ಮೈಸೂರು, ಡಿ.23, 2021 : (www.justkannada.in news ) ಏವಿಯೇಷನ್ ಮ್ಯಾನೇಜ್ಮೆಂಟ್, ಬಿಬಿಎ ಇನ್ ಟೂರಿಸಂ ಅಂಡ್ ಹಾಸ್ಪಿಟಾಲಿಟಿ ಹಾಗೂ ಬಿಬಿಎ ಟೂರಿಸಂ ಅಂಡ್ ಟ್ರಾವೆಲ್ ಎಂಬ ಹೊಸ ವಿಷಯಗಳ ಕೋರ್ಸ್ ಆರಂಭಿಸಲು ಮೈಸೂರು ವಿವಿ ಹಸಿರು ನಿಶಾನೆ.
ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರ ನೇತೃತ್ವದಲ್ಲಿ ವಿಜ್ಞಾನ ಭವನದಲ್ಲಿ ಗುರುವಾರ ನಡೆದ ಶಿಕ್ಷಣ ಮಂಡಳಿ ಮೂರನೇ ಸಾಮಾನ್ಯ ಸಭೆಯಲ್ಲಿ ವಿವಿಧ ಕೋರ್ಸ್‌ಗಳ ಆರಂಭಕ್ಕೆ ಅನುಮೋದನೆ ದೊರಕಿತು.
ಸಭೆಯ ವಿವರ ಹೀಗಿದೆ..
ಮೈಸೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿರುವ ಕಾರಣ ಹಲವು ವಿಷಯಗಳಲ್ಲಿ ಕೋರ್ಸ್‌ಗಳನ್ನು ವಿಸ್ತರಣೆ ಮಾಡಲಾಗುತ್ತಿದೆ. ಈ ಸಂಬಂಧ ವಾಣಿಜ್ಯನಿಕಾಯ ಡೀನ್ ಪ್ರೊ .ರಾಜಶೇಖರ್, ಬಿಬಿಎ ಇನ್ ಏವಿಯೇಷನ್ ಮ್ಯಾನೇಜ್ಮೆಂಟ್, ಬಿಬಿಎ ಇನ್ ಟೂರಿಸಂ ಅಂಡ್ ಹಾಸ್ಪಿಟಾಲಿಟಿ ಹಾಗೂ ಬಿಬಿಎ ಟೂರಿಸಂ ಅಂಡ್ ಟ್ರಾವೆಲ್ ಎಂಬ ಹೊಸ ವಿಷಯಗಳ ಕೋರ್ಸ್ ಆರಂಭಿಸಲು ಅನುಮತಿ ಕೋರಿದರು. ಇದಕ್ಕೆ ಸದಸ್ಯರು ಒಕ್ಕೊರಲಿನ ಸಮ್ಮತಿ ತಿಳಿಸಿದರು.
ಅದರಂತೆ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಯುಜಿ- ಬಿಸಿಎ ವಿಭಾಗದಲ್ಲಿ ‘ಕುಡ್ ಕಂಪ್ಯೂಟಿಂಗ್ ಅಂಡ್ ಡಿಜಿಟಲ್ ಸೈನ್ಸ್, ಇಂಟರ್‌ನೆಟ್ ಆಫ್ ಥಿಂಗ್ಸ್, ಪೊರೆನ್ಸಿಕ್ ಸೈನ್ಸ್, ಫುಡ್ ಪ್ರೊಸೆಸಿಂಗ್ ಅಂಡ್ ಕ್ವಾಲಿಟಿ ಮ್ಯಾನೇಜ್ಮೆಂಟ್, ಜಿಯೋಲಜಿ, ಡಿಜಿಟಲ್ ಆರ್ಕಿಟೆಕ್ಚರ್, ಸರ್ಟಿಫಿಕೇಟ್ ಕೋರ್ಸ್‌ಇನ್ ಡೇಟಾ ಸೈನ್ಸ್, ಸರ್ಟಿಫಿಕೇಟ್ ಕೋರ್ಸ್ ಇನ್ ಮಿಷನ್ ಲರ್ನಿಂಗ್ ವಿತ್ ಪೈಥಾನ್ ಪ್ರೊಗ್ರಾಮಿಂಗ್, ಸರ್ಟಿಫಿಕೇಟ್ ಕೋರ್ಸ್ ಇನ್ ಡಿಜಿಟಲ್ ಹೆಲ್ತ್ ಕೋರ್ಸ್ ವಿಷಯಗಳನ್ನು ಆರಂಭಿಸಲು ಅನುಮೋದನೆ ನೀಡಲಾಯಿತು.
ಜೊತೆಗೆ ಎನ್‌ಇಪಿ ಅನ್ವಯ ಅಂಬೇಡ್ಕರ್ ಅಧ್ಯಯನ ಐಚ್ಛಿಕ ವಿಷಯದಲ್ಲಿ 5 ರಿಂದ 8ನೇ ಸೆಮಿಸ್ಟರ್ ಪಠ್ಯಕ್ರಮ ಮತ್ತು ‘ಬುದ್ಧ ಅಧ್ಯಯನ’ವನ್ನು ಐಚ್ಚಿಕ ವಿಷಯವನ್ನಾಗಿ ಪರಿಗಣಿಸಲು ಅನುಮೋದಿಸಲಾಯಿತು.
ವಿವಿ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಮಾತನಾಡಿ, ವಿವಿಯ ಪರಾಮರ್ಶನ ಸಮಿತಿ ಸದಸ್ಯರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜು, ಎಸ್‌ಬಿಆರ್‌ಆರ್ ಮಹಾಜನ ಪ್ರಥಮದರ್ಜೆ ಕಾಲೇಜು, ಜೆಎಸ್‌ಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಸೇಂಟ್ ಫಿಲೋಮಿನಾ ಕಾಲೇಜು, ಮದ್ದೂರು ತಾಲೂಕು ಭಾರತೀ ನಗರದ ಭಾರತೀ ಕಾಲೇಜು, ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜು, ಹಾಸನ ಜಿಲ್ಲೆಯ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಹಾಗೂ ಸರ್ಕಾರಿ ವಿಜ್ಞಾನ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, 1 ವರ್ಷದ ಅವಧಿಗೆ ಸ್ವಾಯತ್ತತೆಯನ್ನು ಮುಂದುವರಿಸಲಾಗುತ್ತಿದೆ ಎಂದರು.
ಚಿನ್ನದ ಪದಕಕ್ಕೆ ಹೊಸ ಸೇರ್ಪಡೆ:
ಹೊಸದಾಗಿ ಪ್ರೊ.ಎಂ.ಯಮುನಾಚಾರ್ಯ ಮೆಮೊರಿಯಲ್ ಟ್ರಸ್ಟ್ (1 ಲಕ್ಷ ರೂ.) ನಗದು ಬಹುಮಾನ, ‘ಹನುಮಪ್ಪ – ಚಿನ್ನಮ್ಮ ಯಮಲೂರು (50 ಸಾವಿರ ರೂ.)ನಗದು ಬಹುಮಾನ, ವೈ.ಮುನಿಯಪ್ಪ- ರುಕ್ಮಿಣಿಯಮ್ಮ, ಡಾ.ಎಚ್.ಸುದರ್ಶನ್, ಪ್ರೊ.ಬಿ.ಯು.ಓಂಕಾರಪ್ಪ -ನಿರ್ಮಲ ದಾವಣಗೆರೆ ಹಾಗೂ ನಾಗಮಣಿ(ಲೇಟ್)- ಸುಂದರ್ ರಾಜ್ ಹೆಸರಿನಲ್ಲಿ ತಲಾ 1 ಲಕ್ಷ ರೂ. ಗಳಲ್ಲಿ ತಲಾ ಒಂದೊಂದು ಚಿನ್ನದ ಪದಕಗಳನ್ನು ಸ್ಥಾಪಿಸಲು ಸಭೆಯಲ್ಲಿ ಅನುಮತಿ ನೀಡಲಾಯಿತು.
ಕುಲಸಚಿವ ಪ್ರೊ.ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್, ಶೈಕ್ಷಣಿಕ ಮಂಡಳಿ ಸದಸ್ಯರಾದ ಎಂಎಲ್‌ಸಿ ಆರ್.ಧರ್ಮಸೇನಾ, ಪ್ರೊ.ಎಂ.ಎಸ್.ಶಾರದಾ, ಪ್ರೊ.ಕೆ.ಎನ್.ಅಮೃತಾ, ಪ್ರೊ.ರಾಜ್‌ಕುಮಾರ್ ಎಚ್.ಗರಂಪಲ್ಲಿ, ಪ್ರೊ.ಎಂ.ಎಸ್.ನಳಿನಿ, ಪ್ರೊ.ಕೆ.ಕೆಂಪರಾಜು, ಪ್ರೊ.ಕೆ.ಗೋಪಾಲ್ ಮರಾಟೆ, ಪ್ರೊ.ಜಿ.ಆರ್.ಜನಾರ್ಧನ್, ಪ್ರೊ.ಶೋಭಾ ಜಗನ್ನಾಥ್, ಪ್ರೊ.ಎಸ್.ಲೀಲಾವತಿ, ಪ್ರೊ.ಎಚ್.ಎಸ್.ಅಪರ್ಣಾ, ಪ್ರೊ.ಕೆ.ರಾಮಚಂದ್ರ ಕಿಣಿ, ಪ್ರೊ.ಎಸ್.ಉಮೇಶ್, ಡಾ.ಎಸ್.ಲೋಕೇಶ್, ಪ್ರೊ.ವೈ.ಬಿ.ಬಸವರಾಜು, ಪ್ರೊ.ನಾಗರಾಜ್ ನಾಯಕ್, ಪ್ರೊ.ಎಚ್.ಡಿ.ರೇವಣ್ಣ ಸಿದ್ದಪ್ಪ, ಪ್ರೊ.ಕೆ.ಎನ್.ಮೋಹನ, ಡಾ.ಎಂ.ಪಿ.ಸದಾಶಿವಯ್ಯ ಉಪಸ್ಥಿತರಿದ್ದರು.
KEY WORDS : Mysore-university-new-courses-food-science-digital-computer-code
ENGLISH SUMMARY…
UoM to commence various courses soon
Mysuru, December 23, 2021 (www.justkannada.in): The University of Mysore has given a green signal to start various new courses including Aviation Management, BBA in Tourism and Hospitality, and BBA – Tourism, and Travel.
The annual general body meeting of the education board of the University was held at the Vignana Bhavana, in Manasagangotri campus today.
Prof. Rajashekar, Dean, Commerce Department, University of Mysore explained that steps are being taken to extend the number of courses in several subjects as per the new NEP. He said that the department proposes to start new courses like BBA – Aviation Management, BBA – Tourism and Hospitality, and BBA – Tourism and Travel, for which all the members agreed.
Approved courses which will be started from the coming academic year are as follows: UG Science and Technology – under the BCA section – Cloud Computing and Digital Science, Internet of Things, Forensic Science, Food Processing and Quality Management, Geology, Digital Architecture, Certificate Course in Data Science, Certificate Course in Machine Learning with Python Programming, Certificate Course in Digital Health.
Keywords: University of Mysore/new courses/ next academic year