ಕೇಂದ್ರದ NIRF ರ್ಯಾಂಕಿಂಗ್ ಪಟ್ಟಿಯಲ್ಲಿ  ಹೊಸ ಇತಿಹಾಸ ಸೃಷ್ಠಿಸಿದ ಮೈಸೂರು ವಿವಿ….

ಮೈಸೂರು,ಜೂ,11,2020(www.justkannada.in):  ಪ್ರತಿಷ್ಠಿತ ಮೈಸೂರು ವಿಶ್ವ ವಿದ್ಯಾನಿಲಯಕ್ಕೆ ಮತ್ತೊಂದು ಪ್ರಶಸ್ತಿಯ ಗರಿ ಸಿಕ್ಕಿದೆ. ಕೇಂದ್ರ ಸರ್ಕಾರದ MHRD ಅಡಿಯಲ್ಲಿ ಕೊಡಮಾಡುವ ನ್ಯಾಷನಲ್ ಇನ್ಸ್ ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್ (NIRF) ಪ್ರಶಸ್ತಿಗೆ ಮೈಸೂರು ವಿಶ್ವ ವಿದ್ಯಾನಿಲಯ ಆಯ್ಕೆಯಾಗಿದೆ.

ಕೇಂದ್ರ ಸರ್ಕಾರದ MHRD ದೇಶದ ಐಐಟಿ, ಐಐಸಿಗಳ ಮಾಹಿತಿಯನ್ನ ಸಂಗ್ರಹಿಸಿ  ಈ ರ್ಯಾಂಕ್ ನೀಡುತ್ತದೆ. ಈ ರ್ಯಾಂಕ್ ನಲ್ಲಿ ಇಡೀ ದೇಶದಲ್ಲೇ ಮೈಸೂರು ವಿವಿ 27ನೇ ಸ್ಥಾನದಲ್ಲಿದೆ. ಕಳೆದ ಹಲವು ದಶಕಗಳ ಬಳಿಕ ಮೈಸೂರು ವಿವಿ ಈ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ಸಂತಸ ವ್ಯಕ್ತಪಡಿಸಿದರು.

ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್, ಕೇಂದ್ರ ಸರ್ಕಾರದ MHRD ಅಡಿಯಲ್ಲಿ ಕೊಡಮಾಡುವ ನ್ಯಾಷನಲ್ ಇನ್ಸ್ ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್ (NIRF) ಪ್ರಶಸ್ತಿಗೆ ಮೈಸೂರು ವಿವಿ ಆಯ್ಕೆಯಾಗಿರುವುದು ಸಂತಸದ ಸಂಗತಿ. ಕಳೆದ ಬಾರಿ ಮೈಸೂರು ವಿವಿ 54ನೇ ರ್ಯಾಂಕ್ ನಲ್ಲಿತ್ತು. ಈ ಬಾರಿ 27ನೇ ರ್ಯಾಂಕ್ ಬಂದಿರುವುದು  ನಿಜವಾದ ಗಣನೀಯ ಸಾಧನೆ. ವಿವಿ ಅಭಿವೃದ್ಧಿಗೆ ಸಹಕಾರಿ. ಇದಕ್ಕೆ ಕಾರಣರಾದ ಎಲ್ಲಾ ಅಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.mysire-university-nirf-ranking-place

ಹಾಗೆಯೇ ಇನ್ನು ಮುಂದೆ ಮೈಸೂರು ವಿವಿ ಹೆಚ್ಚಿನ ರ್ಯಾಂಕ್ ಪಡೆಯಲು ಪ್ರಯತ್ನಿಸುತ್ತೇವೆ. ಇದೇ ವರ್ಷ ನ್ಯಾಕ್ ಗೆ ಹೋಗುತ್ತೆ. ಹೀಗಾಗಿ ಮೈಸೂರು ವಿವಿ ನ್ಯಾಕ್ ನಲ್ಲಿ ಹೆಚ್ಚಿನ ಅಂಕ ಗಳಿಸಲು ಈ ರ್ಯಾಂಕ್ ಅನುಕೂಲವಾಗಲಿದೆ ಎಂದು ಪ್ರೊ. ಹೇಮಂತ್ ಕುಮಾರ್ ಹರ್ಷ ವ್ಯಕ್ತಪಡಿಸಿದರು.

oooooo

Key words:  Mysore university-NIRF- Ranking-place