ಮಾನಸಗಂಗೋತ್ರಿಯಲ್ಲಿ ಹಳೆಯ ವಿದ್ಯಾರ್ಥಿಗಳ ಸಮಾಗಮ, ಸಂಭ್ರಮ

ಮೈಸೂರು,ಜನವರಿ,7,2025 (www.justkannada.in): ಅನಿರೀಕ್ಷಿತ ಭೇಟಿ, ಎಲ್ಲೆಂದರಲ್ಲಿ ಸಂಭ್ರಮ, ಹಳೆ ವಿದ್ಯಾರ್ಥಿಗಳ ಬಹುದಿನದ ಕನಸೊಂದು ಕೈಗೂಡಿತ್ತು. ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಅಧ್ಯಯನ ವಿಭಾಗದಲ್ಲಿ ಹಳೆಯ ವಿದ್ಯಾರ್ಥಿಗಳ ಸಮಾಗಮ, ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಸಮಾರಂಭ ನೆರವೇರಿತು.

ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳಾದ ಪ್ರೊ. ಪದ್ಮನಾಭ, ಪ್ರೊ. ಉಷಾರಾಣಿ, ಪ್ರೊ. ಜೋಸೆಫ್, ಪ್ರೊ.ಎಂ.ಎಸ್. ಸಪ್ಪಾ ಅವರು ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿದರು.

ನಂತರ ವಿಭಾಗದಿಂದ ಹೊರಬಂದ ಅನೇಕರು ಒಂದೆಡೆ ಸೇರಿ ಸಂಭ್ರಮಿಸಿದರು. ಎಷ್ಟೋ ವರ್ಷಗಳ ನಂತರ ತಮ್ಮ ಹಳೆಯ, ಗೆಳೆಯ, ಗೆಳತಿಯರ ಜೊತೆ ಹಿಂದಿನ ನೆನಪುಗಳನ್ನ ಸ್ಮರಿಸಿದರು.  ಹಾಗೆಯೇ ತಮಗೆ ವಿದ್ಯೆಯನ್ನು ಧಾರೆಯೆರೆದ ನೆಚ್ಚಿನ ಪ್ರಾಧ್ಯಾಪಕರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ವಿಭಾಗ ಹಳೆಯ ವಿದ್ಯಾರ್ಥಿಗಳಾದ ಜೋಸೆಫಿನ್, ಕಮಲ್ ಗೋಪಿನಾಥ್, ಡಾ. ಮರಿಸ್ವಾಮಿ, ಲಕ್ಷ್ಮೀಕಾಂತ್, ಮುರಳಿ ಮೋಹನ್, ಕೆ.ಪಿ.ನಾಗರಾಜ್, ರವಿಪಾಂಡವಪುರ, ಜವರೇಗೌಡ, ಪವಿತ್ರ ಹಾಗೂ ವಿಭಾಗದ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮೈಸೂರು ವಿಶ್ವವಿದ್ಯಾನಿಲಯದ ಮಾಸನಗಂಗೋತ್ರಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿ ಪ್ರೊ. ಎಂ.ಎಸ್. ಸಪ್ನಾ, ಉಪಾಧ್ಯಕ್ಷರಾಗಿ ಡಾ. ಗೌತಮ್ ಮಾಚಯ್ಯ ಆಯ್ಕೆಯಾದರು.

ಕಾರ್ಯದರ್ಶಿಯಾಗಿ ಡಾ.ಸಿ. ರಾಕೇಶ್, ಸಹ ಕಾರ್ಯದರ್ಶಿ ಜವರೇಗೌಡ, ಖಜಾಂಚಿಯಾಗಿ ಶ್ರೀನಿವಾಸಗೌಡ, ಗೌರವ ಅಧ್ಯಕ್ಷರಾಗಿ ಪ್ರೊ. ಪದ್ಮನಾಭ, ಗೌರವ ಕಾರ್ಯದರ್ಶಿಯಾಗಿ ಪ್ರೊ. ಜೋಸೆಫ್ ಅವರನ್ನು ಆಯ್ಕೆ ಮಾಡಲಾಯಿತು. ಪ್ರೊ. ಉಷಾರಾಣಿ, ಅರುಣ್, ಶೈಲಶ್ ರಾಜ್ ಅರಸ್, ರುದ್ರಗೌಡ ಮುರಾಳ, ನಿವೇದಿತಾ, ಚಂದ್ರಶೇಖರ್, ಕವನ, ಸ್ಮಿತಾ, ಸತೀಶ್, ವೆಂಕಟೇಶ್, ಪ್ರೀತಿ ನಾಗರಾಜ್, ಕೆ.ಪಿ. ಓಂಕಾರ ಮೂರ್ತಿ, ನಾಗೇಶ್ ಪಾಣತ್ತಲೆ, ಲೋಕೇಶ್ ಮೊಸಳೆ ಅವರನ್ನು ಸಂಘದ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು.

Key words: mysore university, Communication and Journalism, old students