ಮೈಸೂರು, ಆ.20, 2021 : (www.justkannada.in news) ಮೈಸೂರು ವಿಶ್ವವಿದ್ಯಾಲಯದ ವಿವಿಧ ನೂತನ ಕಟ್ಟಡಗಳು ಹಾಗೂ ಯೋಜನೆಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಶುಕ್ರವಾರ ಚಾಲನೆ ನೀಡಿದರು. ಇದೇ ವೇಳೆ ಮೈಸೂರು ವಿವಿಯ ‘ವರ್ಚುವಲ್ ಟೂರ್ ‘ ಅನ್ನು ಲೋಕಾರ್ಪಣೆ ಮಾಡಿದರು.
ಮೊದಲಿಗೆ ಸಚಿವರು ಸಂಶೋಧನಾ ವಿದ್ಯಾರ್ಥಿಗಳ ನೂತನ ವಸತಿ ನಿಲಯ ಹಾಗೂ ಗಣಕ ಅಧ್ಯಯನ ವಿಭಾಗದ ಎರಡನೇ ಮಹಡಿ ‘ ಸೆಂಟರ್ ಆಫ್ ಎಕ್ಸಲೆನ್ಸ್ ‘ ಅನ್ನು ಉದ್ಘಾಟಿಸಿದರು. ನಂತರ ಕೇಂದ್ರ ಸರ್ಕಾರದ ರೂಸಾ ಯೋಜನೆಯಡಿ ರೂಪಿಸಿರುವ ಕೆರೆಯರ್ ಹಬ್ ಹಾಗೂ ಮೈಸೂರು ವಿವಿಯ ಸಮುದಾಯ ಬಾನುಲಿ ‘ರೇಡಿಯೋ ಮಾನಸ’ಗೆ ಚಾಲನೆ ನೀಡಿದರು.
ಇದೇ ವೇಳೆ ಹಾಸನ ಸ್ನಾತಕೋತ್ತರ ಕೇಂದ್ರದ ನೂತನ ಶೈಕ್ಷಣಿಕ ಭವನ, ಯುವರಾಜ ಕಾಲೇಜಿನ ರೂಸಾ 2.0 ಅನುದಾನದ ಅಡಿಯಲ್ಲಿ ನಿರ್ಮಿಸಲಾದ ನೂತನ ಕಟ್ಟಡ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ನೂತನ ಘಟಕ ಕಾಲೇಜುಗಳ ಆರಂಭಕ್ಕೆ ಆನ್ ಲೈನ್ ಮೂಲಕ ಚಾಲನೆ ನೀಡಿದರು.
ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಸುರಕ್ಷತೆಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಒಟ್ಟು 72 ಸಿಸಿ ಕ್ಯಾಮರಾಗಳಿದ್ದು, ಹೊರಗಿನವರೂ ಬಂದರೂ ಪ್ರವೇಶ ಹಾಗೂ ಎಕ್ಸಿಟ್ ನಿಗಾ ವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ನಂತರ ಕೆರಿಯರ್ ಹಬ್‌ನಲ್ಲಿ ವಿದ್ಯಾರ್ಥಿಗಳೇ ಸಿದ್ಧಪಡಿಸಿದ ಡಿಜಿಟಲ್ ಸಾಕ್ಷ್ಯಚಿತ್ರ ವನ್ನು ಡಾ.ಅಶ್ವತ್ಥ ನಾರಾಯಣ ಅವರು ವೀಕ್ಷಿಸಿದರು.
ವರ್ಚುವಲ್ ಟೂರ್ :
ಕೋವಿಡ್ ಸಂಕಷ್ಢ ಕಾಲದಲ್ಲಿ ವಿಶ್ವವಿದ್ಯಾನಿಲಯದ ಬಗ್ಗೆ ಹೆಚ್ಚು ಮಾಹಿತಿ ಹಾಗೂ ಪ್ರಚಾರ ನೀಡುವ ಸಲುವಾಗಿ ಇದೇ ಮೊದಲ ಬಾರಿಗೆ ಆನ್ ಲೈನ್ ಮೂಲಕವೇ ವಿವಿಯ ಕ್ಯಾಂಪಸ್ ಬಗ್ಗೆ ಸಮಗ್ರ ಮಾಹಿತಿ ನೀಡುವ ‘ ವರ್ಚುವಲ್ ಟೂರ್ ‘ಗೆ ಸಚಿವ ಡಾ.ಅಶ್ವಥ್ ನಾರಾಯಣ್ ಚಾಲನೆ ನೀಡಿದರು.
ಮೈಸೂರಿನವರೇ ಆದ, ‘ ಸಾಫ್ಟ್ ವೇರ್ ಗುರು’ ಸಂಸ್ಥೆಯ ಸಂಜಯ್ ಅಹುಜಾ ಈ ವರ್ಚುವಲ್ ಟೂರ್ ಅಭಿವೃದ್ಧಿ ಪಡಿಸಿದ್ದು, ದಶಕಗಳ ಹಿಂದೆಯೇ ‘ ಮೈಸೂರು ಅರಮನೆಯ ವರ್ಚುವಲ್ ಟೂರ್’ ಅಭಿವೃದ್ಧಿ ಪಡಿಸುವ ಮೂಲಕ ಈ ಕ್ಷೇತ್ರದಲ್ಲಿ ಹೆಸರುಗಳಿಸಿದ್ದರು. ಇದೀಗ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ವರ್ಚುವಲ್ ಟೂರ್ ಮೂಲಕ ಮತ್ತೊಂದು ಹೊಸ ಮೆರಗು ನೀಡಿದ್ದಾರೆ ಸಂಜಯ್.
ಸಮಾರಂಭದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಮೈವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್ ಇನ್ನಿತರರು ಉಪಸ್ಥಿತರಿದ್ದರು.
ENGLISH SUMMARY…
Minister Dr. C.N. Ashwathanarayana inaugurates new buildings and launches online ‘Virtual Tour’ of UoM
Mysuru, August 20, 2021 (www.justkannada.in): Higher Education Minister Dr. C.N. Ashwathanarayana today inaugurated several new buildings of the University of Mysore and launched several new programs. He also launched the ‘Virtual Tour,’ on the occasion.
First, he inaugurated the Research students, new hostel building and the Center of Excellence, located on the second floor of the Computer Studies section. After that, he launched the ‘Radio Manasa,’ community radio of the University of Mysore, and the ‘Career Hub,’ formed under the Rashtriya Uchchatar Shiksha Abhiyan program (RUSA), of Govt. of India.
Speaking on the occasion, Prof. G. Hemanth Kumar, Vice-Chancellor, University of Mysore explained that CCTV cameras were installed to ensure the safety of the students. “There are totally 72 cameras in order to keep a keen eye on the people who enter and exit and to watch the activities,” he informed.
Dr. Ashwathanarayana watched the digital documentary prepared by the students at the Career Hub. He also launched the ‘Virtual Tour’ that provides complete details of the University campus online introduced for the first time by the University.
MP Pratap Simha, MLA L. Nagendra, Prof. R. Shivappa, Registrar, UoM, Prof. A.P. Jnanaprakash, Registrar (Exams), and others were present.
Keywords: Higher Education Minister/ Dr. C.N. Ashwathnarayana/ University of Mysore/ inauguration/ Virtual Tour
key words : mysore-univesrity-carrier-hub-virtual-tour-vc