ಮೈಸೂರು,ಅಕ್ಟೋಬರ್,27,2020(www.justkannada.in): ಸಾವಿರಾರು ಓಲೆಗರಿಗಳ ಸಂಗ್ರಹಣೆಯಲ್ಲಿ ಪರಿಣಿತವಾಗಿರುವ ಪ್ರಾಚ್ಯಾವಿದ್ಯಾ ಸಂಶೋಧನಾಲಯ, ತಾಳೆ ಗರಿಗಳ ಜ್ಞಾನವನ್ನು ಪುಸ್ತಕ ರೂಪವಾಗಿ ಹೊರತಂದಿದ್ದು, ಈ ಮೂರು ಪುಸ್ತಕಗಳನ್ನ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಲೋಕಾರ್ಪಣೆ ಮಾಡಿದರು.
ಪ್ರಾಚ್ಯಾವಿದ್ಯಾ ಸಂಶೋಧನಾಲಯ ಹೊರತಂದಿರುವ ಎಸ್. ಜಗನ್ನಾಥ್ ರ ಮನುಶಾಸ್ತ್ರವಿವರಣಂ, ಡಾ. ವೈ.ಸಿ. ಭಾನುಮತಿಯವರ ಖಡ್ಗಶಾಸ್ತ್ರ ಹಾಗೂ ಪಿ. ಗೌರಿ ಶ್ರೀಮತ್ಕೃಷ್ಣರಾಜಗುಣಾಲೋಕ ಪುಸ್ತಕಗಳನ್ನ ಬಿಡುಗಡೆ ಮಾಡಲಾಯಿತು.
ವಿವಿಯ ಕಾರ್ಯಸೌಧ ಕ್ರಾಫರ್ಡ್ ಹಾಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮೈಸೂರು ವಿವಿ ಕುಲಪತಿ ಜಿ.ಹೇಮಂತ್ ಕುಮಾರ್ ಮೂರು ಪುಸ್ತಕಗಳನ್ನ ಲೋಕಾರ್ಪಣೆ ಮಾಡಿದರು. ಪ್ರಾಚ್ಯಾವಿದ್ಯಾ ಸಂಶೋಧನಾಲಯವು, ವಿವಿ ಪ್ರಕಟಣಾ ವಿಭಾಗ ಪ್ರಸಾರಂಗದೊಂದಿಗೆ ಈ ಮೂರು ಕೃತಿಗಳನ್ನು ಹೊರತಂದಿದೆ.
ಇನ್ನು ಗ್ರಂಥ ಬಿಡುಗಡೆ ಸಮಾರಂಭದಲ್ಲಿ ವಿವಿ ಕುಲಸಚಿವ ಪ್ರೊ. ಆರ್. ಶಿವಪ್ಪ, ಪ್ರಾಚ್ಯವಿದ್ಯಾ ಸಂಶೋಧನಾಲಯ ನಿರ್ದೇಶಕ ಎಸ್.ಶಿವರಾಜಪ್ಪ ಉಪಸ್ಥಿತರಿದ್ದರು.
Key words: mysore university-VC- Prof. Hemanth Kumar-release- three books- published – Archaeological University.