ಮೈಸೂರು,ಫೆಬ್ರವರಿ,3,2022(www.justkannada.in): ಸಹಕಾರ ಎನ್ನುವುದು ಎಲ್ಲಾ ಕ್ಷೇತ್ರದಲ್ಲೂ ಇರಲೇಬೇಕಾದ ಒಂದು ಅತ್ಯಮೂಲ್ಯವಾದ ವಿಷಯವಾಗಿದೆ. ಸಹಕಾರ ಎಂಬುದು ಇಲ್ಲದಿದ್ದರೆ ಯಾವುದೇ ಕೆಲಸವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಮತ್ತು ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಹಾಗೂ ಮೈಸೂರು ಜಿಲ್ಲಾ ಸಹಕಾರಿ ಯೂನಿಯನ್ ಸಹಯೋಗದಲ್ಲಿ ನಗರದ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ‘ಸಹಕಾರ ಸಮ್ಮಾನ್’ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು.
ನಮ್ಮ ದೇಶದಲ್ಲಿ ವೇದಕಾಲದಿಂದಲೂ ಸಹಕಾರ ತತ್ವವು ಪ್ರಾರಂಭವಾಗಿದೆ. ಸಹಕಾರ ತತ್ವವು ಭಾರತದ ಕೊಡುಗೆಯಾಗಿ ಸಹಕಾರ ಸಂಘಗಳು ಗ್ರಾಮೀಣ ಮತ್ತು ಕೃಷಿಕರ ಅಭ್ಯುದಯಕ್ಕೆ ಶ್ರೇಷ್ಠವಾದ ಕಾರ್ಯವನ್ನು ನಿರ್ವಹಿಸುತ್ತಿದೆ.
ಸಹಕಾರ ಎಂದರೆ ಎಲ್ಲರೂ ಎಲ್ಲರಿಗಾಗಿ ಎಲ್ಲರಿಗೋಸ್ಕರ ಇರುವುದೇ ಸಹಕಾರ. ವಸ್ತುನಿಷ್ಠ ಹಾಗೂ ನ್ಯಾಯಪರವಾದ ಜನಸಾಮಾನ್ಯರ ಸಂಸ್ಥೆ ಸಹಕಾರಿ ಕ್ಷೇತ್ರವಾಗಿದೆ. ಇಲ್ಲಿ ಜನತೆಗೆ ನಿರಂತರ ಉಪಯೋಗ ನೀಡುವುದು ಸಹಕಾರ ತತ್ವದ ಗುರಿಯಾಗಿದೆ. ನೇರವಾಗಿ ಬಡಜನರಿಗೆ ಅನುಕೂಲವನ್ನು ಮಾಡಿಕೊಡುವುದು ಸಹಕಾರ ಸಂಘಗಳ ಕರ್ತವ್ಯವಾಗಿದೆ. ಭಾರತದಲ್ಲಿ ಮೊಟ್ಟ ಮೊದಲಿಗೆ ಬಂಗಾಳ ಸರ್ಕಾರದ ಬೆಂಬಲ ಮತ್ತು ಸಹಾಯದಿಂದ ಆರಂಭವಾಯಿತು ಎಂದು ವಿವರಿಸಿದರು.
ಕರ್ನಾಟಕದ-ಹಿಂದಿನ ಮೈಸೂರು ರಾಜ್ಯದಲ್ಲಿ ಸಹಕಾರ ಚಳುವಳಿಯು 1905 ರಲ್ಲಿ ಮೈಸೂರು ಸಹಕಾರ ಸಂಘಗಳ ನಿಯಯಮಾವಳಿಗಳನ್ನು ಜಾರಿಮಾಡುವ ಮೂಲಕ ಆರಂಭಗೊಂಡಿತು. ಅಪೆಕ್ಸ್ ಬ್ಯಾಂಕು ಇತರ ಎಲ್ಲಾ ವ್ಯವಸಾಯ ಸಹಕಾರಿ ಸಂಘ-ಬ್ಯಾಂಕುಗಳಿಗೆ ಹಣ ಒದಗಿಸುವ ಏಕೈಕ ಉದ್ದೇಶ ಹೊಂದಿತ್ತು. ಅದು ರಾಜ್ಯದ ಎಲ್ಲಾ ಸಹಕಾರಿ ಸಂಘ ಮೇಲ್ವಿಚಾರಣೆಯ ಅಧಿಕಾರವನ್ನೂ ಹೊಂದಿತ್ತು.
ಸಾಲ ವಿತರಣಾ (ಬ್ಯಾಂಕಿಂಗ್) ಸಹಕಾರ ಸಂಘವು ಬಂಗಾಳದಲ್ಲಿ ದಿ. 25-3-1904ರಂದು ಕರ್ನಾಟಕದ-ಹಿಂದಿನ ಮೈಸೂರು ರಾಜ್ಯದಲ್ಲಿ ಸಹಕಾರ ಚಳುವಳಿಯು 1905 ರಲ್ಲಿ ಮೈಸೂರು ಸಹಕಾರ ಸಂಘಗಳ ನಿಯಯಮಾವಳಿಗಳನ್ನು ಜಾರಿಮಾಡುವ ಮೂಲಕ ಆರಂಭಗೊಂಡಿತು. 1914-15ರ ವೇಳೆಗೆ 725 ಸಹಕಾರ ಸಂಘಗಳಿದ್ದು, ಒಟ್ಟು 56,267 ಸದಸ್ಯರಿದ್ದರು. ರೈತರಿಗೆ ಸಾಲ ಕೊಡಲು ಒಂದು ಕೇಂದ್ರ ಬ್ಯಾಂಕ್ (ಅಪೆಕ್ಸ್ ಬ್ಯಾಂಕ್) ಅಗತ್ಯವಾಗಿತ್ತು. ಈ ಸಹಕಾರ ಬ್ಯಾಂಕುಗಳಿಗೆ ಹಣ ಒದಗಿಸುವ ಸಲುವಾಗಿಯೇ ಒಂದು ಬ್ಯಾಂಕಿನ ಅಗತ್ಯವಿದ್ದು, ಅದಕ್ಕಾಗಿ 1920-22ರಲ್ಲಿ ಲಲ್ಲೂಭಾಯಿ ಸಮಲ್ದಾಸ್ ಅಧ್ಯಕ್ಷತೆಯಲ್ಲಿ ನೇಮಿಸಿದ ಸಮಿತಿಯು ಮೈಸೂರು ಪ್ರಾವಿಜನಲ್ ಕೋ-ಆಪರೇಟಿವ್ ಬ್ಯಾಂಕನ್ನು ಕೇಂದ್ರ ಬ್ಯಾಂಕಾಗಿ ಪರಿವರ್ತಿಸಲು ಮತ್ತು ಬೆಂಗಳೂರು ಪ್ರಾವಿಜನಲ್ ಕೋ-ಆಪರೇಟಿವ್ ಬ್ಯಾಂಕನ್ನು ಅದರಲ್ಲಿ ವಿಲೀನಗೊಳಿಸಲು ಶಿಪಾರಸ್ಸು ಮಾಡಿತು ಎಂದು ಹೇಳಿದರು.
ಜವಳಿ, ರೇಷ್ಮೆ, ಕೈಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ಸಕ್ಕರೆ, ತೋಟಗಾರಿಕೆ, ಸಾಲಸೌಲಭ್ಯ, ಕೃಷಿ ಮತ್ತು ನೀರಾವರಿ ಇತರೆ ವಿಷಯಗಳ ಬಗ್ಗೆ ಹಲವಾರು ಸಹಕಾರ ಸಂಘಗಳು ಸ್ಥಾಪನೆಯಾಗಿವೆ. ಇದರಿಂದ ಎಲ್ಲಾ ವರ್ಗದ ಜನತೆಗೂ ಅನುಕೂಲವಾಗುತ್ತಿದೆ. ಸಹಕಾರ ಸಂಸ್ಥೆಗಳ ಪ್ರವರ್ದಮಾನಕ್ಕಾಗಿ ಅವುಗಳ ಅರ್ಥ ವ್ಯವಸ್ಥೆಯಲ್ಲಿ ರಾಜ್ಯವು ಭಾಗವಹಿಸುವುದನ್ನು ಸರಕಾರವು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಅಖಂಡ ಭಾಗವಾಗಿ ಸೇರ್ಪಡೆ ಮಾಡಿತು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಜಿ.ಟಿ.ದೇವೇಗೌಡ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಸೇರಿದಂತೆ ಇತರರು ಇದ್ದರು.
Key words: mysore university-VC-Prof.G.Hemanth Kumar- Cooperation
ENGLISH SUMMARY….
Cooperation is important in all areas: UoM VC
Mysuru, February 3, 2022 (www.justkannada.in): “Cooperation is an essential factor in all areas and is very important. Any work cannot be completed without cooperation,” opined Prof. G. Hemanth Kumar, Vice-Chancellor, University of Mysore.
He participated in the ‘Sahakaara Samman,’ a program organized by the Mysuru-Chamarajangara District Cooperative Central Bank, Karnataka State Cooperative Board Ltd., Bengaluru and Mysuru District Milk Producers’ Associations Federation, and the Mysuru District Cooperative Union, held at the Rani Bahaddur Auditorium in Manasagangotri campus, to give away awards to the Agricultural Cooperative Societies. He released the souvenir on the occasion.
In his address, he said, “In our country, the cooperative sector exists from ancient times. The cooperative societies are contributing excellently to the development of rural and agricultural sectors. The meaning of cooperation is everyone and for all. The cooperative sector is subjective and a justified common people’s sector. Extending constant help is the basic principle and aim of this sector. Providing direct advantage to the poor is the duty of the cooperative sector.”
District In-charge Minister S.T. Somashekar, MLA G.T. Devegowda, MUDA Chairman H.V. Rajeev, MDCC Bank Chairman G.D. Harish, and others were present.
Keywords: Cooperative Sector/ University of Mysore/ Prof. G. Hemanth Kumar