ಮೈಸೂರು,ನವೆಂಬರ್,28,2020(www.justkannada.in): ಇಂದಿನಿಂದ ಪಿಹೆಚ್ಡಿ ಪರೀಕ್ಷೆ ಆರಂಭವಾಗಿದೆ. ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವ ಡಾ. ಕೆ.ಎಂ ಮಹದೇವನ್ ತಿಳಿಸಿದರು.
ಪಿಹೆಚ್.ಡಿ ಪರೀಕ್ಷೆ ಕುರಿತು ಮಾಹಿತಿ ನೀಡಿದ ಮೈಸೂರು ವಿವಿ ಕುಲಸಚಿವ ಡಾ. ಕೆ.ಎಂ ಮಹದೇವನ್, ಮೂರು ದಿನಗಳ ಕಾಲ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಮೈಸೂರು ವಿವಿ ಸಿದ್ದತೆ ನಡೆಸಿದೆ. ಈಗಾಗಲೇ ಮೂರು ಎಕ್ಸಾಮ್ ಮಾಡಿದ್ದೇವೆ. ಯುಜಿ, ಪಿಜಿ ಮತ್ತು ಕೆಸೆಟ್ ಪರೀಕ್ಷೆ ಯಶಸ್ವಿಯಾಗಿದೆ. ಅದೇ ರೀತಿ ಮೂರು ವರ್ಷಗಳ ನಂತರ ಪಿಹೆಚ್ ಡಿ ಪರೀಕ್ಷೆ ನಡೆಸುತ್ತಿದ್ದೇವೆ. ಕೊರೋನಾ ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಯುಲಿದೆ ಎಂದು ತಿಳಿಸಿದರು.
ಇನ್ನು ಪರೀಕ್ಷೆಗೆ 10,938 ವಿದ್ಯಾರ್ಥಿಗಳು ಅಪ್ಲೈ ಮಾಡಿದ್ದಾರೆ. ಅದರಲ್ಲಿ 6,682 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 69 ವಿಷಯಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ವಿಷಯಗಳ ಆಯ್ಕೆಗೆ ಅವಕಾಶ ನೀಡಿದ್ದರಿಂದ ಅವರಿಗಿಚ್ಚೆ ಇರುವ ವಿಷಯಗಳ ಆಯ್ಕೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೂರು ದಿನಗಳು ಪರೀಕ್ಷೆ ಇರಲಿದೆ ಎಂದು ಮಾಹಿತಿ ನೀಡಿದರು.
ಮೌಲ್ಯ ಭವನ ಮತ್ತು ಮಾನಸ ಗಂಗೋತ್ರಿಯ ವಿವಿಧ ವಿಭಾಗಗಳಲ್ಲಿ ಪರೀಕ್ಷಾ ಕೇಂದ್ರಗಳಿರಲಿವೆ. ಪರೀಕ್ಷಾ ಕೇಂದ್ರಗಳನ್ನ ಈಗಾಗಲೇ ಸ್ಯಾನಿಟೈಸ್ ಮಾಡಿದ್ದು, ಸಿದ್ದತೆ ಮಾಡಲಾಗಿದೆ. ಪರೀಕ್ಷೆ ದಿನದಂದೂ ಆರಂಭ ಮತ್ತು ಮುಕ್ತಾಯ ಎರಡು ಸಮಯದಲ್ಲಿ ಸ್ಯಾನಿಟೈಸ್ ಮಾಡಲಾಗುತ್ತದೆ. ಕೊರೋನಾ ಲಕ್ಷಣಗಳಿದ್ದರೆ, ಅಂತವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಅವಕಾಶವಿದೆ. ಇದುವರೆಗೂ ಕೊರೋನಾ ಲಕ್ಷಣ ಇರುವ ವಿದ್ಯಾರ್ಥಿಗಳು ಕಂಡುಬಂದಿಲ್ಲ ಎಂದು ಮೈಸೂರು ವಿವಿ ಕುಲಸಚಿವ ಡಾ.ಕೆ.ಎಮ್ ಮಹದೇವನ್ ಹೇಳಿದರು.
English summary…
Mysore University’s Ph.D. exams begin from today
Mysuru, Nov. 28, 2020 (www.justkannada.in): “The PhD exams of Mysore University has started from today and we are all prepared for it,” opined Dr. K.M. Mahadevan, Registrar of the university.
The exams will be held for three days and the University has made all preparations. We have already conducted three exams including UG, PG and KSET which were all successful. Likewise, we are also set to conduct the PhD exams for three days, and we have undertaken all the required Corona precautionary measures, he informed.
10,938 students have applied for PhD and 6,682 of them are writing the exams, in 69 subjects of their choice. All the examination halls have been already sanitized along with all other precautionary measures. If anyone is found to have Corona symptoms they will be asked to sit in a separate room and write the exams. But till now we have not found anyone with such symptoms.
Keywords: PhD Exams from today/ Mysore University
Key words: Mysore university-PhD- Exam -commences – Monday.