ಮೈಸೂರು,ಅಕ್ಟೋಬರ್,7,2021(www.justkannada.in): ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ.ಈ.ಸಿ. ನಿಂಗರಾಜ್ ಗೌಡ ಅವರು ನೋಂದಣಿ ಕಾರ್ಯವನ್ನು ಪ್ರಾರಂಭಿಸಿದ್ದು, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಅವರು ಅರ್ಜಿಯನ್ನು ಭರ್ತಿ ಮಾಡುವ ಮೂಲಕಯಾಗಿ ಶುಭ ಹಾರೈಸಿದರು.
ನಂತರ ಮಾತನಾಡಿದ ಅವರು, ಕಳೆದ 25 ವರ್ಷದಿಂದ ಡಾ.ಈ.ಸಿ. ನಿಂಗರಾಜ್ ಗೌಡ ಅವರು ನನಗೆ ಚಿರಪರಿಚಿತರು. ಪ್ರಸ್ತುತ ನಮ್ಮ ವಿವಿಯ ಸಿಂಡಿಕೇಟ್ ಸದಸ್ಯರಾಗಿ ಹತ್ತಾರು ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದೀಗ ಇವರು ದಕ್ಷಿಣ ಪದವೀಧರರ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಒಳ್ಳೆಯ ಸೇವೆ ಮಾಡುವ ವಿಶ್ವಾಸವಿದೆ. ಇವರ ಗೆಲುವಿಗೆ ನನ್ನ ಹಾಗೂ ವಿವಿ ಕಡೆಯಿಂದ ಶುಭ ಹಾರೈಸುತ್ತಿದ್ದೇನೆ. ನನ್ನ ಸ್ನೇಹಿತರಿಗೂ ನೋಂದಣಿ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಹಾಗೂ ನಿಂಗರಾಜ್ ಗೌಡ ಅವರಿಗೆ ಮೊದಲ ಪ್ರಾಶಸ್ತ್ಯ ನೀಡುವಂತೆ ತಿಳಿಸುತ್ತೇನೆ ಎಂದರು.
ಇದೇ ವೇಳೆಯಲ್ಲಿ ಕುಲಸಚಿವ ಪ್ರೊ.ಆರ್. ಶಿವಪ್ಪ, ಉಪ ಕುಲಸಚಿವ ಡಾ.ಬಸಪ್ಪ ಅವರೂ ಸಹ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ನೋಂದಣಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಟಿ.ಬಿ.ಮೃತ್ಯುಂಜಯ, ವಿದ್ಯಾ ವಾಚಸ್ಪತಿ ಡಾ. ಎಚ್.ಪಿ.ಮೋಹನ ಕುಮಾರ ಶಾಸಿ, ಎಂ.ಎಸ್ ಉಮಾಶಂಕರ ಆರಾಧ್ಯ, ಎಚ್.ವಿನೋದ್, ಡಾ.ಎಸ್. ಶಶಿಕುಮಾರ್, ಬಿ.ಕೆ. ಸುಪ್ರೀತ್, ಎಂ.ಸಿ.ರಾಹುಲ್, ಎನ್. ಮಂಜುನಾಥ್, ಅನಿಲ್, ಮಧು, ರಾಕೇಶ್ , ಸಂಶೋಧನಾ ವಿದ್ಯಾರ್ಥಿ ಶಿವಶಂಕರ್, ನೀಲಪ್ಪ ದೇಸಾಯಿ, ವಿಶ್ವಮಾನವ ನೌಕರರ ಅಧ್ಯಕ್ಷರಾದ ವಾಸುದೇವ ಮತ್ತಿತರರು ಉಪಸ್ಥಿತರಿದ್ದರು.
ತದನಂತರ ಮೈಸೂರು ವಿಶ್ವವಿದ್ಯಾನಿಲಯದ ಆಡಳಿತ ಕಚೇರಿಯಾದ ಕ್ರಾಫರ್ಡ್ ಹಾಲ್, ಮಹಾರಾಜ ಕಾಲೇಜು, ಯುವರಾಜ ಕಾಲೇಜು, ಮಾನಸಗಂಗೋತ್ರಿಯ ಎಲ್ಲಾ ವಿಭಾಗಗಳಲ್ಲಿ ನೋಂದಣಿ ಮಾಡಿಸಲಾಯಿತು.
Key words: mysore university- VC-Prof G Hemanth Kumar –wishes- Dr. E.C. ningarajugowda
ENGLISH SUMMARY…
UoM VC wishes Dr. E.C. Ningaraj Gowda
Mysuru, October 7, 2021 (www.justkannada.in): Prof. G. Hemanth Kumar, Vice-Chancellor, University of Mysore today wished University Syndicate member Dr. E.C. Ningaraj Gowda, who is contesting on a BJP ticket from the South Graduates’ constituency, by filling the registration form.
“I know Dr. E.C. Ningaraj for 25 years. He has done several good works as the University of Mysore syndicate member. He is contesting in the South Graduates’ Constituency. I believe that he intends to do good work for the cause of the students and lecturers. I wholeheartedly wish him the best of luck on behalf of the University of Mysore. I will also ask my friends to involve in the registration process and give first preference to Ningaraj Gowda,” he said.
Prof. R. Shivappa, Registrar, UoM, Dr. Basappa also participated in the registration process.
Dr. T.B. Mrutyunjaya, Vidyavachaspati Dr. H.P. Mohan Kumar Shastri, M.S. Umashankar Aradhya, H. Vinod, Dr. S. Shashikumar, B.K. Supreet, M.C. Rahul, N. Manjunath, Anil, Madhu, Rakesh, Research student Shivashankar, Neelappa Desai, Vishwamanava Nourkarara Sangha President Vasudeva, and others were present.
Keywords: South Graduates’ Constituency/ University of Mysore/ Dr. E.C.Ningaraj/ UoM VC wishes