ಮೈಸೂರು,ಜುಲೈ,25,2022(www.justkannada.in): ಸಿ.ಎಸ್.ಐ.ಆರ್.-ಯು.ಜಿ.ಸಿ. ನೆಟ್ ತರಬೇತಿ ಕೇಂದ್ರ, ಆಂತರಿಕ ಗುಣಮಟ್ಟ ಖಾತರಿ ಘಟಕ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಜು.26ರಂದು ‘ಸಂಶೋಧನಾ ವಿಧಾನಗಳು ಮತ್ತು ಪ್ರಕಟಣೆ’ ಎಂಬ ವಿಷಯದ ಕುರಿತು ಒಂದು ದಿನದ ಉಚಿತ ಕಾರ್ಯಾಗಾರವನ್ನು ಮಾನಸ ಗಂಗೋತ್ರಿಯ ಇಎಂಆರ್ ಸಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಾಗಾರದ ಉದ್ಘಾಟನೆಯನ್ನು ವಿಶ್ರಾಂತ ಕುಲಪತಿ ಪ್ರೊ.ಎಸ್.ಆರ್. ನಿರಂಜನ ನೆರವೇರಿಸಲಿದ್ದಾರೆ. ಆಶಯ ಭಾಷಣವನ್ನು ಭಾರತೀಯ ವಿಜ್ಞಾನ ಸಂಸ್ಥೆ ಮಾಜಿ ನಿರ್ದೇಶಕ ಪ್ರೊ. ಪಿ. ಬಲರಾಮ್ ನಡೆಸಿಕೊಡಲಿದ್ದಾರೆ. ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಮನೋವಿಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಜಿ.ವೆಂಕಟೇಶ್ ಕುಮಾರ್ ಹಾಗೂ ಐಕ್ಯೂಎಸಿ ನಿರ್ದೇಶಕ ಪ್ರೊ.ಎನ್.ಎಸ್.ಹರಿನಾರಾಯಣ ಭಾಗವಹಿಸಲಿದ್ದಾರೆ.
ಮೊದಲ ಗೋಷ್ಠಿಯಲ್ಲಿ ಸಂಶೋಧನೆಯ ಬಗೆಗಿನ ಮನೋಭಾವ ಎಂಬ ವಿಷಯದ ಕುರಿತು ವಿಷಯ ತಜ್ಞರು ಚರ್ಚೆ ನಡೆಸಲಿದ್ದಾರೆ. ಎರಡನೇ ಗೋಷ್ಠಿಯಲ್ಲಿ ಸಂಶೋಧನಾ ವಿನ್ಯಾಸದ ಬಗ್ಗೆ ಬಹದ್ದೂರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸೈನ್ಸ್ ನ ಅಧ್ಯಕ್ಷರಾದ ಪ್ರೊ ಡಿ. ಆನಂದ್ ವಿಷಯ ಮಂಡಿಸಲಿದ್ದಾರೆ.
ಮೂರನೇ ಗೋಷ್ಠಿಯಲ್ಲಿ ಸಂಶೋಧನೆ ಮತ್ತು ಪ್ರಕಟಣೆಯಲ್ಲಿ ನೈತಿಕತೆ ಎಂಬ ವಿಷಯದ ಬಗ್ಗೆ ನಿವೃತ್ತ ಗ್ರಂಥಪಾಲಕರಾದ ಡಾ. ಸಿ.ಪಿ. ರಾಮಶೇಷ್ ತಮ್ಮ ಅನಿಸಿಕೆ ಹಂಚಿಕೊಳ್ಳಲಿದ್ದಾರೆ. ಸಮಾರೋಪ ಭಾಷಣವನ್ನು ಐ.ಎನ್.ಎಸ್.ಎ. ಹಿರಿಯ ವಿಜ್ಞಾನಿ ಡಾ. ಆರ್. ರಾಘವೇಂದ್ರರಾವ್ ನಡೆಸಿಕೊಡಲಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್. ಶಿವಪ್ಪ, ಪ್ರಾಧ್ಯಾಪಕ ಡಾ. ಕೆ.ಎನ್. ಅಮೃತೇಶ್, ಸಂಯೋಜಕ ಡಾ. ಜೆ. ಲೋಹಿತ್, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ನಟರಾಜ್ ಶಿವಣ್ಣ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Key words: Mysore University-Research-workshop-tomorrow.