ಮಾತು ಸಾಕು ಕೆಲಸ ಕೊಡಿ: ಘಟಿಕೋತ್ಸವ ಪೋಷಾಕಿನಲ್ಲೇ ಪಕೋಡ ಮಾರಿದ ವಿದ್ಯಾರ್ಥಿಗಳು !

ಮೈಸೂರು, ಅಕ್ಟೋಬರ್ 19, 2020 (www.justkannada.in): ಅತ್ತ ಮೈಸೂರು ವಿವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯುತ್ತಿದ್ದರೆ, ಇತ್ತ ಅದೇ ಮೈಸೂರು ವಿವಿ ವಿದ್ಯಾರ್ಥಿಗಳಿಂದ ಪಕೋಡ ಮಾರಾಟ ಮಾಡಿ ಉದ್ಯೋಗಕ್ಕಾಗಿ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿದರು.

ಸಾಂಕೇತಿಕವಾಗಿ ಪಕೋಡ ಮಾರಾಟ ಮಾಡುವ ಮೂಲಕ ದಲಿತ ವಿದ್ಯಾರ್ಥಿ ಒಕ್ಕೂಟ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಛೇರಿ ಬಳಿ ಪ್ರತಿಭಟನೆ ನಡೆಸಿದ ಮೈಸೂರು ವಿವಿ ಪ್ರಸ್ತುತ ಹಾಗೂ ನಿರ್ಗಮಿತ ವಿದ್ಯಾರ್ಥಿಗಳು ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿಗಳೇ ಮಾತು ಸಾಕು ಕೆಲಸ ಬೇಕು ಎಂದು ಪ್ರಧಾನಿಗೆ ಪ್ರತಿಭಟನಾ ವಿದ್ಯಾರ್ಥಿಗಳು ಆಗ್ರಹಿಸಿದರು. ವಿವಿ ಗಳು ವಿದ್ಯಾರ್ಥಿಗಳಿಗೆ ಕೇವಲ ಪದವಿ ನೀಡುವ ಕಾರ್ಖಾನೆಗಳಾಗಿವೆ. ವಿದ್ಯಾರ್ಥಿಗಳಿಗೆ ಕೌಶಾಲ್ಯಧಾರಿತ ಮತ್ತು ಉದ್ಯೋಗ ಕೇಂದ್ರಿತ ಶಿಕ್ಷಣ ನೀಡುವಂತಾಗಬೇಕು.

ಪ್ರಧಾನಿ ಮೋದಿ ಕೆಲಸ ನೀಡಿ ಎಂದರೆ ಪಕೋಡ ಮಾರಿ ಎಂದು ವ್ಯಂಗಭರಿತ ಮಾತುಗಳನ್ನಾಡುತ್ತಾರೆ. ರಾಜ್ಯದ ಉನ್ನತ ಶಿಕ್ಷಣ ಸಚಿವರೂ ಸಹ ಆದ ಡಿಸಿಎಂ ಡಾ. ಅಶ್ವತ್ ನಾರಾಯಣ್ ಅವರು ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯೇ ಇಲ್ಲವೆಂದು ಸುಳ್ಳು ಹೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.