ಮೈಸೂರು, ಜ 26, 2022 : (www.justkannada.in news) ಭಾರತ ಬಲಿಷ್ಠ ಗಣರಾಜ್ಯ ದೇಶವಾಗಲು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಪ್ರದಾನ ಪಾತ್ರ ವಹಿಸಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ವಿಶ್ವಜ್ಞಾನಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವ ನಡಿಗೆ: ಸಾಗಲಿ ಬೌದ್ಧ ಗಣರಾಜ್ಯೋತ್ಸವದ ಕಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತಕ್ಕೆ ಗಣರಾಜ್ಯದ ಪರಿಕಲ್ಪನೆ ಜೊತೆಗೆ ಬುದ್ಧಗುರುವನ್ನು ಮರಳಿ ಈ ದೇಶಕ್ಕೆ ತಂದ ಕೀರ್ತಿ ಡಾ.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಸುಮಾರು ನಾಲ್ಕು ವರ್ಷಗಳ ಅಧ್ಯಯನ ಮಾಡಿ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ. ಗಣರಾಜ್ಯ ವ್ಯವಸ್ಥೆಯಲ್ಲಿ ರಾಷ್ಟ್ರಪತಿಗಳು ದೇಶದ ಮೊದಲ ಪ್ರಜೆಯಾದರೆ, ರಾಜ್ಯಪಾಲರು ರಾಜ್ಯದ ಮೊದಲ ಪ್ರಜೆಯಾಗುತ್ತಾರೆ. ರಾಜಕೀಯ ಸಮಾನತೆಯಿಂದ ಹಿಡಿದು ಸರ್ವ ಸಮಾನತೆಗೂ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿಕೊಟ್ಟರು. ಏಕರೂಪದ ಸಾರ್ವತ್ರಿಕ ಚುನಾವಣೆ ನಡೆಸಲು ಅವಕಾಶ ನೀಡಿದ ಮಹನೀಯ ಎಂದು ಶ್ಲಾಘಿಸಿದರು.
ಸಂವಿಧಾನ ಸೃಷ್ಟಿಕರ್ತರಾದ ಅಂಬೇಡ್ಕರ್ ರಾಜಕೀಯ ಸಮಾನತೆಯಿಂದ ಆರ್ಥಿಕ, ಸಾಮಾಜಿಕ ಸಮಾನತೆಯನ್ನು ಬಹಬೇಗನೆ ಸ್ಥಾಪಿಸುವ ಕಡೆ ಗಣರಾಜ್ಯ ಸಾಗಬೇಕೆಂಬುದು ಅವರ ಉದ್ದೇಶವಾಗಿತ್ತು. ಈ ಉದ್ದೇಶ ಇಂದು ಈಡೇರಿದೆಯಾ ಎಂಬುದನ್ನು ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ತಾಂತ್ರಿಕ, ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಮೈಲಿಕಲ್ಲನ್ನು ಭಾರತ ಸ್ಥಾಪಿಸಿದೆ. ಖಗೋಳ ವಿಜ್ಞಾನದಲ್ಲೂ ತನ್ನ ಅಧಿಪತ್ಯವನ್ನು ಸಾಧಿಸಿದೆ. ಆದರೆ, ಮಾನವೀಯತೆಯಲ್ಲಿ ನಾವೆಲ್ಲ ಎಲ್ಲಿದ್ದೀವಿ ಎಂಬುದನ್ನು ಈ ಕೊರೊನಾ ಸಂದರ್ಭದಲ್ಲಿ ನಾವೆಲ್ಲ ಯೋಚಿಸಬೇಕಿದೆ ಎಂದು ಹೇಳಿದರು.
ಮಾನವನ ದುಷ್ಟಗುಣ ಕೊಲ್ಲುವ ವೈರಾಣುಗಳನ್ನು ಸೃಷ್ಟಿಸುವುದಾದರೆ ಮನುಷ್ಯನ ಉತ್ತಮ ಗುಣ ಅದರಿಂದ ಹೇಗೆ ಪಾರಾಗುವುದು ಹೇಗೆ ಎಂಬ ವಿಜ್ಞಾನ ಹಾಗೂ ಸಾಮಾನ್ಯ ಜ್ಞಾನ ಎಲ್ಲೆಡೆ ವ್ಯಾಪಿಸಬೇಕಿದೆ. ಕುವೆಂಪು ಅವರು ಹೇಳಿದಂತೆ ಮಗು ಹುಟ್ಟುತ್ತಾ ವಿಶ್ವಮಾನವನಾಗುತ್ತದೆ. ಆದರೆ, ಬೆಳೆಯುತ್ತಾ ಅಲ್ಪಮಾನವ ಆಗುತ್ತಾನೆ. ಹಾಗಾಗಿ ಇಂದಿನ ಶಿಕ್ಷಣ ಅಲ್ಪಮಾನವನನ್ನು ವಿಶ್ವಮಾನನಾಗಿ ರೂಪಿಸಬೇಕಿದೆ. ಭಾರತವು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ನಮಗೆ ಬೇಕಿರುವ ಶಾಂತಿಯೆ ಹೊರತು ಹಿಂಸೆಯಲ್ಲ. ಇದನ್ನೇ ಬುದ್ಧ, ಬಸವ. ಅಂಬೇಡ್ಕರ್, ಗಾಂಧಿ ಅವರು ಬಯಸಿದ್ದು. ಅಸಮಾನತೆ ಹೆಚ್ಚಾದಂತೆ ಅಶಾಂತಿ ಹೆಚ್ಚುತ್ತದೆ. ಎಂಬ ಸರಳ ಸತ್ಯವನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕಿದೆ. ಅಲ್ಲದೆ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮಾಹಿತಿ ಪೂರ್ಣ ಉಪನ್ಯಾಸ ಕಾರ‌್ಯಕ್ರಮ ಆಯೋಜಸಿದೆ. ಇದು ಪುಸ್ತಕ ರೂಪದಲ್ಲಿ ಬರಬೇಕು. ಒಂದು ವರ್ಷ ಪ್ರತಿ ಜಿಲ್ಲೆಯಲ್ಲೂ ಉಪನ್ಯಾಸ ಮಾಲಿಕೆ ನಡೆಸಲು ಚಿಂತಿಸಿರುವುದು ಒಳ್ಳೆಯ ಆಲೋಚನೆ ಎಂದರು.
‘ಸಂವಿಧಾನದ ಪೀಠಿಕೆ ಮತ್ತು ಭಾರತ ಪರಿಕಲ್ಪನೆ’ ಎಂಬ ವಿಷಯದ ಕುರಿತು ಸಂಸ್ಕೃತಿ ಚಿಂತಕ ಪ್ರೊ.ರಹಮತ್ ತರೀಕೆರೆ ಅವರು ಮಾತನಾಡಿದರು. ಹಿರಿಯ ರಾಜ್ಯಶಾಸಜ್ಞರಾದ ಪ್ರೊ.ಎಂ.ಉಮಾಪತಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ನಿರ್ದೇಶಕ ಡಾ.ಎಸ್.ನರೇಂದ್ರಕುಮಾರ್ ಹಾಗೂ ಪ್ರೊ.ಜೆ.ಸೋಮಶೇಖರ್ ಸೇರಿದಂತೆ ಇತರರು ಇದ್ದರು.
key words : Mysore-university-vc-hemanth-kumar
ENGLISH SUMMARY….
‘Let the lecture series come out in the form of a book: UoM VC
Mysuru, January 26, 2022 (www.justkannada.in): “The Constitution of India framed by Dr. B.R. Ambedkar has played a vital role for our country to become Republic,” opined Prof. G. Hemanth Kumar, Vice-Chancellor, University of Mysore.
He participated in a program organized by the Dr. B.R. Ambedkar Research and Extension Centre, held at the Vishwagnani auditorium.
In his address, he said, “The credit of bringing Buddha back to India along with the idea of Republic goes to Dr. B.R. Ambedkar. He developed the Constitution of India by researching for four years. In the Republic system, the President is the first citizen of the country, and the governor is the first citizen of a state. Our constitution has provided equality in everything along with political equality. If there is a uniform public election in our country today, it is the contribution of Dr. B.R. Ambedkar,” he said.
Prof. Rahmath Tarikere, Cultural Reformer spoke about the ‘Preamble of Constitution and Idea of India.” Prof. M. Umpathi, Senior Professor of the Political Science Department presided over the program. Dr. S. Narendrakumar, Director of the Center, and Prof. J. Somashekar were present.
Keywords: University of Mysore/ Dr. B.R. Ambedkar Research and Extension Center/ Republic Day program