳಗೊಂಡಿದೆ.
ಐದು ವರ್ಷಗಳ ಈ ಒಪ್ಪಂದ, ಈ ಕೆಳಕಂಡ ಅಂಶಗಳ ಮೂಲಕ ಸಂಯೋಜನಾತ್ಮಕ ಸಹಕಾರವನ್ನು ಒದಗಿಸುತ್ತದೆ.
೧) ನಿರ್ದಿಷ್ಟ ಆಸಕ್ತಿಯುಳ್ಳ ಕ್ಷೇತ್ರಗಳಲ್ಲಿ ಸಂಯೋಜಿತ ಸಂಶೋಧನಾ ಕಾರ್ಯಕ್ರಮಗಳು: ಸಿಎಸ್‌ಐಆರ್-ಐಐಸಿಟಿ ಹಾಗೂ ಮೈಸೂರು ವಿಶ್ವವಿದ್ಯಾಲಯವು ಜಂಟಿಯಾಗಿ ಪರಸ್ಪರ ಆಸಕ್ತಿಯುಳ್ಳ ಹಾಗೂ ಎರಡೂ ಸಂಸ್ಥೆಗಳಿಗೆ ಲಾಭದಾಯಕವಾಗುವಂತಹ ಸಂಯೋಜನಾತ್ಮಕ ಸಂಶೋಧನಾ ಕಾರ್ಯಕ್ರಮಗಳನ್ನು ಕೈಗೊಳ್ಳಲಿದೆ.
೨) ವಿದ್ಯಾರ್ಥಿ ತರಬೇತಿ ಕಾರ್ಯಕ್ರಮಗಳು: ವಿದ್ಯಾರ್ಥಿಗಳಿಗಾಗಿ ತರಬೇತಿ ಕಾರ್ಯಕ್ರಮಗಳ ಪರಿಶೋಧನೆ ಹಾಗೂ ಸಾಂಸ್ಥಿಕ ಮಾರ್ಗಸೂಚಿಗಳ ಪ್ರಕಾರ ಆಯೋಜನೆ
೩) ಬೋಧಕರ ವಿನಿಮಯ ಕಾರ್ಯಕ್ರಮಗಳು: ಪರಸ್ಪರ ಎರಡೂ ಸಂಸ್ಥೆಗಳಿಗೆ ಲಾಭದಾಯಕವಾಗುವಂಥಹ ಬೋಧಕ ವಿನಿಮಯ ಕಾರ್ಯಕ್ರಮಗಳ ಪರಿಶೋಧನೆ ಹಾಗೂ ಆಯೋಜನೆ
೪) ಉಪಕರಣಗಳ ಸೌಲಭ್ಯ ವಿನಿಮಯ: ಈ ಸೌಲಭ್ಯಗಳನ್ನು ಸಂಸ್ಥೆಗಳ ಮಾರ್ಗಸೂಚಿಗಳ ಪ್ರಕಾರ ಬಳಸಿಕೊಳ್ಳಲಾಗುತ್ತದೆ.
೫) ಜಂಟಿ ಯೋಜನೆಗಳ ಸಲ್ಲಿಕೆ: ಯೋಜನಾ ಪ್ರಸ್ತಾವನೆಗಳನ್ನು ಜಂಟಿಯಾಗಿ ಡಿಬಿಟಿ, ಸಿಎಸ್‌ಐಆರ್, ಡಿಎಸ್‌ಟಿ, ಐಸಿಎಂಆರ್ ಅಥವಾ ಇತರೆ ನಿಧಿ ಒದಗಿಸುವ ಏಜೆನ್ಸಿಗಳಿಗೆ, ಆಯ್ದ ಯೋಜನೆ/ ಅಣುಗಳ ಮುಂದಿನ ಅಧ್ಯಯನಗಳನ್ನು ಕೈಗೊಳ್ಳಲು ಅಗತ್ಯವಿರುವ ಬಾಹ್ಯ ನಿಧಿಗಾಗಿ ಸಲ್ಲಿಸಬಹುದಾಗಿದೆ.
ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ, ಆದಿ ಚುಂಚನಗಿರಿ ವಿಶ್ವವಿದ್ಯಾಲಯದ ಸಂಧೋಧನಾ ನಿರ್ದೇಶಕ ಡಾ.ಶೋಭಿತ್ ರಂಗಪ್ಪ, ವಿಜ್ಞಾನ ಭವನದ ಸಂಯೋಜಕ ಡಾ. ಚಂದ್ರ ನಾಯಕ್, ಮಾಲಿಕ್ಯುಲಾರ್ ಬಯಾಲಜಿ ವಿಭಾಗದ ಸಹಾಯಕ ಪ್ರಧ್ಯಾಪಕರಾದ ಡಾ. ಸಿ.ಡಿ. ಮೋಹನ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
KEY WORDS : MYSORE-university-MOU-Indian Institute of Chemical Technology- CSIR-Hyderabad- Telangana.
ENGLISH SUMMARY :
University of Mysore sign MoU, in the area of Chemical Biology on Tuesday day between Indian Institute of Chemical Technology, a constituent laboratory of CSIR located Hyderabad, Telangana.
CSIR-IICT is a premier R & D Institute, which has been established to carry out research in chemical sciences leading to innovative processes for a variety of products necessary for human welfare such as food, health, energy and environment and the conduct of R&D work is fully geared to meet the requirements of technology development, transfer and commercialization.
This MoU which is for five (5) years is established to provide collaborative cooperation through:
i) Collaborative Research Programs in specific fields of interest
CSIR-IICT and UOM will jointly identify specific fields to conduct collaborative research programs of mutual interest and benefit to both parties.
ii) Student Training Programs
Training programs for students will be explored and organized as per institute guidelines.
iii) Faculty Exchange Programs
Exchange programs for faculty will be explored and conducted accordingly which will be beneficial mutually for both the parties.
iv) Sharing of Instrumentation Facility
The facilities shall be used as per the prevailing guidelines of the institutes.
v) Submission of Joint projects-
Project proposals may be jointly submitted to DBT, CSIR, DST, ICMR or any other funding agencies for extramural funding for carrying out further studies of selected project/molecules.
Prof. G. Hemanth Kumar Vice chancellor, signed the MOU on behalf of University and S. Chandrashekar, Director, IICT, Hyderabad signed on behalf of the institute. Prof. Rangappa, distinguished professor of Vijnana Bhavan and Dr Chandra Nayak, Coordinator of Vijnana bhavan, Dr Shobith, Research Director of Adichunchanagiri university , Dr CD Mohan, assistant professor, Molecular biology were present.