ಮೈಸೂರು, ಮೇ 27, 2020 : (www.justkannada.in news) : ಮೈಸೂರು ವಿಶ್ವವಿದ್ಯಾನಿಲಯದ ಬೋಧಕ ವೃಂದದ ಬ್ಯಾಕ್ ಲಾಗ್ , ಹೈದ್ರಬಾದ್ ಕರ್ನಾಟಕ ಮತ್ತು ಹಾಲಿ ಖಾಲಿ ಉಳಿದಿರುವ ಎಲ್ಲಾ ಹುದ್ದೆಗಳ ಭರ್ತಿಗೆ ಸಿಂಡಿಕೇಟ್ ಸಭೆ ತೀರ್ಮಾನಿಸಿದೆ.
2019 ರ ಮೇ 30 ರಂದು ನಡೆದ ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ಬೋಧಕ ವೃಂದದ ಬ್ಯಾಕ್ ಲಾಗ್ , ಹೈದ್ರಬಾದ್ ಕರ್ನಾಟಕ ಮತ್ತು ಹಾಲಿ ಖಾಲಿ ಹುದ್ದೆಗಳ ಭರ್ತಿಗೆ ಸಿಂಡಿಕೇಟ್ ಸಭೆ ತೀರ್ಮಾನಿಸಿತ್ತು. ಇಂದು ನಡೆದ ಸಭೆಯಲ್ಲಿ 2020 ರ ಮೇ 31 ರ ವರೆಗೆ ಖಾಲಿ ಯಾಗುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಲಾಗಿದೆ ಎಂದು ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ತಿಳಿಸಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಹುದ್ದೆ ನೇಮಕ ಮಾಡಿಕೊಳ್ಳಲು ವಿವಿಯ ಸ್ಟ್ಯಾಚೂಟ್ ಗೆ ಅಗತ್ಯ ತಿದ್ದುಪಡಿ ಮಾಡುವುದು, ಈ ಹಿಂದೆ ತೀರ್ಮಾನಿಸಿದ್ದಂತೆ ಒಂದು ಹುದ್ದೆಗೆ ಮೂರು ಮಂದಿ ಬದಲು, 1 : 10 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲು ಸಹ ತೀರ್ಮಾನಿಸಿ ಸರಕಾರಕ್ಕೆ ಶಿಫಾರಸ್ಸು ಮಾಡಲಾಯಿತು.
ನೇಮಕಕ್ಕೆ ಅನುಮೋದನೆ:
ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕರಾಗಿ ಪ್ರೊ.ಎಂ.ಜಿ.ಮಂಜುನಾಥ್ ಹಾಗೂ ಮೈಸೂರು ವಿವಿ ಪ್ರಸರಾಂಗ ನಿರ್ದೇಶಕರಾಗಿ ಪ್ರೊ.ವಿಜಯಕುಮಾರಿ ಎಸ್.ಕರಿಕಲ್ ಅವರನ್ನು ನೇಮಕ ಮಾಡಲು ಸಿಂಡಿಕೇಟ್ ಸಭೆ ಅನುಮೋದನೆ ನೀಡಿತು.
key words : Mysore-uom-syndicate-meeting-backlog-appointment-green-signal