ಮೈಸೂರು, ಮೇ, 19, 2021 (www.justkannada.in): ಮೈಸೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರಾಧ್ಯಾಪಕರು ಹಾಗೂ ಅಧ್ಯಕ್ಷರಾದ ಪ್ರೊ. ಡಿ.ಎಸ್. ಗುರು ಅವರು ಅಪರೂಪದ ಸಾಧನೆ ಮಾಡುವ ಮೂಲಕ ಮೈಸೂರು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ಪ್ರೊ. ಗುರು ಅವರು ಸಿಂಬಾಲಿಕ್ ಡಾಟಾ ಅನಾಲಿಸಿಸ್ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ, ಸ್ವಿಡ್ಜರ್ಲ್ಯಾಂಡ್ನ ಫ್ರಾಂಟಿರ್ಸ್ ಮೀಡಿಯಾ ಎಸ್ಎ ಅಡಿ ರಚಿಸಿರುವ, ” Exploratory Symbolic Data Analysis ” ಎಂಬ ವಿಶೇಷ ಲೇಖನಕ್ಕಾಗಿ ಇಡೀ ವಿಶ್ವದಲ್ಲಿ ಆಯ್ಕೆಯಾಗಿರುವ ನಾಲ್ವರು ಅತಿಥಿ ಸಂಪಾದಕರಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ. ಪ್ರೊ. ಗುರು ಅವರು ಭಾರತದಿಂದ ಆಯ್ಕೆಯಾಗಿರುವ ಏಕೈಕ ಸಂಪಾದಕರಾಗಿದ್ದಾರೆ.
ಈ ಲೇಖನಗಳ ಸಂಗ್ರಹ ಸಿಂಬಾಲಿಕ್ ಡಾಟಾ ಅನಾಲಿಸಿಸ್ ಕ್ಷೇತ್ರಕ್ಕೆ ಸಂಬಂಧಪಟ್ಟ ಬೌದ್ಧಿಕ ಸಂಶೋಧನಾ ಕೆಲಸಗಳನ್ನು ವ್ಯಾಪಿಸುತ್ತದೆ. ಪ್ರೊ. ಡಿ.ಎಸ್. ಗುರು ಅವರು ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದವರಾಗಿದ್ದು, ಕಂಪ್ಯೂಟರ್ ವಿಜ್ಞಾನ ಹಾಗೂ ಸಿಂಬಾಲಿಕ್ ಡಾಟಾ ಅನಾಲಿಸಿಸ್ ಕ್ಷೇತ್ರದಲ್ಲಿ 25 ವರ್ಷಗಳ ಸುದೀರ್ಘ ಅವಧಿಯ ಸಂಶೋಧನಾ ಅನುಭವವನ್ನು ಹೊಂದಿದ್ದಾರೆ.
Key words: Mysore University -Prof D.S Guru- achievement