ಮೈಸೂರು,ಫೆಬ್ರವರಿ,15,2021(www.justkannada.in): ಮೊದಲನೇ ಫಲಿತಾಂಶಕ್ಕಿಂತ ಮರುಮೌಲ್ಯಮಾಪನ ಫಲಿತಾಂಶದಲ್ಲಿ ಶೇಕಡಾ 10ಕ್ಕಿಂತ ಹೆಚ್ಚು ಅಂಕಗಳಿಸಿರುವ ಸ್ನಾತಕ ಪದವಿ (UG) ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ ಶುಲ್ಕವನ್ನ ಮರುಪಾವತಿಸಲು ಮೈಸೂರು ವಿಶ್ವ ವಿದ್ಯಾನಿಲಯ ನಿರ್ಧರಿಸಿದೆ.
ದಿನಾಂಕ: 29-01-2021 ರಂದು ನಡೆದ ಸಿಂಡಿಕೇಟ್ ಸಭೆಯ ನಿರ್ಣಯದಂತೆ, ಮೊದಲನೇ ಫಲಿತಾಂಶಕ್ಕಿಂತ ಮರುಮೌಲ್ಯಮಾಪನ (UG) ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನಕ್ಕಾಗಿ ಪಾವತಿಸಿರುವ ಪೂರ್ಣ ಶುಲ್ಕವನ್ನು ಮರುಭರಿಕೆ (Refund) ಮಾಡಲಾಗುವುದು. ಈ ಸಂಬಂಧ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿಮಾಡಿ ವ್ಯಾಸಂಗ ಮಾಡಿದ ಕಾಲೇಜಿನ ಮುಖಾಂತರ ಈ ಕಛೇರಿಗೆ ಕಳುಹಿಸಿಕೊಡಬೇಕು.
ಅರ್ಜಿಯೊಂದಿಗೆ ಮರುಮೌಲ್ಯಮಾಪನಕ್ಕಾಗಿ ಶುಲ್ಕ ಪಾವತಿಸಿರುವ ಮೂಲ ಚಲನ್ ಅಥವಾ ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಿದಲ್ಲ, ಹಣ ಪಾವತಿಸಿರುವ ಬಗೆಗಿನ ಮುದ್ರಿತ ದೃಢೀಕೃತ ಪ್ರತಿಯನ್ನು ಲಗತ್ತಿಸಬೇಕು ಎಂದು ಪರೀಕ್ಷಾಂಗ ಉಪಕುಲಸಚಿವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: Mysore university- UG students – scored- more than 10 per cent – re-valuatuion-refound