ಎನ್‌ಇಪಿ ಜಾಗೃತಿಗೆ ಸಹಾಯವಾಣಿ: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

 

ಮೈಸೂರು, ಆ.20, 2021 : (www.justkannada.in news) ಸಮರ್ಪಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಉದ್ದೇಶದಿಂದ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೆ ವಿವಿ ಮಟ್ಟದಲ್ಲೇ ಸಹಾಯವಾಣಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಕ್ರಾಫರ್ಡ್ ಭವನದ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ 2020 ಒಂದು ದಿನದ ಕಾರ್ಯಾಗಾರ ಮತ್ತು ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿವಿ ಮಟ್ಟದಲ್ಲಿ ಅಷ್ಟೇ ಅಲ್ಲದೆ ಕಾಲೇಜುಗಳಲ್ಲಿ ಹೆಲ್ಪ್‌ಡೆಸ್ಕ್ ಪ್ರಾರಂಭ ಮಾಡಲಾಗುವುದು. ಜೊತೆಗೆ ವಿವಿ ಅಧೀನ ಕಾಲೇಜುಗಳಲ್ಲಿ ಕಾರ್ಯಾಗಾರಗಳ ಮೂಲಕ ಜಾಗೃತಿ ಮೂಡಿಸಲಾಗುವುದು. ತರಗತಿ ಆರಂಭದ ನಂತರ ವಿಷಯವಾರು ಕಾರ್ಯಾಗಾರ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.

ಹೀಗಿರಲಿದೆ ಶೈಕ್ಷಣಿಕ ಕ್ರೆಡಿಟ್

ಮೊದಲ ವರ್ಷ ಸರ್ಟಿಫಿಕೇಟ್ ಕೋರ್ಸ್ ಗೆ ವಿದ್ಯಾರ್ಥಿಗಳು 48 ಕ್ರೆಡಿಟ್ ಪಡೆಯಬೇಕು. ದ್ವೀತಿಯ ವರ್ಷ ಡಿಪ್ಲೊಮಾ ಕೋರ್ಸ್ ಗೆ 96 ಕ್ರೆಡಿಟ್, ಮೂರನೇ ವರ್ಷ ಬ್ಯಾಚುಲರ್ ಪದವಿ ಕೋರ್ಸ್ 136 ಕ್ರೆಡಿಟ್, ನಾಲ್ಕನೇ ವರ್ಷ ಬ್ಯಾಚುಲರ್ ಪದವಿ ಆಫ್ ಆನರ್ಸ್ 176 ಕ್ರೆಡಿಟ್ ನಿಗದಿ‌ಮಾಡಲಾಗಿದೆ ಎಂದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಸಂಸದ ಪ್ರತಾಪಸಿಂಹ, ಶಾಸಕ ಎಲ್.ನಾಗೇಂದ್ರ, ವಿಶ್ರಾಂತ ಕುಲಪತಿ ಪ್ರೊ.ತಿಮ್ಮೇಗೌಡ ಬಿ., ಕುಲಸಚಿವ ಪ್ರೊ.ಆರ್.ಶಿವಪ್ಪ ಇದ್ದರು.

key words : mysore-university-NEP-seminor-vc-hemanth-kumar-help-desk