‘ ಉತ್ಕೃಷ್ಟ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಮತ್ತು ವಸತಿ ನಿಲಯ’ ಸ್ಥಾಪನೆ : ಮೈಸೂರು ವಿವಿ ಸಿಂಡಿಕೇಟ್ ನಲ್ಲಿ ಚರ್ಚೆ

 

ಮೈಸೂರು, ಮಾ.24, 2020 : (www.justkannada.in news ) : ‘ ಉತ್ಕೃಷ್ಟ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಮತ್ತು ವಸತಿ ನಿಲಯ’ ( Exellent Competitive Exam Coaching Center) ಪ್ರಾರಂಭಿಸುವ ಸಂಬಂದ ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಲಾಗಿದೆ.

ಮೈಸೂರು ವಿವಿ 100 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ದೇಶದ ಶೈಕ್ಷಣಿಕ ವಲಯಕ್ಕೆ ಮೈಲುಗಲ್ಲಾಗುವ ಯೋಜನೆ ರೂಪಿಸಬೇಕು. ಈ ನಿಟ್ಟಿನಲ್ಲಿ ‘ ಉತ್ಕೃಷ್ಟ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಮತ್ತು ವಸತಿ ನಿಲಯ’ ಆರಂಭಿಸುವ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಲಾಗಿದೆ.

mysore-university-syndicate-meeting-exellent competitive exam coaching center.

ಈ ಕುರಿತು ಸೋಮವಾರ ನಡೆದ ಮೈಸೂರು ವಿವಿ ಸಿಂಡಕೇಟ್ ಸಭೆಯಲ್ಲಿ ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜ್ ಮಾತನಾಡಿ, ಐ.ಪಿ.ಎಸ್, ಐಎಎಸ್ ನಂಥ ಯುಪಿಎಸ್ಸಿ ಪರೀಕ್ಷಾ ಫಲಿತಾಂಶ ಬಂದಾಗ ಜೆಎನ್ ಯು ವಿವಿಯಲ್ಲಿ ಕಲಿತವರೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಆಗ ನಮ್ಮ ವಿವಿ ವಿದ್ಯಾರ್ಥಿಗಳಿಗೆ ಯಾಕೆ ಈ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಮೂಡುತ್ತದೆ.
ಆದ್ದರಿಂದ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಲು ಸೂಕ್ತ ತರಬೇತಿ ಕೇಂದ್ರದ ಅವಶ್ಯಕತೆ ಇದೆ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ ಮೈಸೂರು ವಿವಿಯೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ತಜ್ಞರ ನೇತೃತ್ವದಲ್ಲಿ ಕೇಂದ್ರ ಆರಂಭಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಪ್ರತಿ ವರ್ಷ ಮೈಸೂರು ವಿವಿಯ ವಿವಿಧ ವಿಭಾಗಗಳಿಂದ ಅಂದಾಜು 4000 ವಿದ್ಯಾರ್ಥಿಗಳು ತೇರ್ಗಡೆ ಹೊಂದುವರು. ಇವರಿಗೆಲ್ಲ ಸೂಕ್ತ ಉದ್ಯೋಗದ ಭರವಸೆ ನೀಡಬೇಕು. ಈ ಹಿನ್ನೆಲೆಯಲ್ಲಿ ತರಬೇತಿ ಕೇಂದ್ರದ ಮೂಲಕ ಸೂಕ್ತ ಕೋಚಿಂಗ್ ನೀಡಿ ಸ್ಪರ್ಧಾ ಜಗತ್ತಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕು ಎಂದು ಈ.ಸಿ.ನಿಂಗರಾಜು ಅಭಿಪ್ರಾಯಪಟ್ಟರು.

 mysore-university-syndicate-meeting-exellent competitive exam coaching center.

ವಿಶ್ವೇಶ್ವರಯ್ಯ ಪ್ರತಿಮೆ :

ಮೈಸೂರು ವಿವಿಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ಅವರ ಪ್ರತಿಮೆಯನ್ನು ನಾಲ್ವಡಿ ಅವರ ಪ್ರತಿಮೆ ಜತೆಗೆ ಸ್ಥಾಪಿಸಬೇಕು ಎಂದು ಸಿಂಡಿಕೇಟ್ ಸದಸ್ಯ ದಾಮೋಧರ್ ಪ್ರಸ್ತಾವನೆ ಮೂಲಕ ಮನವಿ ಮಾಡಿದರು.

ಆದರೆ ವಿಶ್ವವಿದ್ಯಾನಿಲಯಗಳಲ್ಲಿ ಸರಸ್ವತಿ ಪ್ರತಿಮೆ ಹೊರತು ಪಡಿಸಿ ಇತರೆ ಯಾವುದೇ ಪ್ರತಿಮೆ ಸ್ಥಾಪಿಸುವುದಕ್ಕೆ ಸರಕಾರ ನಿರ್ಬಂಧ ಹೇರಿದೆ. ಈ ಹಿನ್ನೆಲೆಯಲ್ಲಿ ದಾಮೋಧರ್ ಅವರ ಪ್ರಸ್ತಾವನೆಯನ್ನು ಸರಕಾರದ ಗಮನಕ್ಕೆ ತಂದು ಅಲ್ಲಿಂದ ಬರುವ ನಿರ್ದೇಶನದಂತೆ ಮುಂದಿನ ಕ್ರಮ ತೆಗೆದುಕೊಳ್ಳಲು ಸಿಂಡಿಕೇಟ್ ನಿರ್ಧರಿಸಿತು.

key words : mysore-university-syndicate-meeting-exellent competitive exam coaching center.