ಅಧ್ಯಾಪಕರ ಸಂಶೋಧನೆಗಳು ಸಮಾಜಕ್ಕೆ ತಲುಪಿದಾಗ ಹೆಚ್ಚು ಪ್ರಯೋಜನಕಾರಿ- ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಅಕ್ಟೋಬರ್,1,2022(www.justkannada.in):  ಅಧ್ಯಾಪಕರು ಮಾಡುವ ಸಂಶೋಧನೆಗಳು ಸಮಾಜಕ್ಕೆ ತಲುಪಿದಾಗ ಮಾತ್ರ ಜನರಿಗೆ ಅದರ ಪ್ರಯೋಜನ ಸಿಗುವಂತಾಗುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಜೆನೆಟಿಕ್ಸ್ ಆ್ಯಂಡ್ ಜೆನೋಮಿಕ್ಸ್ ವಿಭಾಗದ ಅಧ್ಯಕ್ಷೆ ಪ್ರೊ.ಎಸ್.ಎಸ್. ಮಾಲಿನಿ ಅವರ ಹೊಸ ‘ಯು ಟ್ಯೂಬ್’ ಚಾನಲ್ ಬಿಡುಗಡೆಗೊಳಿಸಿ ಮಾತನಾಡಿದರು. ಇಂದು ತಂತ್ರಜ್ಞಾನ ನಮ್ಮ ಬದುಕನ್ನು ಬದಲಾಯಿಸುತ್ತಿದೆ. ನಾನು ಕಂಪ್ಯೂಟರ್ ಸೈನ್ಸ್ ಮೊದಲ ಬ್ಯಾಚ್‌ನ ವಿದ್ಯಾರ್ಥಿ. ಆಗ ಯಾವುದೇ ತಂತ್ರಜ್ಞಾನ ಇರಲಿಲ್ಲ. ಅಧ್ಯಾಪಕರನ್ನು ನಾವೇ ಕರೆದುಕೊಂಡು ಪಾಠ ಮಾಡಿಸಿಕೊಳ್ಳುತ್ತಿದ್ದ ಕಾಲ ಅದು. ಓವರ್‌ ರೈಟ್ ಪ್ರಾಜೆಕ್ಟ್ ನಲ್ಲಿ ಅಧ್ಯಯನ ಮಾಡುತ್ತಿದ್ದೆವು. ಆದರೆ, ಇಂದು ಇಂಟರ್‌ ನೆಟ್, ಪ್ರೊಜೆಕ್ಟರ್, ಸ್ಮಾರ್ಟ್ ಕ್ಲಾಸ್ ಅಂತ ಸಾಕಷ್ಟು ಹೊಸ ಆವಿಷ್ಕಾರಗಳಾಗಿವೆ. ಸಂಶೋಧನೆ ಈ ರೀತಿ ಸಮಾಜಕ್ಕೆ ತಲುಪಿದಾಗ ಅದು ಪರಿಣಾಮಕಾರಿ ಆಗಿರುತ್ತದೆ ಎಂದು ಹೇಳಿದರು.

ವಿಜ್ಞಾನ ವಿಭಾಗದಲ್ಲಿ ಇಂದು ಹಲವರು ಕೆಲಸ ಮಾಡುತ್ತಿದ್ದಾರೆ. ಆದರೆ. ನಾನು ಕಂಡಂತೆ ಡಾ.ಸುತ್ತೂರು ಮಾಲಿನಿಯವರು ಸಾಕಷ್ಟು ಆಸಕ್ತಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುತ್ತೂರು ಜಾತ್ರೆಯಲ್ಲಿ ತಮ್ಮ ವಿಭಾಗದ ಮಳಿಗೆಯನ್ನು ಹಾಕಿದ್ದರು. ಬಂಜೆತನದ ಬಗ್ಗೆ ಸಾಕಷ್ಟು ಹಳ್ಳಿಗಾಡಿನ ಜನರು ಬಂದು ಮಾಹಿತಿ ಪಡೆದುಕೊಳ್ಳುತ್ತಿದ್ದ ದೃಶ್ಯ ನೋಡಿ ಖುಷಿ ಆಯಿತು. ಜನರಿಗೆ ಬೇಕಾದ ಸಂಗತಿಯನ್ನು ನೀಡಿದರೆ ಖಂಡಿತಾ ಅವರು ಅದನ್ನು ಸ್ವೀಕರಿಸುತ್ತಾರೆ. ಹಲವು ಪುಸ್ತಕ ಬಿಡುಗಡೆ ಮಾಡಿರುವ ಮಾಲಿನಿ ಅವರು ಇದೀಗ ಯು ಟ್ಯೂಬ್ ಚಾನೆಲ್ ತೆರೆದಿದ್ದಾರೆ. ಅಲ್ಲದೆ, ಮೈಸೂರು ವಿವಿಯಿಂದ ಕಳೆದ ಬಾರಿ ಮೂಕ್ಸ್ ಅಡಿ ಹೆಚ್ಚುವರಿ ಎರಡು ವಿಷಯಗಳನ್ನು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ನಡೆಸಿದ್ದಾರೆ. ಇದೊಂದು ದಾಖಲೆ ಕೂಡ ಎಂದರು.

ಪಬ್ಲಿಕ್ ಟಿವಿ ಸಂಸ್ಥಾಪಕರು ಹಾಗೂ ಹಿರಿಯ ಪತ್ರಕರ್ತರಾದ ಎಚ್.ಆರ್. ರಂಗನಾಥ್ ಮಾತನಾಡಿ, ಕ್ಯಾನ್ಸರ್ ಇಂದು ಮಹಾಮಾರಿ ಆಗಿದೆ. ಹಣ ಹಾಗೂ ಸೌಲಭ್ಯದ ದೃಷ್ಟಿಯಿಂದ ಇದು ದುಬಾರಿ ಆಗಿರುವುದೇ ಸಮಸ್ಯೆಗೆ ಕಾರಣವಾಗಿದೆ. 20 ವರ್ಷದ ಹಿಂದೆ ಹೃದಯದ ಶಸ್ತ್ರಚಿಕಿತ್ಸೆ ಅಂದರೆ ಭಯವಾಗುತ್ತಿತ್ತು. ಆದರೆ ಈಗ ಆಗಿಲ್ಲ. ತಂತ್ರಜ್ಞಾನ ಎಲ್ಲವನ್ನೂ ಸುಲಭ ಮಾಡಿದೆ. ಇದು ಕ್ಯಾನ್ಸರ್ ವಿಚಾರದಲ್ಲೂ ಆಗಬೇಕು. ಸಮಾಜಕ್ಕೆ ಅಂಟಿರುವ ಕ್ಯಾನ್ಸರ್ ಬಗ್ಗೆ ನಾನು ಮಾತನಾಡುತ್ತೇನೆ, ವೈದ್ಯರು ಕ್ಯಾನ್ಸರ್ ಗುಣಪಡಿಸುವ ಬಗ್ಗೆ ಚಿಂತಿಸಲಿ ಎಂದರು.

ಸಂಸದ ಪ್ರತಾಪಸಿಂಹ ಮಾತನಾಡಿ, ಮೈಸೂರಿಗೆ ಕ್ಯಾನ್ಸರ್ ಕೇಂದ್ರ ಬೇಕಿತ್ತು. ಯಡಿಯೂರಪ್ಪ ಅವರ ಕಾಲದಲ್ಲಿ ಕಿದ್ವಾಯಿ ವತಿಯಿಂದ 7 ಎಕರೆ ಜಾಗವನ್ನು ಪಿ.ಕೆ.ಟಿಬಿ ಬಳಿ ನೀಡಲಾಗಿದೆ. ಹೆಚ್ಚುವರಿ ಅನುದಾನ ಬಿಡುಗಡೆಗೆ ಪ್ರಯತ್ನಗಳು ನಡೆಯುತ್ತಿದೆ. ಈ ಸಂಬಂಧ ಕಿರಣ್ ಮಜುಂದಾರ್ ಶಾ ಅವರ ಬಳಿ ಈ ಬಗ್ಗೆ ಮಾತುಕತೆ ನಡೆಸಿದ್ದೇನೆ. ಈಗಾಗಲೇ ಕ್ಯಾನ್ಸರ್ ಸೋಂಕಿತರ ಹಾರೈಕೆ ಮಾಡಲು ದಡದಹಳ್ಳಿ ಬಳಿ 18 ಎಕರೆ ಜಾಗ ಮಂಜೂರಾಗಿದೆ ಎಂದರು. ನಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡರೆ ಕ್ಯಾನ್ಸರ್‌ನಿಂದ ದೂರ ಇರಬಹುದು ಎಂದರು

ಪ್ರಾಣಿ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಎನ್. ಹೆಗ್ಡೆ ಮಾತನಾಡಿ, ಅನುವಂಶೀಯ ಗುಣಗಳ ಒಂದು ಪೀಳಿಗೆಗೆಯಿಂದ ಇನ್ನೊಂದು ಪೀಳಿಗೆಗೆ ಹೇಗೆ ಹೋಗುತ್ತದೆ ಎಂದು ಸಂಶೋಧನೆ ಆಗಿದೆ. ಡಿಎನ್‌ ಎ ಬಗ್ಗೆಯೂ ವೈಜ್ಞಾನಿಕ ಸಂಶೋಧನೆ ಆಗಿದೆ. ಹೈಬ್ರೀಡ್ ತಳಿಗಳನ್ನು ಕಂಡು ಹಿಡಿಯಲಾಗಿದೆ. ಮೂಲ ತಳಿಗಳ ಸಂಶೋಧನೆ ಜೀವ ವಿಕಾಸದ ಹಲವು ಪ್ರಶ್ನೆಗೆ ಉತ್ತರ ನೀಡಿದೆ. ಇಂದು ಪುರುಷ ಬಂಜೆತನದ ಬಗ್ಗೆಯೂ ಚರ್ಚೆ ಆಗುತ್ತಿದೆ ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಪ್ರೊ.ಎಂ.ಪುಷ್ಪವತಿ, ಬಿಡುಗಡೆಗೊಳಿಸಿದರು.

ಏನಿದು ಚಾನೆಲ್..?

ಇಂದು ಜಗತ್ತು ಓಡುತ್ತಿದೆ. ನಮ್ಮ ಜೀವನ ಶೈಲಿ ಬದಲಾಗಿದೆ. ಒತ್ತಡದ ಬದುಕು ನಮ್ಮದಾಗಿದೆ. ಗಾಳಿ, ನೀರು, ಕಲುಷಿತಗೊಳ್ಳುತ್ತಿದೆ. ಆಹಾರ ಕಲಬೆರಕೆ ಆಗಿದೆ. ಹೀಗಾಗಿ ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆ ಮನುಷ್ಯನನ್ನು ಕಾಡುತ್ತಿದೆ. ಹೀಗಾಗಿ ಈ ಎಲ್ಲಾ ಕಾಯಿಲೆಗಳ ಬಗ್ಗೆ ಮಾಹಿತಿ ನೀಡುವುದು ಈ ಚಾನಲ್ ಉದ್ದೇಶ. ಈಗಾಗಲೇ 20 ರೆಕಾರ್ಡ್ ಮಾಡಿರುವ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. ನೀಲಿ ನಕ್ಷ ಸಮೇತ ಪ್ರತಿಯೊಂದು ಕಾಯಿಲೆ ಬಗ್ಗೆ ಇದರಲ್ಲಿ ವಿವರಣೆ ಇರಲಿದೆ ಎಂದು ಜೆನೆಟಿಕ್ಸ್ ಆ್ಯಂಡ್ ಜೆನೋಮಿಕ್ಸ್ ವಿಭಾಗದ ಅಧ್ಯಕೆ ಪ್ರೊ.ಎಸ್.ಎಸ್. ಮಾಲಿನಿ ತಿಳಿಸಿದ್ದಾರೆ.

Key words: mysore university-VC- G. Hemanth Kumar-  Prof. S.S. Malini- YouTube -channel

ENGLISH SUMMARY…

Professors research works will get more value when it reaches the society: UoM VC
Mysuru, October 1, 2022 (www.justkannada.in): “Research works of professors will earn more value when it becomes useful and reaches the society,” observed Prof. G. Hemanth Kumar, Vice-Chancellor, University of Mysore.
He participated in a program organized by the Department of Genetics and Genomics, held at the Vignana Bhavana in Manasa Gangotri campus and released the ‘You Tube’ Channel of Prof. S.S. Malini. In his address, he said, “today technology has changed our lives. I am the first batch student of the Department of Computer Science. There was no advanced technology during that time. We used to bring the professors and request them to teach us. We were studying on the over right project. But today, there are several inventions and discoveries like the internet, projector, smart classes, etc. Any research or study will get more value when it reaches the society like these.”
In his address, H.R. Ranganath, Senior Journalist and founder of Public TV expressed his concern on the increase number of cancer cases. “Treatment of cancer is very costly and facilities are not easily accessible, and that is the core of the problem. About two decades ago people used to get scared hearing open heart surgery. But today everything has changed. Technology has made our lives easy. It should also happen in the case of cancer. I will speak about the cancer that has affected the society, let the doctors think about finding out a permanent cure for the other cancer,” he said.
Mysuru-Kodagu MP Pratap Simha said that Mysuru needed a cancer center. “Seven acres land was provided near the PKTB Hospital from the Kidwai institution during Yediyurappa’s time. Now efforts are made to get the required grants. I have also spoken to renowned industrialist Kiran Mazumdar Shaw. Another 18 acres of land has been sanctioned near Dadadahalli for the treatment of cancer patients. We can prevent cancer if we change our food habits,” he added
Sri Shivarathri Deshikendra Mahaswamiji of Suttur Math graced the occasion. Prof. M. Pushpavathi, Director, AIISH released the You Tube channel.
This YouTube channel explains us how everything including air, water, food we eat, etc., have been contaminated. This is leading to deadly diseases like cancer, diabetes, blood pressure, etc. It is the purpose of this channel to provide complete information about such diseases and lifestyle. As of now 20 videos have been uploaded. It has complete details about several diseases,” observed Prof. S.S. Malini, Chairperson, Genetics and Genomics Department.
Keywords: University of Mysore/ Genetics and Genomics/ Prof. S. S. Malini/ YouTube channel