ಮೈಸೂರು,ಮಾರ್ಚ್,31,2022(www.justkannada.in): ಇನ್ನೊಂದು ವರ್ಷದೊಳಗೆ ಮಾನಸ ಗಂಗೋತ್ರಿ ವಿದ್ಯಾರ್ಥಿಗಳಿಗೆ ಕಾವೇರಿ ನೀರು ಕುಡಿಯಲು ಸಿಗುತ್ತದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ವಿಜ್ಞಾನ ಭವನದಲ್ಲಿ ನಡೆದ ಶಿಕ್ಷಣ ಮಂಡಳಿ ನಾಲ್ಕನೇ ಸಾಮಾನ್ಯ ಸಭೆಯಲ್ಲಿ ಪ್ರೊ.ಮುಜಾರ್ ಅಸಾದಿ ಪ್ರಶ್ನೆಗೆ ಉತ್ತರಿಸಿದ ಅವರು, ತುಂಬಾ ವರ್ಷದಿಂದ ಗಂಗೋತ್ರಿ ವಿದ್ಯಾರ್ಥಿಗಳಿಗೆ ಕಾವೇರಿ ನೀರು ಸಿಗಬೇಕೆಂಬ ಬೇಡಿಕೆ ಇದೆ. ಆದರೆ, ಇದಕ್ಕೆ ಇದೀಗ ಕಾಲ ಕೂಡಿ ಬಂದಿದೆ. 3 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧವಾಗಿದೆ. ಈಗಾಗಲೇ 1 ಕೋಟಿ ಮೊತ್ತವನ್ನು ಕಾವೇರಿ ನೀರಾವರಿ ಮಂಡಳಿಗೆ ನೀಡಲಾಗಿದೆ. ಎರಡು ಮೂರು ಬಾರಿ ಸಭೆಯನ್ನು ಮಾಡಲಾಗಿದೆ. ಕಾವೇರಿ ಹಿನ್ನೀರಿನ ಪ್ರದೇಶದಿಂದ ಗಂಗೋತ್ರಿ ಸಂಪರ್ಕ ಸಾಧಿಸಲಾಗುತ್ತಿದೆ ಎಂದರು.
ಸದ್ಯ ಗಂಗೋತ್ರಿಗೆ ಬೋರ್ ವೆಲ್ ನೀರು ಲಭ್ಯವಿದೆ. ಕೆಲವೊಮ್ಮೆ ಈ ನೀರು ಕಲುಷಿತಗೊಂಡು ಬರುತ್ತಿದೆ. ಇದರಿಂದ ವಿಜ್ಞಾನ ಲ್ಯಾಬ್ ನಲ್ಲಿ ಈ ನೀರನ್ನು ಬಳಸಿ ಪರೀಕ್ಷೆ ಮಾಡಲು ಕಷ್ಟವಾಗುತ್ತಿದೆ. ಅಲ್ಲದೆ, ಗಂಗೋತ್ರಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸದ್ಯ 4 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದನ್ನೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕಾವೇರಿ ನೀರನ್ನು ಮಾನಸ ಗಂಗೋತ್ರಿಗೆ ಹರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸರಕಾರಿ ನಾಮನಿದೇರ್ಶನ ಸದಸ್ಯ ಶಶಿಕುಮಾರ್ ಮಾತನಾಡಿ, ಪ್ರತಿ ವರ್ಷ ವಿವಿ ಬಜೆಟ್ ನಲ್ಲಿ ವಿದ್ಯುತ್ ಬಿಲ್ ಗೆಂದು 4 ಕೋಟಿ ಮೀಸಲಿಡಲಾಗುತ್ತಿದೆ. ಗಂಗೋತ್ರಿಯ ಎಲ್ಲಾ ವಿಭಾಗಕ್ಕೂ ಸೋಲಾರ್ ಸಂಪರ್ಕ ಕಲ್ಪಿಸಿದರೆ ಖರ್ಚು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದರು. ಇದಕ್ಕೆ ಉತ್ತರಿಸಿದ ಪ್ರೊ.ಜಿ.ಹೇಮಂತ್ ಕುಮಾರ್, ಈಗಾಗಲೇ ಎರಡು ವಿಭಾಗಕ್ಕೆ ಸೋಲಾರ್ ಸೌಲಭ್ಯ ಕಲ್ಪಿಸಲಾಗಿದೆ. 15 ವಿಭಾಗಗಳಿಗೆ ನೀಡಿದರೆ 1.5 ಕೋಟಿ ವಿದ್ಯುತ್ ಬಿಲ್ ಉಳಿಸಬಹುದು ಎಂದರು.
ಮಂಡ್ಯ ಕ್ಷೇತ್ರದ ಶಾಸಕ, ಶೈಕ್ಷಣಿಕ ಮಂಡಳಿ ಸದಸ್ಯ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕುಲಸಚಿವ ಪ್ರೊ.ಆರ್.ಶಿವಪ್ಪ, ಪ್ರೊ.ಎ.ಪಿ.ಜ್ಞಾನಪ್ರಕಾಶ್ ಸೇರಿದಂತೆ ಇತರರು ಇದ್ದರು.
Key words: mysore university-VC-G.Hemanth kumar-kaveri water
ENGLISH SUMMARY…
Kaveri River water to be supplied to Manasa Gangotri campus within an year
Mysuru, March 31, 2022 (www.justkannada.in): Prof. G. Hemanth Kumar, Vice-Chancellor, University of Mysore, today informed that supply of Kaveri River water to the Manasa Gangotri students will commence within an year.
He participated in the 4th Education Board General Body meeting held at the Vignana Bhavana, in the Manasa Gangotri campus today. In his reply to Prof. Muzaar Assadi, he informed that it is the demand of the students from a long time for supply of Kaveri River water, which is being realized now. “The project has been implemented at a cost of Rs. 3 crore. A sum of Rs. 1 crore has already been provided to the Kaveri Neeravari Nigama. Several meetings have been held. Supply of Kaveri Water will be fulfilled to the Gangotri campus via the Kaveri backwater area,” he explained.
Mandya MLA, Education Board member M. Srinivas, MLC Veena Achaiah, Registrar Prof. R. Shivappa, Prof. A.P. Jnanaprakash and others were present.
Keywords: University of Mysore/ Kaveri River water supply/ Manasa Gangotri/ within an year