ಮೈಸೂರು ವಿಶ್ವವಿದ್ಯಾಲಲಯ, ಕುವೆಂಪು ವಿಶ್ವವಿದ್ಯಾಲಯಗಳಿಂದ ಆನ್‌ಲೈನ್ ಪದವಿ ಕೋರ್ಸ್ಗಳು

ಮೈಸೂರು, ಜೂನ್ ೨೧, ೨೦೨೧ (www.justkannada.in): ಮೈಸೂರು ವಿಶ್ವವಿದ್ಯಾಲಯ ಹಾಗೂ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯಗಳಿಗೆ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ಆನ್‌ಲೈನ್ ಕೋರ್ಸ್ಗಳನ್ನು ನಡೆಸಲು ಅನುಮತಿ ನೀಡಿದೆ.

jk

ಈ ಬಗ್ಗೆ ಮಾತನಾಡಿದ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಅವರು, “ನಮಗೆ ೧೦ ಪಿಜಿ ಹಾಗೂ ಮೂರು ಯುಜಿ ಕೋರ್ಸ್ಗಳೂ ಒಳಗೊಂಡಂತೆ ಒಟ್ಟು ೧೩ ವಿಶೇಷ ಕೋರ್ಸುಗಳನ್ನು ಆನ್‌ಲೈನ್ ಮೂಲಕ ನಡೆಸಲು ಯುಜಿಸಿ ಅನುಮತಿ ನೀಡಿದೆ,” ಎಂದಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯಕ್ಕೆ ಬಿಬಿಎಂ, ಬಿ.ಕಾಂ, ಬಿಎ, ಎಂಬಿಎ, ಎಂಕಾಂ ಹಾಗೂ ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ಆಂಗ್ಲ ಹಾಗೂ ಕನ್ನಡ ಸಾಹಿತ್ಯದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ನಡೆಸಲು ಅನುಮತಿ ನೀಡಿದೆ. ಈ ಕುರಿತು ಮಾತನಾಡಿದ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾದ ಎಸ್.ಎಸ್. ಪಾಟೀಲ್ ಅವರು, “ಈಗ ನಾವು ಕೋರ್ಸ್ಗಳನ್ನು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಕೊಂಡೊಯ್ಯಬಹುದಾಗಿದೆ,” ಎಂದು ತಿಳಿಸುತ್ತಾ ಈ ಬೆಳವಣಿಗೆ ಒಂದು ಹೆಮ್ಮೆ ಪಡುವ ಸಂಗತಿ, ಇದರಿಂದ ವಿಶ್ವವಿದ್ಯಾಲಯ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ತಲುಪಲು ನೆರವಾಗುತ್ತದೆ ಎಂದು ತಿಳಿಸಿದ್ದಾರೆ.

Mysore university- Degree- Examination- VC-Prof.G.Hemant Kumar

 

key words : mysore-university-online-degree-courses-ugc