ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಫೆಬ್ರವರಿ,25,2022(www.justkannada.in): ಯುವ ಸಬಲೀಕರಣವೆಂದರೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸುವುದು. ಸ್ವತಃ ನಿರ್ಧಾರ ತೆಗೆದುಕೊಳ್ಳುವಂತೆ ಪ್ರೇರೇಪಿಸುವುದೇ ಆಗಿದೆ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ.ಎಸ್. ಚಂದ್ರಶೇಖರ ಶೆಟ್ಟಿ ತಿಳಿಸಿದರು.

ಮೈಸೂರು ವಿವಿ ವ್ಯಾಪ್ತಿಗೆ ಒಳಪಡುವ ಯುವರಾಜ ಕಾಲೇಜಿನ (ಸ್ವಾಯತ್ತ) ಅಮೃತ ಮಹೋತ್ಸವ ಸಭಾಂಗಣದಲ್ಲಿ ನಡೆದ 8ನೇ ಪದವಿ ಪ್ರದಾನ ಸಮಾರಂಭದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಚಿನ್ನದ ಪದಕ, ದತ್ತಿ ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ವಿತರಿಸಿದರು.

ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ.ಎಸ್. ಚಂದ್ರಶೇಖರ ಶೆಟ್ಟಿ ಅವರು, ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿನ ಭಾರತ ಅಸಾಧಾರಣ ಸಾಧನೆ ಮಾಡುತ್ತಿದ್ದು, ಚೀನಾ ನಂತರ ಎರಡನೇ ಸ್ಥಾನ ಪಡೆದುಕೊಂಡಿದೆ. ವೈಜ್ಞಾನಿಕ ಮತ್ತು ತಾಂತ್ರಿಕ ಮಾನವಶಕ್ತಿಯ ಬಳಕೆಯಲ್ಲೂ ದೇಶ ಮುಂದಿದೆ. ಭಾರತದ ಸಾಕಷ್ಟು ವಿದ್ಯಾವಂತರು ಅಂತಾರಾಷ್ಟ್ರೀಯ ಮಟ್ಟದ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದರು.

ಭಾರತವು 2021 ರ ಸಮಯದಲ್ಲಿ ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ 46 ನೇ ಸ್ಥಾನದಲ್ಲಿದೆ. ಬ್ಲೂಮ್ಬರ್ಗ್ ಇನ್ನೋವೇಶನ್ ಇಂಡೆಕ್ಸ್ 2021 ರಲ್ಲಿ, ಭಾರತವು ನಾವೀನ್ಯತೆಗಳ ವಿಷಯದಲ್ಲಿ 50 ನೇ ಸ್ಥಾನದಲ್ಲಿದೆ. ವಾಸ್ತವವಾಗಿ, ದಕ್ಷಿಣ ಏಷ್ಯಾದಲ್ಲಿ, ಈ ಸೂಚ್ಯಂಕದಲ್ಲಿ ಪ್ರತಿನಿಧಿಸುವ ಏಕೈಕ ದೇಶ ಭಾರತವಾಗಿದೆ. ಅದೇ ರೀತಿ, ಗ್ಲೋಬಲ್ ಸೈಬರ್ ಸೆಕ್ಯುರಿಟಿ ಇಂಡೆಕ್ಸ್ 2020 ರಲ್ಲಿ ಭಾರತವು 10 ನೇ ಸ್ಥಾನದಲ್ಲಿದೆ. ಪ್ರಪಂಚದಲ್ಲಿ ಭಾರತವು ಐಟಿ ಕ್ಷೇತ್ರಕ್ಕೆ ಶೇ. 40% ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ತಂತ್ರಜ್ಞಾನ ಚಾಲಿತ ಹಸಿರು ಕ್ರಾಂತಿಗಾಗಿ ಸರ್ಕಾರವು ಹೆಚ್ಚು ಹೂಡಿಕೆ ಮಾಡುವುದರೊಂದಿಗೆ ಕೃಷಿ ಕ್ಷೇತ್ರವು ಪುನಶ್ಚೇತನಕ್ಕೆ ಸಹಕಾರಿಯಾಗುತ್ತದೆ. ಭಾರತವು ತಂತ್ರಜ್ಞಾನ ಮತ್ತು ನಾವೀನ್ಯತೆ ಮೂಲಕ ವಿಶ್ವದ ಅಗ್ರ ಐದು ವೈಜ್ಞಾನಿಕ ಶಕ್ತಿಗಳಲ್ಲಿ ಒಂದಾಗುವ ಗುರಿಯನ್ನು ಭಾರತ ಹೊಂದಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2022 ರ ವೇಳೆಗೆ ತನ್ನ ಮೊದಲ ಭಾರತೀಯ ಮಾನವ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ತಿಳಿಸಿದರು.

ಕೋವಿಡ್ ಹೆಚ್ಚಿನ ಶ್ರೀಮಂತ ರಾಷ್ಟ್ರಗಳ ಆರ್ಥಿಕತೆಯನ್ನು ಅಸ್ಥಿರಗೊಳಿಸಿತು, ಭಾರತವು ಅದರ ಪರಿಣಾಮವನ್ನು ಇನ್ನೂ ಉಳಿಸಿಕೊಂಡಿದೆ. ಬಹುಬೇಗನೆ ಆರ್ಥಿಕತೆಯಲ್ಲಿ ಚೇತರಿಕೆ ಕಂಡಿದೆ. ಅಲ್ಲದೆ, ಭಾರತವು ದೊಡ್ಡ ಪ್ರಮಾಣದಲ್ಲಿ ಲಸಿಕೆಗಳ ಉತ್ಪಾದನೆಯಲ್ಲಿ ತನ್ನ ಶಕ್ತಿಯನ್ನು ಜಗತ್ತಿಗೆ ತೋರಿಸಿದೆ. ಇತರ ದೇಶಗಳಿಗೂ ಸಹಾಯ ಮಾಡಿದೆ ಎಂದರು.

ಚಿನ್ನದ ಪದಕ ವಿಜೇತರ ವಿವರ…

ಅನಂತ ಎನ್. ರಾವ್ (1 ಚಿನ್ನದ ಪದಕ, 12 ದತ್ತಿ ಬಹುಮಾನ), ಸುಪ್ರಿಜಾ ಎಂ. ಕೊಡಂಜಾ (1 ಚಿನ್ನದ ಪದಕ, 8 ದತ್ತಿ ಬಹುಮಾನ), ಸಂಜೀವ್ ಭಾರದ್ವಾಜ್ (10 ದತ್ತಿ ಬಹುಮಾನ), ಸ್ನೇಹ ಅಬ್ರಾಹಂ (8 ದತ್ತಿ ಬಹುಮಾನ), ನಿತೀಶ್ ಎ.ಎಸ್., ಶಿವರಾಜ್ ಎಂ., ಗಾಯತ್ರಿ ಪಿ.ಬಿ., ಕಾವೇರಿ ಸಿ.ವಿ., ಜೋಶಿಕಾ ಜಿ., ಮಹಿಮಾ ಎಲ್., ಜಯಶ್ರೀ ಪಿ.ಬಿ., ಉಜ್ವಲ್ ಬಿ.ಆರ್., ರಾಕೇಶ್ ಎಚ್.ಕೆ., ಮಧುಸೂದನ್ ಎಸ್. ತಲಾ ಒಂದು ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಸಮಾರಂಭದಲ್ಲಿ ಪರೀಕ್ಷಾ ನಿಯಂತ್ರಣಾಧಿಕಾರಿ, ಪ್ರಾಂಶುಪಾಲರಾದ ಡಾ.ಬಿ.ಎನ್.ಯಶೋಧ  ಉಪಸ್ಥಿತರಿದ್ದರು.

Key words: mysore-university-VC-Prof G Hemanth Kumar

ENGLISH SUMMARY….

UoM VC distributes gold medals to rank holders
Mysuru, February 25, 2022 (www.justkannada.in): “Youth empowerment means developing self-confidence among the students, encouraging them to take own decisions,” opined Prof. Dr. S. Chandrashekar Shetty, Vice-Chancellor, Adichuchanagiri University.
He participated in the 8th Graduation Day ceremony held at the Platinum Jubilee auditorium at the Yuvaraja College (autonomous) of the University of Mysore, in Mysuru today. Prof. G. Hemanth Kumar, Vice-Chancellor, University of Mysore, distributed gold medals, endowment prizes, and certificates to the rank holders.
In his address, Prof. Dr. S. Chandrashekar Shetty, Vice-Chancellor, Adichuchanagiri University expressed his view that India has made a significant achievement in the higher education sector and China is in second place. “Our country is leading in utilizing the scientific and technical human resources. There are many Indians who are serving at the international level,” he added.
“In the global discover index India was in the 46th place in 2021 and in the 50th place in the world in innovations according to the Bloomberg Innovation Index 2021. In fact, India is the only country in South Asia which is existing in this area. Likewise, India is in 10th place in the Global Cyber Security Index 2020. India is also contributing 40% of the total IT production in the world,” he explained.
“The Govt. of India has been cooperative in rejuvenating the agricultural sector for technology-based green revolution. India has the aim of becoming one of the five best scientific powers in the world through technology and innovations. The Indian Space Research Organisation (ISRO) will start the first-ever human space odyssey probably this year.”
Gold medal achievers
Ananth N. Rao (1 gold, 12 endowment prizes), Suprija M. Kondaja (1 gold medal, 8 endowment prizes), Sanjeev Bhardwaj (10 endowment prizes), Sneha Abraham (8 endowment prizes), Nitish A.S., Shivraj M., Gayathri P.B., Kaveri C.V., Joshika G., Mahima L., Jayashri P.B., Ujwal B.R., Rakesh H.K., Madhusudan S. received one medal each.
Exam Regulating officer and Principal Dr. B.N. Yashoda was present.

Keywords: Yuvaraja College/ Mysuru/ gold medals/ rank holders