ಮೈಸೂರು, ಅಕ್ಟೊಬರ್,07,2020 : ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳಿಂದ ಮೈಸೂರು ವಿವಿಯ ಒಟ್ಟು 169 ಪ್ರಥಮ ದರ್ಜೆ ಕಾಲೇಜುಗಳಿಗೆ ಸಂಯೋಜನೆ ನೀಡಲಾಗಿದೆ ಎಂದು ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ. ಎಸ್. ಶ್ರೀಕಂಠಸ್ವಾಮಿ ತಿಳಿಸಿದರು.
ಬುಧವಾರ ವಿಜ್ಞಾನಭವನದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ‘’ಮೈಸೂರು ವಿಶ್ವವಿದ್ಯಾನಿಲಯ ಕಾರ್ಯಸೂಚಿ ಶಿಕ್ಷಣ ಮಂಡಳಿಯ ವಿಶೇಷ ಸಭೆ’’ ಯಲ್ಲಿ ಅವರು 2020-21ನೇ ಸಾಲಿಗೆ ಪ್ರಥಮ ದರ್ಜೆ ಕಾಲೇಜುಗಳಿಗೆ ಸಂಯೋಜನೆ ಮುಂದುವರಿಕೆ, ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೊಸ ಕೋರ್ಸ್ ಗಳು, ವಿಷಯಗಳು, ಕಾಂಬಿನೇಷನ್ ಗಳನ್ನು ಆರಂಭಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿ ನೀಡಿದರು.
ಮೈಸೂರು ಜಿಲ್ಲೆಯಲ್ಲಿ ಸರ್ಕಾರಿ ಪ್ರ.ದ.ಕಾಲೇಜುಗಳು(23), ಅನುದಾನಿತ ಪ್ರ.ದ.ಕಾಲೇಜು(08), ಅನುದಾನರಹಿತ ಪ್ರ.ದ.ಕಾಲೇಜು(44), ಹೋಟೆಲ್ ಮ್ಯಾನೇಜ್ ಮೆಂಟ್ ಇನ್ಸ್ ಟಿಟ್ಯೂಷನ್ಸ್, ವಾಕ್ ಮತ್ತು ಶ್ರವನ ಸಂಸ್ಥೆಗಳು(02) ಒಟ್ಟು 78 ಕಾಲೇಜು ಹಾಗೂ ಚಾಮರಾಜನಗರ ಜಿಲ್ಲೆ ಸರ್ಕಾರಿ ಪ್ರ.ದ.ಕಾಲೇಜುಗಳು(08), ಅನುದಾನಿತ ಪ್ರ.ದ.ಕಾಲೇಜು(04), ಅನುದಾನರಹಿತ ಪ್ರ.ದ.ಕಾಲೇಜು(05) ಸೇರಿ ಒಟ್ಟು 17 ಕಾಲೇಜು, ಮಂಡ್ಯ ಜಿಲ್ಲೆಯ ಸರ್ಕಾರಿ ಪ್ರ.ದ.ಕಾಲೇಜುಗಳು(13, ಅನುದಾನಿತ ಪ್ರ.ದ.ಕಾಲೇಜು(06), ಅನುದಾನರಹಿತ ಪ್ರ.ದ.ಕಾಲೇಜು(13) ಸೇರಿ ಒಟ್ಟು 32 ಕಾಲೇಜುಗಳು, ಹಾಸನ ಜಿಲ್ಲೆಯಲ್ಲಿ ಸರ್ಕಾರಿ ಪ್ರ.ದ.ಕಾಲೇಜುಗಳು(21), ಸರ್ಕಾರಿ ಗೃಹವಿಜ್ಞಾನ ಕಾಲೇಜುಗಳು(02), ಅನುದಾನಿತ ಪ್ರ.ದ.ಕಾಲೇಜು(05), ಅನುದಾನ ರಹಿತ ಪ್ರ.ದ.ಕಾಲೇಜು(14) ಒಟ್ಟು 42 ಕಾಲೇಜುಗಳನ್ನು ಸಂಯೋಜನೆ ನೀಡಲಾಗಿದೆ ಎಂದು ವಿವರಿಸಿದರು.
ಚಾಮರಾಜನಗರ ಜಿಲ್ಲೆಯ ತೆರೆಕಣಾಂಬಿ ಸರ್ಕಾರಿ ಪ್ರ.ದರ್ಜೆ ಕಾಲೇಜು ಹಾಗೂ ಹಾಸನ ಜಿಲ್ಲೆಯ ಹೆತ್ತೂರು ಸರ್ಕಾರಿ ಪ್ರ.ದರ್ಜೆ ಕಾಲೇಜು ಹಾಗೂ ಅರೇಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಸರ್ಕಾರದ ಆದೇಶದಂತೆ ಸ್ಥಳಾಂತರಿಸಲಾಗಿದೆ. ಮುಂದುವರಿಕೆ ಸಂಯೋಜನೆ ಕೋರಿ ಯಾವುದೇ ಪ್ರ.ದರ್ಜೆ ಕಾಲೇಜು ಈತನಕ ಅರ್ಜಿ ಸಲ್ಲಿಸಿಲ್ಲ ಎಂದು ಡಾ. ಶ್ರೀಕಂಠಸ್ವಾಮಿ ಸ್ಪಷ್ಟಪಡಿಸಿದರು.
2020-21ನೇ ಶೈಕ್ಷಣಿಕ ವರ್ಷಕ್ಕೆ ಸ್ಥಳೀಯ ತನಿಖಾ ಸಮಿತಿಯು ನೀಡಿರುವ ತಾತ್ಕಾಲಿಕ, ಶಾಶ್ವತ ಸಂಯೋಜನೆಯಡಿ ಇರುವ ಶಿಕ್ಷಣ, ದೈಹಿಕ ಶಿಕ್ಷಣ ಕಾಲೇಜುಗಳು (35) ಶಿಕ್ಷಣ ಕಾಲೇಜುಗಳ ಸಂಯೋಜನಾ ವರದಿಗಳನ್ನು ಪ್ರಾಧಿಕಾರದ ಗಮನಕ್ಕೆ ತರಲಾಗಿದೆ ಎಂದರು.
ಸಂಯೋಜನೆ, ಮಾನ್ಯತೆ ಹಿಂಪಡೆತ :
ಸ್ಥಳೀಯ ತನಿಖಾ ಸಮಿತಿಯ ಶಿಫಾರಸ್ಸಿನಂತೆ ಮೈಸೂರಿನ ಮೌಲಾನಾ ಅಜಾದ್ ಕಾಲೇಜ್ ಆಫ್ ಎಜುಕೇಷನ್ , ಮೈಸೂರಿನ ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯ, ಯಡತೊರೆ ಶಿಕ್ಷಣ ಮಹಾವಿದ್ಯಾಲಯ, ಪಾಂಡವಪುರದ ವಿಜಯ ಶಿಕ್ಷಣ ಮಹಾವಿದ್ಯಾಲಯದ NCTE ಮಾನ್ಯತೆಯನ್ನು ಹಿಂಪಡೆಯಲಾಗಿದೆ ಎಂದು ಡಾ. ಶ್ರೀಕಂಠಸ್ವಾಮಿ ವಿವರಿಸಿದರು.
2020-21ನೇ ಶೈಕ್ಷಣಿಕ ಸಾಲಿಗೆ 204 ಕಾಲೇಜುಗಳಿಗೆ ಸಂಯೋಜನೆ ಮುಂದುವರಿಕೆ ಅವಕಾಶ ನೀಡಲಾಗಿದೆ. ಹೊಸದಾಗಿ 2020-21ನೇ ಶೈಕ್ಷಣಿಕ ಸಾಲಿಗೆ 5 ಹೊಸ ಪ್ರಥಮ ದರ್ಜೆ ಕಾಲೇಜುಗಳನ್ನು ಆರಂಭಿಸಲು ಶಿಫಾರಸ್ಸು ಮಾಡಲಾಗಿದೆ. ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಸ್ನಾತಕೋತ್ತರ ಕೋರ್ಸುಗಳಿಗೆ ಮುಂದುವರಿಕೆ ಸಂಯೋಜನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
0000
key words : Mysore-university-online-programmer-UGC-permission-granted-academic-council-meeting-UOM