ಮೈಸೂರು ವಿವಿ: ನಾಳೆ ವಿಶೇಷ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ.

ಮೈಸೂರು,ಜುಲೈ.8,2022(www.justkannada.in):  ಮೈಸೂರು ವಿಶ್ವವಿದ್ಯಾನಿಲಯದ ಲಲಿತಾ ಕಲೆಗಳ ಕಾಲೇಜಿನ ಲಲಿತಾ ಕಲಾ ರಂಗಮಂದಿರದಲ್ಲಿ ಜುಲೈ 9ರಂದು ಮಧ್ಯಾಹ್ನ  3.30ಕ್ಕೆ ವಿಶೇಷ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಹಾಗೂ ಸನ್ಮಾನ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಧ್ಯಕ್ಷತೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಅವರು ನೆರವೇರಿಸಲಿದ್ದು, ಅಮೆರಿಕಾದವರಾದ ಎಸ್.ಎನ್. ಗುರುದತ್ತ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ ಜಿ. ಹೇಮಂತ್ ಕುಮಾರ್ ಅವರಿಗೆ ಲಲಿತಾ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ, ಸಿ.ಎ. ಶ್ರೀಧರ ಅವರು ಸನ್ಮಾನಿಸಲಿದ್ದಾರೆ. ಜೊತೆಗೆ ಈ ಕಾರ್ಯಕ್ರಮದಲ್ಲಿ ವಿಶೇಷ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯನ್ನು ಏರ್ಪಡಿಸಲಾಗಿದೆ.  ಅಮೆರಿಕಾ ವಿದ್ವಾನ್ ನಹರ್ ಗುರುದತ್ತ ಕಛೇರಿ ನಡೆಸಿಕೊಡಲಿದ್ದಾರೆ. ಅದೇ ರೀತಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನವನ್ನು ವಿದ್ವಾನ್ ಆಮೋಘ್ ನಹದೂರ್ ಪಿಟೀಲು, ವಿದ್ವಾನ್ ನಂದನ್ ಕಶ್ಯಪ್  ಮೃದಂಗ, ವಿದ್ವಾನ್ ಶಮಿತ್ ಗೌಡ – ಘಟಂ ಪಕ್ಕ ವಾದ್ಯಗಳನ್ನು ನುಡಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Key words: Mysore University-special -Carnatic -classical -concert -tomorrow.

ENGLISH SUMMARY…

University of Mysore: Special Carnatic Music concert tomorrow
Mysuru, July 8, 2022 (www.justkannada.in): A carnatic music concert and felicitation program has been organized on July 9, at 3.30 pm at the Lalitha Kala Ranga Mandira, in the University of Mysore campus.
Prof. G. Hemanth Kumar, Vice-Chancellor, University of Mysore will inaugurate and preside over the function. S.N. Gurudat of America will be the chief guest.
Prof. G. Hemanth Kumar will felicitate Prof. C.A. Sridhar in this program. A carnatic music concert has been organized by Vidwan Nahar Gurudatt, from America. Vidwan Amogh Nahadur (violin), Vidwan Nandan Kashyap (Mrudangam), Vidwan Shamith Gowda (Ghatam) will accompany him, according to a press release.
Keywords: University of Mysore/ carnatic music program/ felicitation/ Lalitha Kala Ranga Mandira