ಮೈಸೂರು,ಆಗಸ್ಟ್,16,2022(www.justkannada.in): ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ ಹಾಗೂ ಹೈದರಾಬಾದ್ ನ ಯುನಿಸ್ ಸಹಯೋಗದೊಂದಿಗೆ ಎರಡು ದಿನದ ಕಾರ್ಯಾಗಾರವನ್ನು ಆ.17, 18ರಂದು ಹಮ್ಮಿಕೊಳ್ಳಲಾಗಿದೆ.
ಕೋವಿಡ್ ಅವಧಿಯ ನಂತರ ಮಕ್ಕಳ ಸಮಸ್ಯೆ ಕುರಿತು ಪತ್ರಕರ್ತರ ಸಂವೇದನೆ ಎಂಬ ವಿಷಯದ ಕುರಿತು ಎರಡು ದಿನದ ಕಾರ್ಯಾಗಾರ ನಡೆಯಲಿದ್ದು, ಗ್ರಾಮೀಣ ಭಾಗದ ಪತ್ರಕರ್ತರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ಶಿವಪ್ಪ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಲಿದ್ದಾರೆ. ಯುನಿಸ್ ಅಧಿಕಾರಿ ಪ್ರೊ.ಪ್ರೊಸನ್ ಸೆನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.
ಹಿರಿಯ ಪತ್ರಕರ್ತ ಈಶ್ವರ್ ದೈತೋಟ, ಶ್ರೀನಿವಾಸ ನಂದಗೋಪಾಲ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ಪ್ರೊ.ಸಿ.ಕೆ.ಪುಟ್ಟಸ್ವಾಮಿ, ಪ್ರಾಧ್ಯಾಪಕಿ ಪ್ರೊ.ಎಂ.ಎಸ್.ಸಪ್ನ, ಸಹ ಪ್ರಾಧ್ಯಾಪಕಿ ಡಾ. ಮಮತಾ ಎನ್, ಡಾ.ರಾಕೇಶ್. ಸಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಪ್ರೊ.ಎಂ.ಎಸ್. ಸಪ್ನ ಅವರ ಪ್ರಾಜೆಕ್ಟ್:
ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಎಂ.ಎಸ್. ಸಪ್ನ ಹಾಗೂ ಡಾ.ರಾಕೇಶ್ ಸಿ. ಅವರಿಗೆ ಸಿಕ್ಕಿರುವ ಯುನಿಸ್ ಪ್ರಾಜೆಕ್ಟ್ ಇದು. ಗ್ರಾಮೀಣ ಭಾಗದ ಪತ್ರಕರ್ತರಿಗೆ ತರಬೇತಿ ನೀಡುವುದು ಇದರ ಪ್ರಮುಖ ಉದ್ದೇಶ. ಕೋವಿಡ್ ಸಮಯದಲ್ಲಿ ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ಸ್ಥಿತಿ ಮೇಲೆ ಸಾಕಷ್ಟು ದುಷ್ಟರಿಣಾಮ ಬೀರಿತು. ಈ ಬಗ್ಗೆಯೂ ಬೆಳಕು ಚೆಲ್ಲಲು ಪತ್ರಕರ್ತರಿಗೆ ಸಾಧ್ಯವಾಗಲಿಲ್ಲ. ಇದನ್ನು ಅರಿತು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಗ್ರಾಮೀಣ ಭಾಗದ 25 ಪತ್ರಕರ್ತರು ವರ್ಕ್ಶಾಪ್ ನಲ್ಲಿ ಭಾಗವಹಿಸಲಿದ್ದಾರೆ. ಇದೇ ರೀತಿ ಪ್ರತಿ ಎರಡು ತಿಂಗಳಿಗೊಮ್ಮೆ ಆರು ವರ್ಕ್ ಶಾಪ್ ನಡೆಯುತ್ತದೆ. ಮಕ್ಕಳ ಮೇಲೆ ಹೆಚ್ಚು ಗಮನ ಹರಿಸಿ ಎಂಬುದು ಇದರ ಉದ್ದೇಶ. ಡೇಟಾ ಜನರ್ಲಿಸಂ ಬಗ್ಗೆಯೂ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುತ್ತದೆ. ಅಂದಹಾಗೆ ಇದು 2 ವರ್ಷದ ಯುನಿಸ್ ಪ್ರಾಜೆಕ್ಟ್.
Key words: mysore university- Two day -workshop – journalists -tomorrow