ಅ.21 ರಂದು ಮೈಸೂರು ವಿವಿಯಲ್ಲಿ ಪ್ರೊ. ನಾಡಿಗ ಕೃಷ್ಣಮೂರ್ತಿ ಜನ್ಮಶತಮಾನೋತ್ಸವ ಸಮಾರಂಭ.

ಮೈಸೂರು,ಅಕ್ಟೋಬರ್,18,2021(www.justkannada.in):  ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ಮಾಧ್ಯಮ ಅಕಾಡೆಮಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 21ರಂದು ಗುರುವಾರ ಭಾರತದಲ್ಲಿ ಪತ್ರಿಕಾ ಶಿಕ್ಷಣದ ಆದ್ಯ ಪ್ರವರ್ತಕರಾದ ಪ್ರೊ. ನಾಡಿಗ ಕೃಷ್ಣಮೂರ್ತಿ ಅವರ ಜನ್ಮಶತಮಾನೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ.

ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿರುವ ವಿಜ್ಞಾನಭವನದ ಸೆಮಿನಾರ್ ಹಾಲ್‌ ನಲ್ಲಿ ಅಂದು ಬೆಳಗ್ಗೆ 10.30 ಗಂಟೆಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌ ಸಮಾರಂಭವನ್ನು ಉದ್ಘಾಟಿಸುವರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್‌.ಟಿ.ರವಿಕುಮಾರ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಕೆ.ಸದಾಶಿವ ಶೆಣೈ ಅಧ್ಯಕ್ಷತೆ ವಹಿಸುವರು.

ಸಮಾರಂಭದಲ್ಲಿ ಅಸ್ಸಾಂನ ಸಿಲ್‌ ಚಾರ್‌ನಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಸಹಕುಲಪತಿ ಪ್ರೊ.ಕೆ.ವಿ.ನಾಗರಾಜ್ ಅವರು ಪ್ರೊ.ನಾಡಿಗರ ನೆನಪು ಹಾಗೂ ಮಾಧ್ಯಮ ಶಿಕ್ಷಣದ ಮುಂದಿನ ಮಾರ್ಗ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುವರು ಎಂದು ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ನಿರಂಜನ ವಾನಳ್ಳಿ ಸೋಮವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Key words: mysore university- October-21st– Pro. Nadiga Krishnamurthi -Birth Anniversary -Celebration.

ENGLISH SUMMARY…

Prof. Nadig Krishnamurthy’s birth anniversary program at UoM on Oct. 21
Mysuru, October 18, 2021 (www.justkannada.in): The University of Mysore, under the auspices of the Karnataka Media Academy, and the Mysuru District Journalists Association, has organized a program on October 21, Thursday, on the occasion of the birth anniversary of Prof. Nadig Krishnamurthy, a pioneer in Journalism education.
The program will be held at the Seminar Hall, Vignana Bhavan, in Manasaganogtri campus, of the University of Mysore, at 10.30 am. Prof. G. Hemanth Kumar, Vice-Chancellor, University of Mysore, will inaugurate the program. S.T. Ravikumar, President, Mysuru District Journalists Association, will be the chief guest, and K. Sadashiva Shenoi, President, Karnataka Media Academy, will preside.
Prof. K.V. Nagaraj, former Associate Chancellor, Central University, located at Silchar in Assam, will deliver a special lecture on the topic, ” Reminisces of Prof. Nadig and the Future of Journalism Education,” according to a press release issued by Prof. Niranjan Vanalli, Head, Journalism and Mass Communication Department, University of Mysore.
Keywords: University of Mysore/ birth anniversary/ program/ Prof. Nadig Krishnamurthy/ October 21