ಮೈಸೂರು, ಜುಲೈ 23, 2020 (www.justkannada.in): ವಿದ್ಯುತ್ ಸ್ವಾವಲಂಬನೆ ಹಾದಿಯಲ್ಲಿ ಮೈಸೂರು ವಿವಿ ಹೆಜ್ಜೆ ಹಾಕಿದೆ.
ಮೈಸೂರು ವಿವಿ ಕಟ್ಟಡಗಳಿಗೆ ಸೋಲಾರ್ ಫಲಕ ಅಳವಡಿಕೆ ಮಾಡಲಾಗುತ್ತಿದ್ದು, ಈ ಮೂಲಕ ವಿದ್ಯುತ್ ಅವಲಂಬನೆ ನಿಟ್ಟಿನಲ್ಲಿ ವಿವಿ ಸ್ವಾವಲಂಬಿ ಆಗುವ ದಿನಗಳು ದೂರವಿಲ್ಲ.
ವಿವಿಯ ಭೌತಶಾಸ್ತ್ರ ವಿಭಾಗದ ಕಟ್ಟಡಗಳಿಗೆ ಪ್ರಾಯೋಗಿಕವಾಗಿ ಸೋಲಾರ್ ಫಲಕ ಅಳವಡಿಕೆ ಮಾಡಲಾಗಿದೆ. ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ಅವರು ಭೌತಶಾಸ್ತ್ರ ವಿಭಾಗದ ಕಟ್ಟಡಗಳಿಗೆ ಸೋಲಾರ್ ಫಲಕ ಅಳವಡಿಕೆ ಲೋಕಾರ್ಪಣೆ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ವಿವಿಯ ಎಲ್ಲಾ ಕಟ್ಟಡಗಳ ಮೇಲೂ ಸೋಲಾರ್ ಫಲಕಗಳ ಅಳವಡಿಕೆ ಮಾಡುವ ಆಲೋಚನೆ ವಿವಿಗಿದೆ. ಸೋಲಾರ್ ಫಲಕಗಳಿಂದ ಉತ್ಪಾದನೆಯಾಗುವ ವಿದ್ಯುತ್ ಅನ್ನು ವಿವಿ ಅವಶ್ಯಕತೆಗೆ ಉಪಯೋಗಿಸಿಕೊಂಡು ಉಳಿಕೆ ವಿದ್ಯುತ್ ಅನ್ನು ಮಾರಾಟ ಮಾಡುವ ಚಿಂತನೆಯನ್ನು ವಿವಿ ಹೊಂದಿದೆ.