ಮೈಸೂರು, ಆ.10, 2021 : (www.justkannada.in news) ಬಸವ, ಅಂಬೇಡ್ಕರ್ ಅವರು ಭಾರತದ ಸಮ ಸಮಾಜದ ಶಿಲ್ಪಿಗಳು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಹೇಳಿದರು.
ಮಹಾರಾಜ ಕಾಲೇಜು, ಸಮಾಜ ಶಾಸ ವಿಭಾಗದಿಂದ ‘ಬಸವೇಶ್ವರ ಮತ್ತು ಅಂಬೇಡ್ಕರ್: ಭಾರತ ಸಮಾಜದ ಶಿಲ್ಪಿಗಳು’ ಎಂಬುದರ ಕುರಿತು ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ವೆಬಿನಾರ್ ಉದ್ಘಾಟಿಸಿ ಮಾತನಾಡಿದ ಅವರು, ಅಧರ್ಮ ಮೇಲುಗೈ ಸಾಧಿಸಿದಾಗ ದೇವರು ಅವತಾರ ಪುರುಷನಾಗಿ ಕಾಣಿಸಿಕೊಂಡು ಧರ್ಮ(ನ್ಯಾಯ) ಸ್ಥಾಪನೆ ಮಾಡುತ್ತೇನೆ ಎಂಬ ನಂಬಿಕೆ ಇದೆ. 12ನೇ ಶತಮಾನದಲ್ಲಿ ಬಸವೇಶ್ವರ ಮತ್ತು 19ನೇ ಶತಮಾನದದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದಿನ ದಲಿತರನ್ನು ಶೋಷಣೆಯಿಂದ ವಿಮೋಚನೆಗೊಳಿಸಲು, ಅಜ್ಞಾನ ಮತ್ತು ಮೂಢನಂಬಿಕೆಯಿಂದ ಮುಳಗಿದ್ದ ಸಮಾಜ ಸುಧಾಕರಾಗಿ ಕಾಣಿಸಿಕೊಂಡರು ಎಂದರು.
ಕ್ರಾಂತಿಕಾರಿ ಪ್ರವಾದಿ ಬಸವೇಶ್ವರರು ಸಮಾಜದ ಶ್ರೇಣಿಕೃತ ವ್ಯವಸ್ಥೆಯ ಉನ್ನತ ವರ್ಗದಲ್ಲಿ ಜನಿಸಿ ಕಳಚೂರಿ ದೊರೆ ಬಿಜ್ಜಳನ ಆ ಸ್ಥಾನದಲ್ಲಿ ಭಂಡಾರಿ ಹುದ್ದೆ ಅಲಂಕರಿಸಿದರು. ಮತ್ತೊಂದೆಡೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಶೋಷಿತ ಸಮುದಾಯದಲ್ಲಿ ಜನಿಸಿ ಕಠಿಣ ಪರಿಶ್ರಮ, ಛಲದಿಂದ ಶೈಕ್ಷಣಿಕ ಶ್ರೇಷ್ಠತೆ ಗಳಿಸಿ ಭಾರತ ಸಂವಿಧಾನದ ಶಿಲ್ಪಿಯಾದರು. ಆದರೆ, ಇವರಿಬ್ಬರ ಸಮಾಜದ ಹಿನ್ನೆಲೆ ಹಾಗೂ ವೃತ್ತಿ ಜೀವನದಲ್ಲಿ ಅನೇಕ ಸವಾಲುಗಳು ಹಾಗೂ ಅವಮಾನ ಎದುರಿಸಿದರು. ವಿಭಿನ್ನ ಯುಗ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ ಸೇರಿದ್ದರೂ ಇಬ್ಬರ ಗುರಿ ಒಂದೇ ಆಗಿತ್ತು.
ತುಳಿತಕೊಳ್ಳಗಾದ ಮತ್ತು ಧ್ವನಿ ಇಲ್ಲದ ಸಮುದಾಯಗಳಿಗೆ ದನಿಯಾದರು. ಅಸಮಾನತೆಯನ್ನು ತೊಡೆದು ಹಾಕಿ, ಅಂತಹ ಸಮುದಾಯಗಳನ್ನು ಸುಧಾರಣೆ ಮಾಡಿದರು. ಈ ಮೂಲಕ ಭಾರತದಲ್ಲಿ ಸಮಾನತೆ ಮತ್ತು ಸಮ ಸಮಾಜದ ನಿಮಾತೃಗಳಾದರು ಎಂದು ಬಣ್ಣಿಸಿದರು.
ಬಸವ ಮತ್ತು ಅಂಬೇಡ್ಕರ್ ಅವರ ಸಮಾಜ ಸುಧಾರಣೆ ಮತ್ತು ಪ್ರಯತ್ನದಿಂದಾಗಿ ಭಾರತ ಸಮಾಜದ ಸಾಕಷ್ಟು ಸುಧಾರಿಸಿದ್ದರೂ. ಇನ್ನೂ ಅಸಮಾಜತೆ, ಅಸ್ಪೃಶ್ಯತೆ ಆಚರಣೆ ಇರುವುದು ದೃರಷ್ಟಕರ. ಸಮ ಸಮಾಜ ನಿರ್ಮಾಣ ಅಭಿವೃದ್ಧಿಯ ಅಂತಿಮ ಗುರಿಯಾಗಿದೆ. ಇದಕ್ಕಾಗಿ ಪೂರಕವಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಸಮತವಾದವು ಜನರಲ್ಲಿ ಸಮಾನತೆಯನ್ನು ತರುತ್ತದೆ. ತಾರತಮ್ಯವಿಲ್ಲದೆ ಎಲ್ಲರಿಗೂ ನ್ಯಾಯ ಸಿಗಬೇಕು. ಎಲ್ಲರಿಗೂ ಸಮಾನ ಅವಕಾಶಗಳನ್ನು ಸೃಷ್ಟಿಸುವುದು. ಅಂತಹ ವ್ಯವಸ್ಥೆಯನ್ನು ರಚಿಸಿದಾಗ ಇದು ನ್ಯಾಯಯುತ ವ್ಯವಸ್ಥೆಯನ್ನು ಖಾತ್ರಿಪಡಿಸುತ್ತದೆ. ರಾಜ್ಯದ ನೀತಿಗಳು ಮತ್ತು ಕಾರ್ಯಗಳಲ್ಲಿ ಜನರು ಸಮಾನ ಅವಕಾಶ ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು.
ಸಮಾನತೆ (ಸಮತವಾದ) ಶಿಕ್ಷಣವನ್ನು ಪ್ರಾಥಾಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆವಿಗೂ ನೀಡಬೇಕು, ಮಹಿಳಾ ಸಬಲೀಕರಣದ ಜೊತೆಗೆ ಅವರು ನಾಯಕತ್ವ ವಹಿಸಿಕೊಳ್ಳಲು ಸೂಕ್ತ ತರಬೇತಿ ನೀಡಬೇಕು, ಎಲ್ಲಿ, ಯಾವ ರೀತಿಯಲ್ಲಿದರೂ ಅಸ್ಪೃಶ್ಯತೆ ಆಚರಣೆ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಕಠಿಣ ಸಂದೇಶ ಸಾರಬೇಕು. ಸಮ ಸಮಾಜ ಆಚರಣೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪುಣೆ ಫಾಮರ್ಸಿ ಕಾಲೇಜಿನ ಪ್ರಾಂಶುಪಾಲ ಡಾ. ಶಶಿಕಾಂತ್ ಪಟ್ಟಾಣ್ ಮಾತನಾಡಿ, ಯಾರೂ ಊಹಿಸಿದ ಕಾಲವಾದ 12ನೇ ಶತಮಾನದಲ್ಲಿ ಬಸವಣ್ಣನವರು ಪಾರ್ಲಿಮೆಂಟ್ ವ್ಯವಸ್ಥೆ ಬಗ್ಗೆ ಚಿಂತಿಸಿದ್ದರು. ಪಾಶ್ಚಿಮಾತ್ಯದ ಪ್ರಜಾಪ್ರಭುತ್ವದ ಚಿಂತಕರು ಬಸವಣ್ಣನವರನ್ನು ಪಾರ್ಲಿಮೆಂಟಿನ ಶಿಲ್ಪಿಗಳೆಂದು ಕರೆದಿದ್ದಾರೆ. ಅನುಭವ ಮಂಟಪದ ಮೂಲಕ ಮಹಿಳೆಯರು ಸೇರಿದಂತೆ ಎಲ್ಲರನ್ನೂ ಒಂದೆಡೆ ಸೇರುವಂತೆ ಮಾಡಿದರು. ಸಮಾಜನತೆ ಬಗ್ಗೆ ಇವರ ಒಲವು ಇತ್ತು. ಸ್ವೇಚ್ಛಾಚಾರವನ್ನು ಒಪ್ಪುತ್ತಿರಲಿಲ್ಲ ಎಂದು ಹೇಳಿದರು.
ವಿಶ್ರಾಂತ ಕುಲಪತಿ ಪ್ರೊ.ಜಗನ್ ಶಂಕರ್ ಪ್ರಸ್ತಾವಿಕವಾಗಿ ಮಾತನಾಡಿದರು. ಮಹಾರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಅನಿಟಾ ವಿಮ್ಲ ಬ್ರಾಗ್ಸ್, ವೆಬಿನಾರ್ ಸಂಯೋಜಕಿ ಡಾ.ರೇಖಾ ಜಾಧವ್, ಸಹಕಾರ ವಿಭಾಗದ ಪ್ರೊ.ಚಂದ್ರಶೇಖರ್, ಐಕ್ಯೂಎಸಿ ಸಂಯೋಜಕ ಡಾ.ಆರ್.ತಿಮ್ಮರಾಯಪ್ಪ, ಸಮಾಜ ಶಾಸ ವಿಭಾಗದ ಉಪನ್ಯಾಸಕ ದೇವರಾಜ ಸೇರಿದಂತೆ ಇನ್ನಿತರರು ಇದ್ದರು.
ENGLISH SUMMARY….
Basava, Ambedkar are architects of equal society: UoM VC
Mysuru, August 10, 2021 (www.justkannada.in): “Basavanna and Ambedkar are architects of an equal society,” opined Prof. G. Hemanth Kumar, Vice-Chancellor, University of Mysore.
He inaugurated the two-day National webinar on the topic, “Basaveshwara and Ambedkar: Architects of Equal Society of India,” organized by the Social Science Department, Maharaja College. In his address, he explained that he believes that god will reincarnate to provide justice whenever there is an attack on Dharma (justice). “Likewise, Basaveshwara in the 12th Century and Dr. Babasaheb Amedkar in the 19th Century took birth to fight against untouchability, exploitation of Dalits, and reform the society that was overflowing with ignorance and superstitions,” he said.
Dr. Shashikanth Pattan, Principal, Pune Pharmacy College, participated as the resource person. In his address, he informed that Basavanna had contemplated the parliament system as long ago as the 12th Century. “Western Democratic reformers have mentioned Basavanna as the architect of Parliament. He was the person who fought for the equality of women through Anubhava Mantapa. He had a vision and love for equality in society,” he added.
Keywords: Two-day National Webinar/ University of Mysore/ Maharaja College/ Prof. G. Hemanth Kumar/ Basava-Ambedkar
key words : Mysore-university-webinar-vc-hemanth.kumar- maharajah-college-mysore