ಮೈಸೂರು, ಮಾ.13, 2022 : (www.justkannada.in news) : ಕನ್ನಡದ ಹೆಮ್ಮೆಯ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಈ ಹಿಂದೆ ಗೌರವ ಡಾಕ್ಟರೇಟ್ ನೀಡಲು ಹಲವರು ಮುಂದೆ ಬಂದಿದ್ದರು. ಜತೆಗೆ ವರನಟ ಡಾ. ರಾಜ್ ಕುಮಾರ್ ಅವರಿಗೆ ನೀಡಿದ್ದನ್ನು ಉಲ್ಲೇಖಿಸಿ ಡಾಕ್ಟರೇಟ್ ಪಡೆಯಲು ಒತ್ತಾಯಿಸಿದ್ದರು. ಆದರೆ ಅದನ್ನು ಅಪ್ಪು ನಯವಾಗಿಯೇ ನಿರಾಕರಿಸಿದ್ದರು..
ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ, (university of Mysore-UOM ) ನಟ ಪುನೀತ್ ರಾಜ್ ಕುಮಾರ್ ಅವರಿಗೆ ಈ ಸಾಲಿನ ಗೌರವ ಡಾಕ್ಟರೇಟ್ ಅನ್ನು ಮರಣೋತ್ತರವಾಗಿ (D Litt posthumous ) ನೀಡಲು ನಿರ್ಧರಿಸಿದೆ. ಈ ಸಂಬಂದ ಶನಿವಾರ (ಮಾ.12), ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರೇ ಖುದ್ದು ಬೆಂಗಳೂರು ಸದಾಶಿವನಗರದ ಪುನೀತ್ ನಿವಾಸಕ್ಕೆ ತೆರಳಿ ಮಡದಿ, ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini puneeth rajkumar ) ಅವರಿಗೆ ಪತ್ರ ನೀಡಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಮಂತ್ರಿಸಿದರು.
ಈ ಸಂಬಂಧ ಜಸ್ಟ್ ಕನ್ನಡ ಜತೆ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದಿಷ್ಟು…
ಕರ್ನಾಟಕದ ಹೆಮ್ಮೆ ನಟ ಪುನೀತ್ ರಾಜ್ ಕುಮಾರ್, ಒರ್ವ ನಟ ಎಂಬುದಕ್ಕಿಂತ ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಗುಡ್ ಹ್ಯೂಮನ್ ಬೀಯಿಂಗ್. ಅತ್ಯಂತ ಕಿರಿಯ ವಯಸ್ಸಿನಲ್ಲೇ ಅವರ ಸಾಧನೆ, ಜನಪ್ರಿಯತೆ ಅಪಾರ. ಈ ಹಿನ್ನೆಲೆಯಲ್ಲಿ ಮೈಸೂರು ವಿವಿ ಪುನೀತ್ ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ನೀಡುವ ತೀರ್ಮಾನ ಕೈಗೊಂಡಿತು.
ಈ ಸಂಬಂಧ ಪುನೀತ್ ಅವರ ಮಡದಿ ಅಶ್ವಿನಿ ಅವರನ್ನು ಶನಿವಾರ ಖುದ್ದು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಮಂತ್ರಿಸಲಾಯಿತು. ಈ ವೇಳೆ, ಹಿಂದೆ ಹಲವಾರು ಬಾರಿ ಅವರಿಗೆ ಗೌರವ ಡಾಕ್ಟರೇಟ್ ನೀಡುವ ವಿಷಯ ಪ್ರಸ್ತಾಪವಾಗಿತ್ತು. ಆಗೆಲ್ಲಾ ಅವರು ಅದನ್ನು ನಯವಾಗಿಯೇ ನಿರಾಕರಿಸಿದ್ದರು. ತಂದೆಯವ್ರಿಗೆ ನೀಡಿದ್ದ ಸಂಗತಿ ಹೇಳಿದಾಗಲೂ ಅಷ್ಟೆ, ಅವರದ್ದೇ ತೂಕ ಬೇರೆ. ನನ್ನದು ಬೇರೆ. ಪ್ರಶಸ್ತಿ ಸ್ವೀಕರಿಸುವ ಮಟ್ಟಕ್ಕೆ ನಾನಿನ್ನೂ ಬೆಳೆದಿಲ್ಲ ಎಂದೇ ವಿನಯಪೂರ್ವಕವಾಗಿಯೇ ಅದನ್ನು ನಿರಾಕರಿಸುತ್ತಿದ್ದ ಘಟನೆಯನ್ನು ಸ್ಮರಿಸಿಕೊಂಡು ಗದ್ಘದಿತರಾದರು.
key words : Mysore-university-puneeth.rajukumar.